Wednesday, September 11, 2024

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ : ಬಿಜೆಪಿಯ ಬೃಹತ್‌ ಬೈಕ್ ರ್‍ಯಾಲಿ | ದೇಶಕ್ಕೆ ಮೋದಿ, ಉಡುಪಿ ಚಿಕ್ಕಮಗಳೂರಿಗೆ ಕೋಟ : ಅಣ್ಣಾಮಲೈ

ಜನಪ್ರತಿನಿಧಿ (ಕುಂದಾಪುರ) : ʼಮೋದಿ ಮತ್ತೊಮ್ಮೆ’, ʼಜೈ ಶ್ರೀರಾಮ್‌ʼ, ʼಜೈ ಮೋದಿʼ ಘೋಷಣೆಗಳ ಮೂಲಕ ಬೃಹತ್ ಬೈಕ್ ರ್‍ಯಾಲಿ ಮೂಲಕ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಪ್ರಚಾರವನ್ನು ಇಂದು(ಮಂಗಳವಾರ) ನಡೆಸಿತು.

ಮಾಬುಕಳ ವೃತ್ತದಿಂದ ಮೊದಲ್ಗೊಂಡ ಬಿಜೆಪಿಯ  ಬೈಕ್ ರ್‍ಯಾಲಿ ಕುಂದಾಪುರವನ್ನು ಪ್ರೇಶಿಸುವುದರ ಮೂಲಕ ಬಿಜೆಪಿಯ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ಮತಯಾಚನೆ ಮಾಡಲಾಯಿತು.

ಬಿಜೆಪಿ (ಎನ್‌ಡಿಎ ಮೈತ್ರಿಕೂಟದ) ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ  ಅವರನ್ನು ಬಹುದೊಡ್ಡ ಮತಗಳ ಅಂತರದಿಂದ ಗೆಲ್ಲಿಸಿಬೇಕೆಂದು ಬೈಕ್ ರ್‍ಯಾಲಿ ಮೂಲಕ ಜನರಲ್ಲಿ ಮನವಿ ಮಾಡಲಾಯಿತು. ಬೈಕ್ ರ್‍ಯಾಲಿಯಲ್ಲಿ ಸ್ಟಾರ್‌ ಪ್ರಚಾರಕರಾಗಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಆಗಮಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಬೈಕ್ ರ್‍ಯಾಲಿಯ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ, ಬಿಜೆಪಿ ಗೆಲ್ಲಬೇಕು ಎಂಬ ದೃಷ್ಟಿಯಲ್ಲಿ ೨೦೧೪ರಿಂದ ಎಲ್ಲಾ ನಾವು ಎಲ್ಲಾ ಕಾರ್ಯಕರ್ತರು ಬೀದಿಗಿಳಿದು ಕೆಲಸ ಮಾಡಿದ್ದೇವೆ. ಈಗ ಮತ್ತೆ ೨೦೨೪ರ ಲೋಕಸಭಾ ಚುನಮಾವಣೆಗಾಗಿ ಕೆಲಸ ಮಾಡುತ್ತಿದ್ದೇವೆ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂಬ ಕಾರಣಕ್ಕಾಗಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಬಾರಿಯೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ. ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಂಪಿ ಆಗುವುದು ಖಚಿತ ಎಂದು ಅವರು ಹೇಳಿದರು.

ನಾನೂ ಒಬ್ಬ ಬಿಜೆಪಿಯ ಅಭ್ಯರ್ಥಿ, ಕೋಟ ಶ್ರೀನಿವಾಸ ಪೂಜಾರಿ ಅವರಂತಹ ಸರಳ ಅಭ್ಯರ್ಥಿ ಇಡೀ ದೇಶದಲ್ಲೇ ಇಲ್ಲ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ನಮ್ಮ ಅಭ್ಯರ್ಥಿ ಬಹು ಅಂತರದಿಂದ ಗೆಲ್ಲುವುದಕ್ಕಾಗಿ ಕಾರ್ಯಕರ್ತರೆಲ್ಲರೂ ಶ್ರಮವಹಿಸಿದ್ದಾರೆ. ಈವರೆಗೆ ಗೆಲ್ಲುವುದಕ್ಕೆ ಬೇಕಾಗಿ ಪಟ್ಟ ಶ್ರಮ ಮತಗಳಾಗಿ ಪರಿವರ್ತನೆಯಾಗಬೇಕು. ಎರಡು ಬಾರಿ ಮೋದಿ ಪ್ರಧಾನಿಯಾಗಿದ್ದಾರೆ, ಈ ಬಾರಿಯೂ ಪ್ರಧಾನಿ ಆಗುವುದು ನಿಶ್ಚಿತ ಎಂದು ಭಾವಿಸಿ ಈ ಬಾರಿ ನಾನೊಬ್ಬ ಮತ ಹಾಕದೇ ಇದ್ದರೇ, ಏನೂ ಸಮಸ್ಯೆ ಇಲ್ಲ ಎಂದು ಕೂರದೇ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು. ದೇಶಕ್ಕೆ ಮೋದಿ ಅವರಂತಹ ಶ್ರೇಷ್ಠ ಪ್ರಧಾನಿ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರಂತಹ ಸಂಸದರನ್ನು ಪಡೆದುಕೊಳ್ಳುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಈ ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ಎಲ್ಲರೂ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

ಇನ್ನು, ನಮ್ಮ ಸರ್ಕಾರದ ಸ್ವಚ್ಛ ಬಾರತ ಯೋಜನೆಯ ಭಾಗವಾಗಿ ಮನೆಮನೆಗೆ ಶೌಚಾಲಯವನ್ನು ನಿರ್ಮಾಣ ಮಾಡಿಕೊಟ್ಟಿದೆ. ಆದರೂ ಕಾಂಗ್ರೆಸಿಗರು ʼಚೊಂಬುʼ ಹಿಡಿದುಕೊಂಡಿರುವುದು ಯಾಕೆ ಎನ್ನುವುದು ಗೊತ್ತಿಲ್ಲ ಎನ್ನುವುದರ ಮೂಲಕ ರಾಜ್ಯ ಸರ್ಕಾರದ ʼಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ʼಚೊಂಬುʼ” ಎಂಬ ಜಾಹೀರಾತಿನ ಬಗ್ಗೆ ವ್ಯಂಗ್ಯವಾಡಿದರು.

ಈ ಬಳಿಕ ಮಾಧ್ಯಮ ವರದಿಗಾರರಿಗೆ ಸ್ಪಂದಿಸಿದ ಅಣ್ಣಾಮಲೈ, ತಮಿಳುನಾಡಿನಲ್ಲಿ ಬಿಜೆಪಿಯ ಹೊಸ ಅಲೆ ಎದ್ದಿದೆ. ಈ ಬಾರಿ ತಮಿಳುನಾಡಿನಲ್ಲಿ ʼಡಬ್ಬಲ್‌ ಡಿಜಿಟ್‌ʼನಲ್ಲಿ ಕ್ಷೇತ್ರಗಳು ಬಿಜಪಿ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೈಕ್ ರ್‍ಯಾಲಿಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ, ಉಡುಪಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕಿಶೋರ್‌ ಕುಮಾರ್ ಕುಂದಾಪುರ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಮೋದ್‌ ಮಧ್ವರಾಜ್‌, ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ ಕೆ. ಉದಯ್‌ ಕುಮಾರ್‌ ಶೆಟ್ಟಿ, ಉಪ ಪ್ರಭಾರಿ ರಾಜೇಶ್‌ ಕಾವೇರಿ, ಕುಂದಾಪುರ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂರಾರು ಯುವಕರು, ಹಿರಿಯರು, ಬಿಜೆಪಿ ಬೆಂಬಲಿಗರು ಬಹಳ ಉತ್ಸಾಹದಿಂದ ಸುಮಾರು 3-4 ಗಂಟೆಯವರೆಗೆ ಸುಡು ಬಿಸಿಲನ್ನು ಲೆಕ್ಕಿಸದೆ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಬೆಂಬಲಿಸುವಂತೆ ಪ್ರಚಾರ ಮಾಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!