Saturday, October 12, 2024

ಮುಸ್ಲೀಮರ ಬಗ್ಗೆ ಮೋದಿ ಹೇಳಿಕೆಯ ವಿರುದ್ಧ ಚುನಾವಣಾ ಆಯೋಗ ಪಕ್ಷಾತೀತವಾಗಿ ಕ್ರಮ ತೆಗೆದುಕೊಳ್ಳದೇ ಇರುವುದು ದುರದೃಷ್ಟಕರ : ಪಿಣರಾಯಿ ವಿಜಯನ್‌

ಜನಪ್ರತಿನಿಧಿ (ಕಣ್ಣೂರು) : ಪ್ರಧಾನಿ ನರೇಂದ್ರ ಮೋದಿ ಮುಸ್ಲೀಮರ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಚುನಾವಣಾ ಆಯೋಗ ಪಕ್ಷಾತೀತವಾಗಿ ಕ್ರಮ ತೆಗೆದುಕೊಳ್ಳದೇ ಇರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

ಚುನಾವಣಾ ಆಯೋಗ ಇನ್ನೂ ಮೌನವಾಗಿದೆ. ಶೀಘ್ರವಾಗಿ ಕ್ರಮ ಜರುಗಿಸಬೇಕಾದ ಸಮಯವಿದು. ಶೀಘ್ರ ಕ್ರಮ ತೆಗೆದುಕೊಳ್ಳುವ ಮೂಲಕ ಪಕ್ಷಾತೀತವಾಗಿದ್ದೇವೆ ಎಂದು ಚುನಾವಣಾ ಆಯೋಗ ತೋರಿಸಬೇಕಿತ್ತು ಎಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಹೇಳಿದರು.

ಇದು ಸುಪ್ರೀಂ ಕೋರ್ಟ್‌ ಗಮನಕ್ಕೆ ತರಲೇಬೇಕಾದ ವಿಚಾರ. ಮೋದಿ ನೀಡಿರುವ ಆ ಹೇಳಿಕೆ ದೇಶದಲ್ಲಿ ಬಿಜೆಪಿ ವಿರೋಧಿ ಶಕ್ತಿಯನ್ನು ಮತ್ತಷ್ಟು ಬಲಿಷ್ಠವಾಗಿಸಿದ್ದು, ಕೇಸರಿ ಪಕ್ಷವು ಹೀನಾಯ ಸೋಲು ಕಾಣಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಮೋದಿಯವರ ಆ ಹೇಳಿಕೆಯನ್ನು ಟೀಕಿಸಿದ ವಿಜಯನ್‌, ಜನರಲ್ಲಿ ಮುಸ್ಲೀಂ ವಿರೋಧಿ ದ್ವೇಷವನ್ನು ಹುಟ್ಟು ಹಾಕಲು ಕಟ್ಟುಕಥೆ ಹೇಳುವ ಮೂಲಕ ಪ್ರಧಾನಿ ದ್ವೇಷ ಪ್ರಚಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಇನ್ನು, ಆದಿತ್ಯವಾರ ರಾಜಸ್ಥಾನದ ಚುನಾವಣಾ ರ್ಯಾಲಿ ಒಂದರಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೇ ಜನರ ಸಂಪತ್ತನ್ನು ಮುಸ್ಲೀಮರಿಗೆ ಮರು ಹಂಚಿಕೆ ಮಾಡುತ್ತದೆ ಎಂದು ಹೇಳಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!