spot_img
Wednesday, April 1, 2026
spot_img

ಮೋದಿ ಅತಿ ಕೆಟ್ಟ ಮನಸ್ಥಿತಿಯ, ವಿಕೃತ ಆಲೋಚನೆಯ ವ್ಯಕ್ತಿ | ಮೋದಿ ʼತಾಳಿ ಹೇಳಿಕೆʼಗೆ ಕಾಂಗ್ರೆಸ್‌ ಆಕ್ರೋಶ

ಜನಪ್ರತಿನಿಧಿ (ಬೆಂಗಳೂರು) : ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಂಪತ್ತಿನ ಸಮಾನ ಹಂಚಿಕೆಯನ್ನು ಪ್ರತಿಪಾದಿಸಿದ್ದಕ್ಕೆ ತಾಳಿ ಕಿತ್ತುಕೊಳ್ಳುತ್ತದೆ ಎಂದು ಹೇಳಿದ ಮೋದಿ ತಾವೊಬ್ಬ ಅತಿ ಕೆಟ್ಟ ಮನಸ್ಥಿತಿಯ, ವಿಕೃತ ಆಲೋಚನೆಯ ವ್ಯಕ್ತಿ ಎಂದು ನಿರೂಪಿಸಿದ್ದಾರೆ ಎಂದು ಕಾಂಗ್ರೆಸ್‌ ಮೋದಿ ವಿರುದ್ಧ ಹರಿಹಾಯ್ದಿದೆ.

ಮೋದಿಯವರಿಗೆ ತಮ್ಮ ಉದ್ಯಮಿ ಗೆಳೆಯರಿಗೆ ದೇಶದ ಸಂಪತ್ತು ಹಂಚಿಕೆ ಮಾಡುವುದು ಮಾತ್ರ ಅತಿ ಸಂತೋಷ ನೀಡುವ ಸಂಗತಿಯಾಗಿದೆ, ದೇಶದ ಜನರಿಗೆ ಸಂಪತ್ತು ಸಿಗುವುದು ಅವರಿಗೆ ಇಷ್ಟವಿಲ್ಲ. ನರೇಂದ್ರ ಮೋದಿ ಅವರೇ, ತಾಳಿ ಕಿತ್ತುಕೊಂಡಿದ್ದು ಯಾರು? ಎಂದು ಕಟುವಾಗಿ ಪ್ರಶ್ನಿಸಿದೆ.

ನೋಟ್ ಬ್ಯಾನ್ ಮಾಡಿ ದೇಶದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಿ ದೇಶದ ಜನರ ತಾಳಿ ಮಾರಿಸಿದ್ದು ಯಾರು? ಪೂರ್ವನಿಯೋಜಿತವಲ್ಲದ ಲಾಕ್ ಡೌನ್ ಮಾಡಿ ಬಡವರ ತಾಳಿ ಮಾರಿಸಿದ್ದು ಯಾರು? ದೇಶದ ಸಂಪತ್ತು ಕೇವಲ ನಿಮ್ಮ ಉದ್ಯಮಿ ಗೆಳೆಯರಿಗೆ ಮಾತ್ರ ಸಿಗಬೇಕೇ? ಎಂದು ಪ್ರಧಾನಿಗೆ ಕಾಂಗ್ರೆಸ್‌ ಪ್ರಶ್ನೆಗಳ ಮೂಲಕ ತಿವಿದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!