Saturday, October 12, 2024

ರಾಮ ಮಂದಿರ ಲೋಕಾರ್ಪಣೆಯ ನಂತರ ಒಂದುವರೆ ಕೋಟಿಯಷ್ಟು ಜನರಿಂದ ಬಾಲರಾಮನ ದರ್ಶನ : ಟ್ರಸ್ಟ್‌ ಮಾಹಿತಿ

ಜನಪ್ರತಿನಿಧಿ (ಅಯೋಧ್ಯೆ) : ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಈವರೆಗೆ ಸುಮಾರು ಒಂದುವರೆ ಕೋಟಿಯಷ್ಟು ಮಂದಿ ಮಂದಿರಕ್ಕೆ ಬಂದು ಭೇಟಿ ನೀಡಿದ್ದಾರೆ ಎಂದು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ರಾಮ ಮಂದಿರಕ್ಕೆ ಪ್ರತಿನಿತ್ಯ ಒಂದು ಲಕ್ಷ ಜನರು ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ ಎಂದೂ ಚಂಪತ್‌ ರಾಯ್‌ ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.

ಮುಂಬರುವ ದಿನಗಳಲ್ಲಿ ರಾಮಜನ್ಮಭೂಮಿ ಸುತ್ತ ಹದಿನಾಲ್ಕು ಅಡಿ ಅಗಲದ ಭದ್ರತಾ ಗೋಡೆಯನ್ನು ನಿರ್ಮಿಸಲಾಗುವುದು. ಇದಕ್ಕೆ ಪರ್ಕೋಟ ಎಂದು ಹೇಳುತ್ತಾರೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂದರ್ಭದಲ್ಲಿ ಮಂದಿರದ ನೆಲಮಹಡಿ ನಿರ್ಮಾಣ ಮಾತ್ರ ಪೂರ್ಣಗೊಂಡಿತ್ತು. ಈಗ ಮೊದಲ ಮಹಡಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದೂ ಅವರು ರಾಮ ಮಂದಿರದ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
https://x.com/ANI/status/1782239022959808586

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!