Saturday, October 12, 2024

ಕಾಂಗ್ರೆಸ್‌ ಸರ್ಕಾರಕ್ಕೆ ಭ್ರಷ್ಟಾಚಾರದ್ದೇ ಧ್ಯಾನ : ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ ನಮೋ

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಭ್ರಷ್ಟಾಚಾರದ್ದೇ ಧ್ಯಾನ. ಈ ಕಾರಣದಿಂದಾಗಿ ಬೆಂಗಳೂರು ನಗರದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಅರಮನೆ ಮೈದಾನದಲ್ಲಿ ಇಂದು(ಶನಿವಾರ) ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಮೋದಿ, ʼಬೆಂಗಳೂರನ್ನು ಸುಂದರ ನಗರವನ್ನಾಗಿ ನಿರ್ಮಿಸುವ ಕನಸು ನಾಡಪ್ರಭು ಕೆಂಪೆಗೌಡ ಅವರದ್ದಾಗಿತ್ತು. ಟ್ಯಾಕ್ಸ್‌ ಸಿಟಿ ಆಗಿದ್ದ ಬೆಂಗಳೂರು ಕಾಂಗ್ರೆಸ್‌ ಟ್ಯಾಂಕರ್‌ ಸಿಟಿಯನ್ನಾಗಿ ಪರಿವರ್ತಿಸಿದೆ ಎನ್ನುವುದರ ಮೂಲಕ ಬೆಂಗಳೂರಿನಲ್ಲಿ ತಾಂಡವವಾಡುತ್ತಿರುವ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿ ರಾಜ್ಯ ಸರ್ಕಾರವನ್ನು ತಿವಿದಿದ್ದಲ್ಲದೇ, ನಗರದಲ್ಲಿ ಟ್ಯಾಂಕರ್‌ ಮಾಫಿಯಾ ನಡೆಯುತ್ತಿದೆ ಎಂದು ಹೇಳಿದರು.

2014ರ ಮೊದಲು ಬೆಂಗಳೂರಿನಲ್ಲಿ 17 ಕಿ. ಮೀ ಉದ್ದದ ಮೆಟ್ರೋ ರೈಲು ಮಾರ್ಗವಿತ್ತು. ಈ ಗ ಅದು 70 ಕಿ. ಮೀ ಗೆ ವಿಸ್ತರಿಸಿದೆ. ಹಳದಿ ಮಾರ್ಗವೂ ಶೀಘ್ರದಲ್ಲಿ ಬಳಕೆಗೆ ಲಭ್ಯವಾಗಲಿದೆ. ಉಪನಗರ ರೈಲು ಯೋಜನೆಯೂ ಬೆಂಗಳೂರಿನ ಸಂಚಾರ ಸಮಸ್ಯೆಹೆ ಪರಿಹಾರ ನೀಡಲಿದೆ. ಇವೆಲ್ಲವೂ ಸಾಧ್ಯವಾಗಿದ್ದು ಹತ್ತು ವರ್ಷಗಳ ಎನ್‌ಡಿಎ ಸರ್ಕಾರದ ಆಡಳಿತದಿಂದ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಪಕ್ಷ ಯುವಜನರು, ಬಡವರು ಹಾಗೂ ಧ್ಯಮ ವರ್ಗದವರ ವಿರೋಧಿ. ಇದಕ್ಕಾಗಿಯೇ ಡಿಜಿಟಲ್‌ ಪೇಮೆಂಟ್‌, ಜನಧನ್‌ ಖಾತೆ ಯೋಜನೆಗಳನ್ನು ವಿರೋಧಿಸಿತ್ತು. ಕೃಷಿಕರ ವಿರೋಧಿಯಾಗಿರುವ ಕಾಂಗ್ರೆಸ್‌ ಸರ್ಕಾರ ರೈತರಿಗೆ ನೀಡುತ್ತಿದ್ದ ನಾಲ್ಕು ಸಾವಿರ ಸಹಾಯಧನಕ್ಕೆ ಕತ್ತರಿ ಹಾಕಿದೆ ಎಂದು ಅವರು ಟೀಕಾಸ್ತ್ರ ಪ್ರಯೋಗಿಸಿದರು.

ಯುವಶಕ್ತಿ ಹಾಗೂ ಹೂಡಿಕೆದಾರರ ವಿರುದ್ಧ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ. ಇದರಿಂದಾಗಿ ಇಲ್ಲಿ ಉದ್ಯೋಗ ವೃದ್ದಿ ಆಗುತ್ತಿಲ್ಲ. ತೆರಿಗೆದಾರರ ವಿರುದ್ಧವೂ ಕಾಂಗ್ರೆಸ್‌ ಇದೆ. ಉದ್ಯಮಶೀಲತೆ, ಖಾಸಗಿ ಕ್ಷೇತ್ರ ಹಾಗೂ ಆಸ್ತಿ ಸೃಜನೆ ವಿರುದ್ಧ ಕಾಂಗ್ರೆಸ್‌ ಕೆಲಸ ಮಾಡುತ್ತಿದೆ ಎಂದು ಅವರು ದೂರಿದರು.

ಕೋವಿಡ್‌ ಸೋಂಕು ನಿವಾರಣೆ ಮಾಡಲು ದೇಶಿಯ ಲಸಿಕೆಯನ್ನು ಕಾಂಗ್ರೆಸ್‌ ವಿರೋಧಿಸಿತ್ತು. ಕೋವಿನ್‌ ವೆಬ್‌ ಪೋರ್ಟಲ್‌ ವಿರುದ್ಧವೂ ಅಪಪ್ರಚಾರ ಮಾಡುವ ಮೂಲಕ ತಂತ್ರಜ್ಙಾನ ವಿರೋಧಿ ಮನಸ್ಥಿತಿಯನ್ನು ಕಾಂಗ್ರೆಸ್‌ ಪ್ರದರ್ಶಿಸಿತ್ತು. ಎಚ್‌ಎಎಲ್‌ ವಿಷಯದಲ್ಲಿ ಕಾಂಗ್ರೆಸ್‌ ಸುಳ್ಳನ್ನೇ ಹೇಳುತ್ತಾ ಬಂದಿದೆ. ಹೆಚ್‌ಎಎಲ್‌ ನ ವಹಿವಾಟಿ ಈಗ ಹೆಚ್ಚಳವಾಗಿದೆ ಎನ್ನುವುದನ್ನು ನೀವೇ ಗಮನಿಸಿ ಎಂದು ಅವರು ಜನರಲ್ಲಿ ವಿನಂತಿಸಿಕೊಂಡರು.

ಎನ್‌ಡಿಎ ಸರ್ಕಾರದ ಅವಧಿಯಲ್ಲಿ ನಗರ ಪ್ರದೇಶಗಳ ಬಡವರಿಗಾಗಿ ಒಂದು ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಎಂಬತ್ತ್ನಾಲ್ಕು ಸಾವಿರ ಮನೆಗಳು ಬೆಂಗಳೂರಿನ ಬಡವರಿಗೆ ದೊರಕಿವೆ ಎಂದು ಹೇಳಿದ್ದಲ್ಲದೇ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮುಖೇನ ಮೋದಿ ಕೈ ಬಲಪಡಿಸಿ ಎಂದು ಮನವಿ ಮಾಡಿಕೊಂಡರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!