spot_img
Monday, June 23, 2025
spot_img

ಬಿಜೆಪಿಯ ಪ್ರಣಾಳಿಕೆ ʼಮೋದಿ ಗ್ಯಾರಂಟಿ ಕಾರ್ಡ್‌ʼ ಆಗಿದೆ : ಪ್ರಧಾನಿ ಮೋದಿ

ಜನಪ್ರತಿನಿಧಿ (ಮಹಾರಾಷ್ಟ್ರ) : ಕಾಂಗ್ರೆಸ್‌ ಪಕ್ಷ ಬೇರುಗಳಿಲ್ಲದ ಬಳ್ಳಿಯಂತೆ, ಅದನ್ನು ಬೆಂಬಲಿಸುವವರನ್ನು ಅದು ಒಣಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಇಲ್ಲಿನ ಮರಾಠವಾಡದ ಪರಭಣಿಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆ ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿಯನ್ನಾಗಿಸಲು ನಡೆಯುತ್ತಿರುವ ಚುನಾವಣೆಐಗಿದೆ ಎಂದು ಹೇಳಿದ್ದಾರೆ.

ಕೇವಲ ಹತ್ತು ವರ್ಷಗಳಲ್ಲಿ ದೇಶದ ಅಭಿವೃದ್ಧಿಉ ಸುದೀರ್ಘ ಹಾದಿಯನ್ನು ದಾಟಿ ಬಂದಿದೆ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಈ ಚುನಾವಣೆ ಸಹಕಾರಿಯಾಗಿದೆ. ಬಿಜೆಪಿಯ ಪ್ರಣಾಳಿಕೆ ʼಮೋದಿ ಅವರ ಗ್ಯಾರಂಟಿ ಕಾರ್ಡ್‌ʼ ಆಗಿದೆ ಎಂದು ಅವರು ಹೇಳಿದ್ದಾರೆ.

ದೇಶದ ಬಡವರಿಗೆ ಸುಮಾರು ಮೂರು ಕೋಟಿ ಮನೆಗಳನ್ನು ನಮ್ಮ ಸರ್ಕಾರ ನಿರ್ಮಿಸಿಕೊಡಲಿದೆ. ನಿಮ್ಮ ಕನಸುಗಳೇ ನನ್ನ ಕನಸುಗಳಾಗಿವೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!