Sunday, September 8, 2024

ಡಿಡಿ ನ್ಯೂಸ್ ʼಕೇಸರಿʼ ಲೋಗೋ | ʼಕೇಸರಿಕರಣದ ಪರಮಾವಧಿʼ : ವ್ಯಾಪಕ ಟೀಕೆ

ಜನಪ್ರತಿನಿಧಿ (ನವ ದೆಹಲಿ) : ಸ್ವಾಯತ್ತ ಸಾರ್ವಜನಿಕ ಪ್ರಸಾರ ಸಂಸ್ಥೆ ದೂರದರ್ಶನ ತನ್ನ ಲೋಗೋ ಬಣ್ಣವನ್ನು ಕಡು ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಪರಿವರ್ತೀಸಿದ್ದು ಈಗ ವ್ಯಾಪಕ ಟೀಕೆಗೆ ಒಳಗಾಗಿದೆ, ದೂರದರ್ಶನದ ಈ ನಡೆಯ ವಿರುದ್ದ ವಿರೋಧ ಬಣ ಕೆಂಡ ಕಾರಿದೆ.

ಸಾಮಾಜಿಕ ಜಾಲತಾಣದಲ್ಲಿ ದೂರದರ್ಶನದ ಇಂಗ್ಲಿಷ್ ಸುದ್ದಿ ವಾಹಿನಿಯಾದ ಡಿಡಿ ನ್ಯೂಸ್ ಇತ್ತೀಚೆಗೆ ಹೊಸದೊಂದು ಪ್ರೋಮೋ ವೀಡಿಯೊವನ್ನು ಹಂಚಿಕೊಂಡಿತ್ತು, ಅದರಲ್ಲಿ ತನ್ನ ಮೂಲ ಲೋಗೋದಲ್ಲಿದ್ದ ಕಡು ಕೆಂಪು ಬಣ್ಣದ ಬದಲಾಗಿ ಕೇಸರಿ ಬಣ್ಣದ ಲೋಗೋವನ್ನು ಪರಿಚಯಿಸಿತ್ತು.

ನಮ್ಮ ಮೌಲ್ಯಗಳು ಒಂದೇ ಆಗಿರುವಾಗ, ನಾವು ಈಗ ಹೊಸ ಅವತಾರದಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಹಿಂದೆಂದಿಗಿಂತಲೂ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ… ಹೊಸ ಡಿಡಿ ನ್ಯೂಸ್ ಅನ್ನು ಅನುಭವಿಸಿ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪ್ರೋಮೋ ವೀಡಿಯೋಕ್ಕೆ ಕ್ಯಾಪ್ಶನ್‌ ನೀಡಿತ್ತು.

ದೂರದರ್ಶನದ ಇಂಗ್ಲಿಷ್ ಸುದ್ದಿ ವಾಹಿನಿಯಾದ ಡಿಡಿ ನ್ಯೂಸ್ನ ನೂತನ ಲೋಗೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಹಲವು ಸಾಮಾಜಿಕ ಜಾಲತಾಣದ ಬಳಕೆದಾರರು ಇದನ್ನು ʼಕೇಸರಿಕರಣದ ಪರಮಾವಧಿʼ ಎಂದು ಟೀಕಿಸಿದ್ದು, ಈ ಕ್ರಮವು ಚುನಾವಣೆಯ ಸಂದರ್ಭದಲ್ಲೇ ಆಗಿರುವುದು ಟೀಕೆಗೆ ಕಾರಣವಾಗಿದೆ.

ದೂರದರ್ಶನದ ಮಾತೃಸಂಸ್ಥೆಯ ಮಾಜಿ ಮುಖ್ಯಸ್ಥ, ತೃಣಮೂಲ ಸಂಸದ ಜವಾಹರ್ ಸಿರ್ಕಾರ್ ಕೂಡ ಚುನಾವಣೆಗೆ ಮುನ್ನ ದೂರದರ್ಶನದ ಲೋಗೋದ “ಕೇಸರಿಕರಣ” ವನ್ನು ನೋಡುವುದು ನೋವುಂಟು ಮಾಡುತ್ತದೆ ಎಂದು ಹೇಳಿದ್ದಾರೆ.

https://x.com/DDNewslive/status/1780078000710553700?t=VxQ-w3DcZ09hiAZ3hBAGmg&s=08

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!