Thursday, November 21, 2024

ನಮ್ಮೂರ ಡಾಕ್ಟರ್ ನಮ್ಮೂರ ಹೆಮ್ಮೆ : ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿಯೂ ಕರಾವಳಿಗೆ ಹೆಮ್ಮೆ

ಪ್ರತಿ ವರುಷದಂತೆ ಯು.ಪಿ.ಎಸ್.ಸಿ .ಪರೀಕ್ಷಾ ಫಲಿತಾಂಶ ಬಂದಾಗ ಆ ಪಟ್ಟಿಯಲ್ಲಿ  ನಮ್ಮ ರಾಜ್ಯದವರಿದ್ದಾರಾ? ಕೊನೆಗೆ ನಮ್ಮ ಜಿಲ್ಲೆಯವರಿದ್ದಾರಾ? ಅಂತ ಹುಡುಕುವುದು. ಅಂತೂಕೊನೆಗೂ ನಮ್ಮ ಊರು ಬೈಂದೂರಿನ ಉಪುಂದದ ಡಾಕ್ಟರ್ ಈ ಬಹು ಪ್ರತಿಷ್ಠಿತ ಪರೀಕ್ಷೆಯಲ್ಲಿ 651ನೇ ಸ್ಠಾನದಲ್ಲಿ ಪಾಸಾದವರು  ನಮ್ಮೂರ ಡಾ. ಶ್ರೇಯಸ್.ಜಿ.ರಾವ್. ಅನ್ನುವ ಸಿಹಿ ಸುದ್ದಿ ನಮ್ಮ ಜಿಲ್ಲೆಗೆ ಬಂದು ತಲುಪಿದೆ.ಈ ಕಠಿಣ ಪರೀಕ್ಷೆಯಲ್ಲಿ ಹಿರಿಯ ಸಾಧನೆಗೈದ ಡಾ. ಶ್ರೇಯಸ್.ಜಿ.ರಾವ್.ರವರ ಜೊತೆ ನಾನು ನಡೆಸಿದ ಟೆಲಿ ಫೇೂನಿಕ್ ಸಂದಶ೯ನ ನಮ್ಮ ಯುವ ಕನಸುಗಾರ  ವಿದ್ಯಾರ್ಥಿಗಳಿಗೆ ಒಂದಿಷ್ಟು ಪ್ರೇರಣೆ ನೀಡಲಿ ಅನ್ನುವ ಕಾರಣಕ್ಕೆ ಸಾಧಕ ಡಾ.ಶ್ರೇಯಸ್ ಜಿ.ರಾವ್ ರವರ ಜೊತೆ ನಡೆಸಿದ ಮಾತುಕತೆಯ ಕಿರು ಮಾಹಿತಿ ಇಲ್ಲಿದೆ.

  • ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡು ಯು.ಪಿ.ಎಸ್.ಸಿ.ಪರೀಕ್ಷೆಯಲ್ಲಿ ಉನ್ನತ ಸಾಧನೆಗೈದಿರುವುದು ನಿಜಕ್ಕೂ ಶ್ಲಾಘನೀಯ. ತಮ್ಮ ಸಂಕ್ಷಿಪ್ತ ಪರಿಚಯ ನೀಡಬಹುದೇ?

: ಖಂಡಿತವಾಗಿಯೂ ನನ್ನ ಪರಿಚಯ ನೀಡುವುದು ನನಗೂ ಸಂತೇೂಷ.ನಾನುಮೂಲತ: ಉಡುಪಿ  ಜಿಲ್ಲೆಯ ಬೈಂದುಾರು ತಾಲೂಕಿನ ಉಪುಂದವನು.ನನ್ನ ತಂದೆ ದಿ.ಗಣೇಶ್ ರಾವ್.ಅವರು ಕೂಡಾ ವೃತಿಯಲ್ಲಿ ಶಿಕ್ಷಕರಾಗಿದ್ದವರು.ತಾಯಿ  ಸುಶೀಲಾ ಗಾಣಿಗ.ಇವರು ಕೂಡಾಪ್ರಾಥಮಿಕ ಶಾಲಾ ಶಿಕ್ಷಕಿ.ನನ್ನ  ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಂಬದ ಕೇೂಣೆ ಯಲ್ಲಿ ಮುಗಿಸಿ ಪದವಿ ಪೂವ೯ ಶಿಕ್ಷಣವನ್ನು ನಾವುಂದ ಸರಕಾರಿ ಪದವಿ ಪೂವ೯ ಕಾಲೇಜಿನಲ್ಲಿ ಮುಗಿಸಿ ಅನಂತರ ವೈದ್ಯಕೀಯ ಪದವಿಯನ್ನು ಶಿವಮೊಗ್ಗದ ಮೆಡಿಕಲ್ ಕಾಲೇಜಿನಲ್ಲಿ ಪೂರೈಸಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ರೇಡಿಯೊಲಜಿ(Radiology)ವಿಷಯದ ಮೇಲೆ  ಪಡೆದಿದ್ದೇನೆ.ಸರ್.ಪ್ರಸ್ತುತ ಉಡುಪಿ ಅಂಬಲಪಾಡಿಯ ಮೆಡಿಕಲ್ ಸಂಸ್ಥೆಯಲ್ಲಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.

  • ಈ ಐ.ಎ.ಎಸ್..ನಂತಹ ರಾಷ್ಟ್ರ ಮಟ್ಟದ ಸ್ಪಧಾ೯ತ್ಮಕ ಪರೀಕ್ಷೆ ತೆಗೆದುಕೊಳ್ಳಬೇಕೆಂಬ ಕನಸು ನಿಮಗೆ ಯಾವಾಗ ಮೂಡಿತು.?

: ನಿಜ ಹೇಳ ಬೇಕೆಂದರೆ ನನ್ನ ವೈದ್ಯಕೀಯ ಶಿಕ್ಷಣದ ಎಂ.ಡಿ. ಪರೀಕ್ಷೆ ಮುಗಿಸಿದ ಅನಂತರವೇ ಈ ಕನಸು ಕಟ್ಟಿ ಕೊಂಡೆ.

  • ಒಂದು ಕಡೆ ವೈದ್ಯಕೀಯ ಸೇವೆ ಇನ್ನೊಂದು ಕಡೆ ಈ ಯು.ಪಿ.ಎಸ್.ಸಿ. ಪರೀಕ್ಷೆ ಇವೆರಡಕ್ಕೂ ಹೇಗೆ ಸಮಯ ತೂಗಿಸಿಕೊಂಡಿದ್ದೀರಿ ?

:ಈ ಪರೀಕ್ಷೆಗಾಗಿ ನಾನು ಎರಡು ಮೂರು ವರುಷಗಳಿಂದ ನಿರಂತರವಾಗಿ ನಿಧಾನವಾಗಿ ತಯಾರಿ ಮಾಡುತ್ತಾ ಬಂದಿದ್ದೇನೆ..ಈ ಯಶಸ್ವಿ ನನಗೆ ಎರಡನೇಯ ಪ್ರಯತ್ನದಲ್ಲಿ  ಪಡೆಯಲು ಸಾಧ್ಯವಾಯಿತು.ಪ್ರತಿನಿತ್ಯ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಅಧ್ಯಯನ ಖಂಡಿತವಾಗಿಯೂ ಬೇಕು.ಅದಕ್ಕಾಗಿಯೇ ಸಮಯ ಮೀಸಲು ಇಟ್ಟು ಆಸಕ್ತಿ ಮತ್ತು ಶ್ರದ್ಧೆಯಿಂದ ಓದಿದ ಕಾರಣ ಈ ಕಠಿಣ ಪರೀಕ್ಷೆ ಯಲ್ಲಿ ತೇಗ೯ಡೆಯಾಗಲು ಸಾಧ್ಯವಾಯಿತು ಅನ್ನಿಸುತ್ತದೆ.

  • ಪ್ರಾಥಮಿಕ ಪರೀಕ್ಷೆಗೆ ನಿಮ್ಮ ತಯಾರಿ ಕುರಿತಾಗಿ ಹೇಳಬಹುದಾ?

: ಪ್ರಾಥಮಿಕ ಪರೀಕ್ಷೆ ಗೆ ಸ್ವಲ್ಪ ಹೆಚ್ಚಿನ ಓದುವಿಕೆ ಅಗತ್ಯ.ಇತಿಹಾಸ;ಅಥ೯ ಶಾಸ್ತ್ರ ;ಸಂವಿಧಾನ ;..ಪ್ರಚಲಿತ  ವಿದ್ಯಮಾನ ಮುಂತಾದ ವಿಷಯಗಳಿಗೆ ಆಯ್ದ ಶ್ರೇಣಿಯ ಲೇಖಕರ ಪುಸ್ತಕಗಳನ್ನೆ ಓದಿದ್ದೇನೆ.ಉದಾ: ಭಾರತೀಯ ಸಂವಿಧಾನಕ್ಕೆ ಲಕ್ಷ್ಮೀಕಾಂತರ ಇಂಡಿಯನ್  ಪೇೂಲಿಟಿ..ಎನ್.ಸಿ.ಆರ್ ಟಿ..ಮುಂತಾದ ಪುಸ್ತಕ ಓದಿದ್ದೇನೆ.

  • ಮುಖ್ಯ ಪರೀಕ್ಷೆಗೆ ಯಾವ ವಿಷಯ ಆಯ್ಕೆ ಮಾಡಿಕೊಂಡಿದ್ದೀರಿ..?

: ಬೇರೆಯವರು ಸಾಧಾರಣವಾಗಿ ಸಮಾಜ ವಿಜ್ಞಾನದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನಾನು ಮೆಡಿಕಲ್‌ ಸೈನ್ಸ್ ವಿಷಯವನ್ನೆ ಆಯ್ದು ಕೊಂಡಿದ್ದೇನೆ. ಯಾಕೆಂದರೆ ನನ್ನ ತುಂಬಾ ಆಸಕ್ತಿಯ  ಅಭಿರುಚಿಯ ವಿಷಯವೂ ಹೌದು.

  • ನಿಮ್ಮ ಸಂದರ್ಶನದ ತಯಾರಿ ಬಗ್ಗೆ ಸ್ವಾತಂತ್ರ್ಯ ಹೇಳಬಹುದಾ?

ಸಂದರರ್ಶನಕ್ಕೆ ಪೂರ್ವ ಭಾವಿಯಾಗಿ ಪ್ರತಿ ನಿತ್ಯವೂ ಎರಡು  ಇಂಗ್ಲೀಷ್ ಪತ್ರಿಕೆ ಓದುತ್ತಿದ್ದೆ.”ದಿ ಹಿಂದು”.ಇನ್ನೊಂದು “ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌.”.ಇದು ಪ್ರಚಲಿತ ಸುದ್ದಿ ವಿದ್ಯಮಾನ ತಿಳಿಯಲು ಸಹಕಾರಿಯಾಗಿದೆ.

  • ಪ್ರಸ್ತುತ ತಮಗೆ 651ನೇ ರ್ಯಾಂಕ್ ಬಂದಿದೆ. ತಮಗೆ ಯಾವ ಹುದ್ದೆ ಸಿಗಬಹುದು ಅನ್ನಿಸುತ್ತದೆ. ತಮ್ಮ ಇನ್ನುಮುಂದಿನ ಗುರಿ ಏನು?

:ಈಗಿನ ರ್ಯಾಂಕ್ ಲಿಫ್ಟ್ ಪ್ರಕಾರ ನನಗೆ ಐ.ಆರ್.ಎಸ್‌..ಸಂಬಂಧಿಸಿದ ಉನ್ನತಮಟ್ಟದ ಹುದ್ದೆ ಸಿಗ ಬಹುದು..ಇದನ್ನು ನಾನು ಸೇರಿಕೊಂಡು ಮುಂದಿನ ಯು.ಪಿ.ಎಸ್.ಸಿ.ಪ್ರಾಥಮಿಕ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದೇನೆ. ಐ.ಎ.ಎಸ್. ರ್ಯಾಂಕ್‌ ಹುದ್ದೆ ಪಡೆಯ ಬೇಕೆಂಬುವುದು ನನ್ನ ಛಲ ಹಾಗೂ ಗುರಿಯೂ ಹೌದು.

  • ನಮ್ಮ ಉಡುಪಿ ಜಿಲ್ಲೆ ಹಾಗೂ ಕರಾವಳಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ತಾವು ನೀಡುವ ಸಂದೇಶವೇನು?

:ಖಂಡಿತವಾಗಿಯೂ ತಾವೆಲ್ಲರೂ ಈ ಪರೀಕ್ಷೆ ತೆಗೆದುಕೊಳ್ಳಬಹುದು. ಮೊದಲಾಗಿ ನಿಮ್ಮ ನಿರಂತರ ಓದುವಿಕೆ ಸೇೂಲನ್ನು ಸೇೂಲಾಗಿ ಒಪ್ಪಿಕೊಳ್ಳದೇ ಅದೊಂದು ತಯಾರಿಯ ಮೊದಲ ಪ್ರಯತ್ನವೆಂದು ತಿಳಿದು ಮತ್ತೆ ಪ್ರಯತ್ನಶೀಲರಾಗಬೇಕು. ಪರೀಕ್ಷೆಯಲ್ಲಿ ಬರೆಯುವುದೇ ಒಂದು ಕಲೆ ಅದನ್ನು ಮೊದಲು ಸಿದ್ದಿಸಿಕೊಳ್ಳಿ..ಪತ್ರಿಕೆಗಳನ್ನು ಓದುವ ವಿಶ್ಲೇಷಿಸುವ ಗುಣ ಬೆಳೆಸಿಕೊಳ್ಳಿ. ಈ ತಯಾರಿ ಎಂದು ನಷ್ಟವೆಂದು ತಿಳಿಯಬೇಡಿ ಸಂಪಾದಿಸಿದ ಜ್ಞಾನ ಒಂದು ಸಂಪತ್ತು ಅದನ್ನು ಎಲ್ಲಿಯೂ ಕೂಡಾ ವಿನಿಯೇೂಗಿಸಿಕೊಳ್ಳ ಬಹುದು. ಒಂದಲ್ಲ ಒಂದು ಕಡೆ ಫಲ ಕೊಟ್ಟೇ ಕೊಡುತ್ತದೆ ಅನ್ನುವ ವಿಶ್ವಾಸ ನಮಗೆಬೇಕು.

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಉಡುಪಿ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!