spot_img
Monday, May 18, 2026
spot_img

ನಾನು ರಾಜ್ಯದ ಕ್ಷಮೆಯಾಚಿಸುತ್ತೇನೆ | ಅವಳೇ ಇವನಿಗೆ ಪ್ರಪೋಸ್ ಮಾಡಿದ್ದಳು | ಸಡಿಲಿಕೆ ಬೇಡ, ಫಯಾಜ್‌ಗೆ ತಕ್ಕ ಶಿಕ್ಷೆಯಾಗಲಿ : ತಾಯಿ ಮಮ್ತಾಜ್ ಆಗ್ರಹ

ಜನಪ್ರತಿನಿಧಿ (ಧಾರವಾಡ) : ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗಾರ ಫಯಾಜ್‌ ತಾಯಿ ಹೇಳಿಕೆ ನೀಡಿದ್ದು, ನೇಹಾಳನ್ನು ಹತ್ಯೆ ಮಾಡಿದ ತನ್ನ ಮಗನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಕೊಲೆಗಾರ ಫಯಾಜ್ ತಾಯಿ ಮಮ್ತಾಜ್ ಆಗ್ರಹಿಸಿದ್ದಾರೆ.

ಇಂದು (ಶನಿವಾರ) ಮಾಧ್ಯಮಗಳ ವರದಿಗಾರರೊಂದಿಗೆ ಮಾತನಾಡಿದ ಅವರು ನನ್ನ‌ಮಗ ಫಯಾಜ್ ಮಾಡಿದ ಕೃತ್ಯಕ್ಕಾಗಿ ನಾನು ರಾಜ್ಯದ ಕ್ಷಮೆಯಾಚಿಸುತ್ತೇನೆ. ಮೊದಲು ಅವನು ಬಹಳ ಓದಿನಲ್ಲಿ ಜಾಣನಿದ್ದ. ಅವಳೇ ಇವನಿಗೆ ಪ್ರಪೋಸ್ ಮಾಡಿದ್ದಳು. ನನ್ನ ಬಳಿ ಅವನು ಹೇಳಿದಾಗ ನಾನು ಲವ್ ಬೇಡ ಅಂತ ಹೇಳಿದ್ದೆ ಎಂದು ಹೇಳಿರುವುದಾಗಿ ಅವರು ಪ್ರತಿಕ್ರಿಯಿಸಿದ್ದಾರೆ.

ಇದು ಖಂಡನೀಯ ಅವನಿಗೆ ತಕ್ಕ ಶಿಕ್ಷೆಯಾಗಬೇಕು. ನನ್ನ ಮಗ ಕೆಎಎಸ್ ಆಫೀಸರ್ ಆಗಬೇಕು ಎಂದು ನಾನು ಕನಸು ಕಂಡಿದ್ದೆ. ಆದರೆ ಈ ರೀತಿಯಾದ ಒಂದು ಘಟನೆಯನ್ನು ನಾನು ನೋಡುತ್ತೇನೆ ಎಂದುಕೊಂಡಿರಲಿಲ್ಲ. ಈ ಘಟನೆ ನೋಡಿ ಬಹಳ ಸಂಕಟ ಆಗುತ್ತಿದೆ ಎಂದು ಅವರು ದುಃಖ ತೋಡಿಕೊಂಡಿದ್ದಾರೆ.

ನೇಹಾ ಸಹ ತುಂಬಾ ಒಳ್ಳೆಯ ಹುಡುಗಿ. ಅವರಿಬ್ಬರೂ ಮದುವೆ ಆಗಬೇಕು ಎಂದಿದ್ದರು. ಹಾಗಂತ ಸಡಿಲಿಕೆ ಬೇಡ ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು. ನೂರಾರು ಮಕ್ಕಳಿಗೆ ನಾನು ಶಿಕ್ಷಣ ಕೊಡ್ತೀನಿ. ಆದರೆ ಇವನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಫಯಾಜ್ ತಾಯಿ ಮಮ್ತಾಜ್ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!