Sunday, September 8, 2024

ರೇಡಿಯೋ ಕುಂದಾಪ್ರದ ಮೂಲಕ ಚುನಾವಣಾ ಮಾಹಿತಿ: ಶೇಕಡಾ 100 ಗುರಿ-ಕೆ. ವಿದ್ಯಾಕುಮಾರಿ

ಕುಂದಾಪುರ: “ಪ್ರತಿಯೊಬ್ಬ ಮತದಾರ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಈ ಪ್ರಜಾಪ್ರಭುತ್ವದ ಹಬ್ಬ ಯಶಸ್ವಿಯಾಗಿ ನಡೆಯುವಂತೆ ಪ್ರಯತ್ನ ನಡೆಸಲಾಗಿದೆ” ಎಂದು ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು.

ಭಂಡಾರ್‌ಕಾರ್‍ಸ್ ಕಾಲೇಜಿನ ರೇಡಿಯೋ ಕುಂದಾಪ್ರ ಮೂಲಕ ಮತದಾರರಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಅವರು ಜಿಲ್ಲೆಯ ಮತದಾರರು ಎ. 26 ರಂದು ಮತದಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

“ಚುನಾವಣಾ ನೀತಿ ಸಂಹಿತೆ, ಚುನಾವಣಾ ಸಿದ್ದತೆ, ಅಕ್ರಮ ಚಟುವಟಿಕೆ, ಮತದಾರರಿಗೆ ಆಮಿಷ ನೀಡುವ ಪ್ರಯತ್ನಗಳ ನಿಯಂತ್ರಣ ಬಗ್ಗೆ ಅವರು ವಿವರ ನೀಡಿದರು. ಜನ ಸಾಮಾನ್ಯರು ಸಿ-ವಿಜಿಲ್ ಆಫ್ ಮೂಲಕ ಚುನಾವಣಾ ಆಕ್ರಮಗಳ ವಿವರ ನೀಡಬಹುದು” ಎಂದ ಅವರು ದೂರುದಾರರ ಮಾಹಿತಿ ಗೋಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು.

“ಮತಗಟ್ಟೆಗೆ ಬರಲಾಗದ ವಯಸ್ಕರಿಗೆ ಮನೆಯಲ್ಲೇ ಮತದಾನ ನಡೆದಿದೆ. ಮತಗಟ್ಟೆಯಲ್ಲಿ ಅಂಗವಿಕಲಕರಿಗೆ, ಹಿರಿಯ ನಾಗರಿಕರಿಗೆ ಅಗತ್ಯ ವ್ಯವಸ್ಥೆ ಇದೆ. ಮಹಿಳೆಯರಿಗಾಗಿಯೇ ಸಖಿ ಬೂತ್‌ಗಳನ್ನು ಪ್ರತೀ ತಾಲೂಕಿನ ಐದು ಕಡೆ ರೂಪಿಸಲಾಗುತ್ತಿದೆ. ಪ್ರತಿಯೊಬ್ಬರೂ ಮತದಾನ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಇದೆ” ಎಂದರು.

ಜಿಲ್ಲಾ ಪಂಚಾಯತ್ ಸಿ‌ಇ‌ಒ ಪ್ರತೀಕ್ ಬಾಯಲ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಪಾಲ್ಗೊಳ್ಳದ ಮತದಾರರ ಬಗ್ಗೆ ವಿವರ ಪಡೆದು ಅವರು ಈ ಚುನಾವಣೆಯಲ್ಲಿ ತಪ್ಪದೇ ಭಾಗವಹಿಸುವಂತೆ ಪ್ರೇರಣೆ ನೀಡುವ ಕಾರ್ಯ ಸ್ವೀಪ್ ತಂಡ ಮಾಡುತ್ತಿದೆ. ಬೇರೆ ಬೇರೆ ಕಾರಣದಿಂದ ಊರಲ್ಲಿ ಇರಲಾಗದ ಮತದಾರರನ್ನು ಹೊರತು ಪಡಿಸಿ, ಊರಲ್ಲೇ ಇರುವ ಮತದಾರರೆಲ್ಲರೂ ಮತದಾನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದೇವೆ. ಪರವೂರಲ್ಲಿರುವ ಊರಿನ ಮತದಾರರು ಆ ದಿನ ಮತದಾನಕ್ಕೆ ಆಗಮಿಸುವಂತೆ ಕರೆ ನೀಡುತ್ತಿದ್ದೇವೆ. ಹಲವಾರು ಸಂಘ ಸಂಸ್ಥೆಗಳ ಮೂಲಕ ವೈವಿಧ್ಯಮಯ ರೀತಿಯಲ್ಲಿ ಮತದಾರರನ್ನು ಆಕರ್ಷಿಸುವ ಕಾರ್ಯಕ್ರಮ ಜಿಲ್ಲೆಯಲ್ಲಿ ನಡೆಸಲಾಗಿದೆ” ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾತನಾಡಿ, ಚುನಾವಣಾ ಕಾಲದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪಾರದರ್ಶಕವಾಗಿ ಮುಕ್ತ ವಾತಾವರಣ ಚುನಾವಣೆ ನಡೆಯಲಿದೆ. ಏನಾದರೂ ಸಾರ್ವಜನಿಕ ಸಮಸ್ಯೆ ಇದ್ದರೆ ೧೧೨ಗೆ ಮಾಹಿತಿ ನೀಡುವ ಮೂಲಕ ತಿಳಿಸಬಹುದು” ಎಂದರು.

ಕುಂದಾಪುರ ಸಹಾಯಕ ಆಯುಕ್ತರಾದ ರಶ್ಮೀ ಎಸ್. ಆರ್., ತಹಶೀಲ್ದಾರ್ ಶೋಭಾಲಕ್ಷ್ಮೀ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಶಶಿಧರ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ, ಮುಂತಾದವರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಗಳಿಗೆ ಭಂಡಾರ್‌ಕಾರ್‍ಸ್ ಕಾಲೇಜಿನ ಟ್ರಸ್ಟಿ ಯು.ಎಸ್.ಶೆಣೈ, ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಬಿ. ಲಲಿತಾದೇವಿ, ಭಂಡಾರ್‌ಕಾರ್‍ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಗೌರವಿಸಿದರು.

ಪತ್ರಿಕೋದ್ಯಮ ವಿಭಾಗದ ಸುಮಲತಾ ಹಾಗೂ ಕಂಪ್ಯೂಟರ್ ಸಾಯನ್ಸ್ ವಿಭಾಗದ ಮುಕುಂದ ಭಟ್ ಸಹಕರಿಸಿದರು.
“ರೇಡಿಯೋ ಕುಂದಾಪ್ರ” ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!