Thursday, May 2, 2024

ಬೆಳ್ವೆ ಶ್ರೀಶಂಕರನಾರಾಯಣ ದೇವಳದ ರಾಜಗೋಪುರ ಉದ್ಘಾಟನೆ

ಬೆಳ್ವೆ: ಧಾರ್ಮಿಕ ಕ್ಷೇತ್ರಕ್ಕೆ ವ್ಯಕ್ತಿಯ ಸ್ಮರಣಾರ್ಥ ನೀಡುವ ಸೇವೆಗಳು ಹಾಗೂ ಕೊಡುಗೆಗಳು ಸ್ಮರಣೆಯೊಂದಿಗೆ ಶ್ರೇಷ್ಠತೆಯನ್ನು ಹೊಂದುತ್ತವೆ.ಪರಾಣ ಪ್ರಸಿದ್ದ ಪಂಚ ಶಂಕರನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಬೆಳ್ವೆ ಶ್ರೀಶಂಕರನಾರಾಯಣ ದೇವಳಕ್ಕೆ ಶ್ರೀಶಂಕರನಾರಾಯಣ ಹೋಳಿ ಕೂಡುಕಟ್ಟು ಸಮಿತಿ ಸೆಟ್ಟೋಳಿ, ಅಬ್ಲಿಕಟ್ಟೆ,ಶ್ರೀಮಲ್ಲಿಕಾರ್ಜುನ ಯುವ ಸಂಘಟನೆ ಸೆಟ್ಟೋಳಿ ಅಬ್ಲಿಕಟ್ಟೆ ಇವರ ಕೊಡುಗೆಯಾಗಿ ಅಲ್ಬಾಡಿ ಶ್ಯಾಮಿಯಾನ್ ಶಂಕ್ರಣ್ಣ ಇವರ ಸ್ಮರಣಾರ್ಥ ಶ್ರೀಶಂಕರನಾರಾಯಣ ದೇವರಿಗೆ ರೂ.30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಭವ್ಯ ರಾಜ ಗೋಪುರವು ಕ್ಷೇತ್ರದ ಪಾವಿತ್ರ್ಯತೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಬಸ್ರೂರು ಹೇಳಿದರು.

ಅವರು ಬೆಳ್ವೆ ಶ್ರೀಶಂಕರನಾರಾಯಣ ದೇವಳಕ್ಕೆ ಶ್ರೀಶಂಕರನಾರಾಯಣ ಹೋಳಿ ಕೂಡುಕಟ್ಟು ಸಮಿತಿ ಸೆಟ್ಟೋಳಿ, ಅಬ್ಲಿಕಟ್ಟೆ, ಶ್ರೀಮಲ್ಲಿಕಾರ್ಜುನ ಯುವ ಸಂಘಟನೆ ಸೆಟ್ಟೋಳಿ ಅಬ್ಲಿಕಟ್ಟೆ ಇವರ ಕೊಡುಗೆಯಾಗಿ ಅಲ್ಬಾಡಿ ಶ್ಯಾಮಿಯಾನ್ ಶಂಕ್ರಣ್ಣ ಇವರ ಸ್ಮರಣಾರ್ಥ ನಿರ್ಮಾಣಗೊಂಡ ಭವ್ಯ ರಾಜ ಗೋಪುರವನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಧಾರ್ಮಿಕತೆ, ಧರ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಸನಾತನ ಧರ್ಮ ಶ್ರೇಷ್ಠವಾದದ್ದು, ಧಾರ್ಮಿಕತೆಯಲ್ಲಿ ಭಾರತ ಭವ್ಯ ಪರಂಪರೆಯ ಶ್ರೇಷ್ಠತೆಯನ್ನು ಹೊಂದಿದೆ. ಧಾರ್ಮಿಕತೆಗೆ ಜಾತಿ, ಧರ್ಮದ ಭೇಧಭಾವಗಳಿಲ್ಲ, ನಮ್ಮ ಶ್ರೇಷ್ಠ ಧಾರ್ಮಿಕತೆಯ ಬಗ್ಗೆ ಮಕ್ಕಳಿಗೆ ಹೆಚ್ಚಿನ ಒಲವು ಮೂಡಿಸುವ ಅಗತ್ಯವಿದೆ, ಬೆಳ್ವೆ ಶ್ರೀಶಂಕರನಾರಾಯಣ ದೇವಳಕ್ಕೆ ಅಲ್ಬಾಡಿ ಶ್ಯಾಮಿಯಾನ್ ಶಂಕ್ರಣ್ಣನ ಕುಟುಂಬದವರ ಕೊಡುಗೆ ಅಪಾರವಾದದ್ದು ಎಂದರು.

ಬೆಳ್ವೆ ಶ್ರೀಶಂಕರನಾರಾಯಣ ದೇವಳದ ಆಡಳಿತ ಮೊಕ್ತೇಸರ ಬಿ.ಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು.

ಬೆಳ್ವೆ ಶ್ರೀಗಣೇಶ್ ಕ್ಯಾಶ್ಯೂ ಸಮೂಹ ಸಂಸ್ಥೆಗಳ ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ,ಶಿರೂರು ಮುದ್ದುಮನೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಜಯರಾಮ ಶೆಟ್ಟಿ, ತಂತ್ರಿ ಸದಾಶಿವ ಭಟ್ ಬೇಳಂಜೆ, ಬೆಳ್ವೆ ಶ್ರೀಶಂಕರನಾರಾಯಣ ದೇವಳದ ಪ್ರಧಾನ ಅರ್ಚಕ ಶಂಕರನಾರಾಯಣ ಐತಾಳ.ಪವಿತ್ರಪಾಣಿ ಎಸ್ ರಾಮಚಂದ್ರ ಅಲ್ಸೆ ಸೆಟ್ಟೋಳಿ,ಗೋಪುರದ ಸ್ಥಳಧಾನಿ ಚಂದ್ರಹಾಸ್ ಶೆಟ್ಟಿ ಕುದ್ರುಬೀಡು, ಅಬ್ಲಿಕಟ್ಟೆ ಸೆಟ್ಟೋಳಿ ಶ್ರೀಶಂಕರನಾರಾಯಣ ಹೋಳಿ ಕೂಡುಕಟ್ಟು ಸಮಿತಿ ಹಿರಿಯರಾದ ಬೆಳ್ಳ ನಾಯ್ಕ ಸೆಟ್ಟೋಳಿ, ಅಧ್ಯಕ್ಷ ದೇವಣ್ಣ ನಾಯ್ಕ ಸೆಟ್ಟೋಳಿ, ಅಬ್ಲಿಕಟ್ಟೆ ಸೆಟ್ಟೋಳಿ ಶ್ರೀಮಲ್ಲಿಕಾರ್ಜುನ ಯುವ ಸಂಘಟನೆ ಅಧ್ಯಕ್ಷ ಸುರೇಂದ್ರ ನಾಯ್ಕ ಸೆಟ್ಟೋಳಿ, ಭವ್ಯ ರಾಜ ಗೋಪುರ ನಿರ್ಮಾಣದ ರೂವಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಅಭಿಯಂತರ ಮಹಾಬಲ ನಾಯ್ಕ ಅಲ್ಬಾಡಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

ನಿವೃತ್ತ ಮುಖ್ಯ ಶಿಕ್ಷಕ ಸುರೇಶ ಶೆಟ್ಟಿ ಬೆಳ್ವೆ ಸ್ವಾಗತಿಸಿದರು. ಶಶಿಕಲಾ ಅಲ್ಸೆ ಸೆಟ್ಟೋಳಿ ಪ್ರಾರ್ಥಿಸಿದರು. ಗಣೇಶ್ ಅರಸಮ್ಮಕಾನು ಕಾರ್ಯಕ್ರಮ ನಿರೂಪಿಸಿದರು. ಮಹಾಬಲ ನಾಯ್ಕ ಅಲ್ಬಾಡಿ ವಂದಿಸಿದರು.

ರಾಜ ಗೋಪುರ ಸಮರ್ಪಣೆ ಪ್ರಯುಕ್ತ ಭಾನುವಾರ ಫಲ ಪ್ರಾರ್ಥನೆ, ರಾಕ್ಷೆಘ್ನ ಹೋಮ, ವಾಸ್ತು ಪೂಜೆ, ಬ್ರಹ್ಮ ಕಲಶ ಸ್ಥಾಪನೆ, ಸೋಮವಾರ ಬೆಳಗ್ಗೆ ಅಧಿವಾಸ ಹೋಮ, ಬ್ರಹ್ಮ ಕಲಶಾಭಿಷೇಕ, ರಾಜ ಗೋಪುರದಿಂದ ಹೊರಟು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಚಂಡೆ ವಾದನದೊಂದಿಗೆ ಮೆರವಣಿಗೆ, ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಬಸ್ರೂರು, ಬೆಳ್ವೆ ಶ್ರೀಶಂಕರನಾರಾಯಣ ದೇವಳದ ಆಡಳಿತ ಮೊಕ್ತೇಸರ ಬಿ.ಶಂಕರ ಶೆಟ್ಟಿ, ಭವ್ಯ ರಾಜ ಗೋಪುರ ನಿರ್ಮಾಣದ ರೂವಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗದ ಅಭಿಯಂತರ ಮಹಾಬಲ ನಾಯ್ಕ ಅಲ್ಬಾಡಿ ಇವರುಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ದೇವಳಕ್ಕೆ ಕರೆ ತರಲಾಯಿತು. ಧಾರ್ಮಿಕ ಸಭಾ ಕಾರ್ಯಕ್ರಮ, ದಾನಿಗಳಿಗೆ ಸನ್ಮಾನ, ಸೇವಾಕರ್ತರಿಗೆ ಗೌರವ ಸಮರ್ಪಣೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಕಿರು ರಂಗಪೂಜೆ ನಡೆಯಿತು.

 

 

 

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!