spot_img
Saturday, December 7, 2024
spot_img

ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್ ಅವರಿಗೆ ‘ಯಕ್ಷ ಕುಲ ತಿಲಕ’ ಬಿರುದು ಪ್ರದಾನ

ಕುಂದಾಪುರ: ಸತತ 46 ಕ್ಷೇತ್ರಗಳ ಅಧ್ಯಯನ ಮಾಡಿ 46 ಕ್ಷೇತ್ರ ಮಹಾತ್ಮೆ ಪ್ರಸಂಗಗಳನ್ನು ರಚಿಸಿ ಜಾಗತಿಕ ದಾಖಲೆ ನಿರ್ಮಿಸಿದ ಪ್ರಸಂಗಕರ್ತ, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಬಿ.ಕೆ.ಫ್ರೆಂಡ್ಸ್ ಹಳೆ‌ಅಳಿವೆ ಕೋಟೇಶ್ವರ ಇವರ ಬಿ.ಕೆ. ಟ್ರೋಫಿ-2024ರ ಸಮಾರೋಪ ಸಮಾರಂಭದಲ್ಲಿ ಯಕ್ಷ ಕುಲ ತಿಲಕ ಬಿರುದು ನೀಡಿ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಿ.ಕೆ. ಫ್ರೆಂಡ್ಸ್‌ನ ರಾಘವೇಂದ್ರ ವಿ. ಮೆಂಡನ್‌ರವರು ವಹಿಸಿದ್ದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಗ್ರಾಮ ಲೆಕ್ಕಿಗರಾದ ಹರೀಶ್ ಶೆಟ್ಟಿ, ಕೋಟೇಶ್ವರ ಉದ್ಯಮಿ ರಾಜೇಶ್, ನಾಲ್ಕು ಪಾದ ಹಾಗುಳಿಯ ದೇವಸ್ಥಾನದ ಅಧ್ಯಕ್ಷರಾದ ಕೃಷ್ಣಮೂರ್ತಿ, ಕೋಟೇಶ್ವರ ವಲಯದ ಮೊಗವೀರ ಘಟಕದ ಅಧ್ಯಕ್ಷ ನಾಗರಾಜ್ ಬೀಜಾಡಿ, ಹಳೆಹಳಿವೆ ಶನೀಶ್ವರ ದೇವಸ್ಥಾನದ ಕಾರ್ಯದರ್ಶಿ ರಾಘವೇಂದ್ರ ಮೊಗವೀರರವರು ಭಾಗವಹಿಸಿ ಶುಭ ಹಾರೈಸಿದರು.

ಬಿ.ಕೆ.ಟ್ರೋಫಿ -2024 ಪ್ರಥಮ ಬಹುಮಾನವನ್ನು ಕಟ್ಟೆ ಫ್ರೆಂಡ್ಸ್ ಕಾಳಾವರ, ದ್ವಿತೀಯ ಬಹುಮಾನವನ್ನು ಬಿ.ಬಿ.ಸಿ ಕ್ರಿಕೇಟರ್‍ಸ್ ಬೀಜಾಡಿಯವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಪಿಯುಸಿಯ ವಿದ್ಯಾರ್ಥಿನಿ ಸುರಕ್ಷಾರವನ್ನು ಸನ್ಮಾನಿಸಲಾಯಿತು. ಕಾರ್ತಿಕ್ ಸ್ವಾಗತಿಸಿ ವಂದಿಸಿದರೆ, ಪ್ರದೀಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಇದು ಬಸವರಾಜ್ ಶೆಟ್ಟಿಗಾರ್ ಅವರಿಗೆ ಸಂದ 575 ನೇ ಸನ್ಮಾನವಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!