Wednesday, September 11, 2024

ಶಿಕಾರಿಪುರದಲ್ಲಿಯೇ ಅಪ್ಪ ಮಕ್ಕಳ ಶಿಕಾರಿ ಆರಂಭ -ಕೆ.ಎಸ್ ಈಶ್ವರಪ್ಪ

ಬೈಂದೂರು: ದೇಶ ಉಳಿಸಬೇಕು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಬೇಕು, ಬಿಜೆಪಿ ಅಪ್ಪ ಮಕ್ಕಳ ಪಕ್ಷ ಎನ್ನುವ ಅಪವಾದ ತಪ್ಪಬೇಕು, ಭಾರತೀಯ ಜನತಾ ಪಕ್ಷ ಇನ್ನೂ ಗಟ್ಟಿಯಾಗಿ ಬೆಳೆಯಬೇಕು ಎನ್ನುವ ಸದುದ್ದೇಶದಿಂದ ಈ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಶಿಕಾರಿಪುರದಲ್ಲಿಯೇ ಅಪ್ಪ ಮಕ್ಕಳನ್ನು ಶಿಕಾರಿ ಮಾಡುತ್ತೇನೆ. ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಅವರು ಉಪ್ಪುಂದದ ದೇವಕಿ ಸಭಾ ಭವನದಲ್ಲಿ ರಾಷ್ಟ್ರ ಭಕ್ತಬಳಗದ ನೇತೃತ್ವದಲ್ಲಿ ನಡೆದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಆರಂಭದಲ್ಲಿಯೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವ ನಾನು. ಈಗ ಕಾಂಗ್ರೆಸನ್ನು ಸೋಲಿಸಿ ಮತ್ತೆ ಮೋದಿಯವರನ್ನು ಪ್ರಧಾನಿಯಾಗಿಸುವುದು ನನ್ನ ಗುರಿ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಹಿಂದುತ್ವದ ಕೊಡುಗೆ ಅಪಾರವಾದುದು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿಯೂ ಹಿಂದುತ್ವವನ್ನು ಕಾಣುತ್ತಿದ್ದೇನೆ. ಎಲ್ಲರ ಆಶಯವೂ ಕೂಡಾ ಒಂದೇ ನರೇಂದ್ರ ಮೋಧಿಯವರು ದೇಶದ ಪ್ರಧಾನಿಯನ್ನಾಗಿ ಮಾಡುವುದು ಎಂದರು.

ಈ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ೧೪೦ ಕೋಟಿ ಜನರ ಅಪೇಕ್ಷೆ ಅದೇ ಆಗಿದೆ. ನರೇಂದ್ರ ಮೋದಿಯವರು ವಿಶ್ವದ ಗಮನ ಸಳೆದ ಪ್ರಧಾನಿ. ಇಡೀ ಪ್ರಪಂಚದ ಎಲ್ಲ ರಾಷ್ಟ್ರಗಳಿಗೂ ಭೇಟಿ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ. ನರೇಂದ್ರ ಮೋದಿಯವರಿಗೆ ವಿಶ್ವದ ಎಲ್ಲ ರಾಷ್ಟ್ರಗಳು ಗೌರವ ನೀಡುತ್ತಿವೆ. ಇದನ್ನು ಕಾಂಗ್ರೆಸ್ ಸಹಿತ ಅದರ ಮಿತ್ರ ಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಸೋಲಿನ ಭೀತಿ ಅದಕ್ಕೆ ಕಾಡುತ್ತಿದೆ ಎಂದರು.

ದೇಶದ ಸೈನಿಕರಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬಿದ ಏಕೈಕ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿಯವರು. ದೇಶದ ರಕ್ಷಣೆ, ಶಾಂತಿ ಸುವ್ಯವಸ್ಥೆಗೆ ಅವರು ವಿಶೇಷ ಒತ್ತು ನೀಡಿರುವುದನ್ನು ಇವತ್ತು ಗಮನಿಸಬಹುದು. ದೇಶಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು, ಪ್ರಧಾನಿ ನರೇಂದ್ರ ಮೋದಿಯವರ ಕೈಬಲಗೊಳಿಸುವುದೇ ನನ್ನ ಗುರಿ ಎಂದರು.

ಮಾಜಿ ಸಚಿವ ಗೂಳಿಹಟ್ಟಿ ಶೇಖರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ತಾಲೂಕು ಪಂಚಾಯತ್ ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಯಶವಂತ ಗಂಗೊಳ್ಳಿ, ಗ್ರಾ.ಪಂ. ಮಾಜಿ ಸದಸ್ಯ ರಾಜು ದೇವಾಡಿಗ ಕಂಚಿಕಾನ್, ರಾಷ್ಟ್ರಭಕ್ತರ ಬಳಗ ಬೈಂದೂರು ಇದರ ಮಂಜುನಾಥ ರಾವ್, ಗಣೇಶ ರಾವ್, ರೇಣುಕಾ, ಚಂದ್ರಯ್ಯ ಆಚಾರ್ಯ, ವಿನೋದ್ ಹೆಬ್ಬಾರ್, ವಿನಯ್ ನಾಯರಿ ನಾವುಂದ ಉಪಸ್ಥಿತರಿದ್ದರು.

ಶ್ರೀಧರ ಬಿಜೂರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೋಪಾಲಕೃಷ್ಣ ನಾಡ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಧರ ದೇವಾಡಿಗ ಬಡಾಕೆರೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!