spot_img
Thursday, December 5, 2024
spot_img

ಅಣಕು ಮತದಾನದ ವೇಳೆ ಬಿಜೆಪಿಗೆ ಹೋದ ಮತಗಳು ? : ಎಲ್‌ಡಿಎಫ್‌ ಗಂಭೀರ ಆರೋಪ

ಜನಪ್ರತಿನಿಧಿ (ಕಾಸರಗೋಡು) : ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ನಡೆಸಲಾದ ಅಣಕು ಮತದಾನದ ವೇಳೆ ವಿದುನ್ಮಾನ ಮತ ಯಂತ್ರ ಅಥವಾ ಇವಿಎಂ ಪ್ಯಾಟ್‌ ನಲ್ಲಿ ದಾಖಲಾದ ಮತವು ತಪ್ಪಾಗಿ ಬಿಜೆಪಿ ಅಭ್ಯರ್ಥಿಗೆ ಹೋಗುತ್ತಿದೆ ಎಂದು ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ ಗಂಭೀರ ಆರೋಪ ಮಾಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಎಲ್‌ಡಿಎಫ್‌ ಹೇಳಿಕೆ ನೀಡಿದೆ.

ಈ ಸಂಬಂಧಿಸಿದ ಮಾತನಾಡಿರುವ ಸಿಪಿಐ(ಎಂ) ಹಿರಿಯ ನಾಯಕ ಕೆ.ಪಿ. ಸತೀಶ್‌ ಚಂದ್ರನ್‌, ನಿನ್ನೆ(ಬುಧವಾರ) ನಡೆದ ಅಣಕು ಮತದಾನದ ಸಂದರ್ಭದಲ್ಲಿ ಎರಡು ಮೂರು ಮತಯಂತ್ರಗಳಲ್ಲಿ ಈ ರೀತಿಯ ದೋಷಗಳು ಕಾಣಸಿಕ್ಕಿವೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಕೂಡ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದೇ ಬರುವ ಏ. 26 ರಂದು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಸಿಪಿಐ(ಎಂ)ನಿಂದ ಎಂ.ವಿ ಬಾಲಕೃಷ್ಣನ್‌, ಕಾಂಗ್ರೆಸ್‌ ನಾಯಕ ಮತ್ತು ಹಾಲಿ ಸಂಸದ ರಾಜಮೋಹನ್‌ ಉನ್ನಿತ್ತನ್‌ ಹಾಗೂ ಬಿಜೆಪಿಯಿಂದ ಎಂ.ಎಲ್‌ ಅಶ್ವಿನಿ ಕಣದಲ್ಲಿ ಸ್ಪರ್ಧಿಸಲಿದ್ದಾರೆ.

ಇನ್ನು, ವಿದ್ಯುನ್ಮಾನ ಮತದಾನ ವ್ಯವಸ್ಥೆ (ಇವಿಎಂ)ಯನ್ನು ಕುಂದಿಸುವ ಪ್ರಯತ್ನ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಇವಿಎಂ ಮತಗಳ ಜತೆಗೆ ಶೇ.100ರಷ್ಟು ವಿವಿಪ್ಯಾಟ್‌(ವೋಟರ್‌ ವೆರಿಫೈಬಲ್‌ ಪೇಪರ್‌ ಆಡಿಟ್‌)ಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾ| ಸಂಜೀವ್‌ ಖನ್ನಾ ಮತ್ತು ನ್ಯಾ| ದೀಪಂಕರ್‌ ದತ್ತಾ ಅವರಿದ್ದ ಪೀಠವು, ಇವಿಎಂ ವ್ಯವಸ್ಥೆಯ ಅಸಲಿಯತ್ತು ಕುರಿತು ಪ್ರಶ್ನಿಸಲಾಗು ತ್ತಿರುವ ವಾದಗಳನ್ನೇ ಪ್ರಶ್ನಿಸಿತು. ಇವಿಎಂಗಳನ್ನು ಜನರು ನಂಬುತ್ತಿಲ್ಲ ಎಂಬ ಖಾಸಗಿ ಅಂಕಿ ಸಂಖ್ಯೆಗಳನ್ನು ನಂಬಬೇಕಿಲ್ಲ ಎಂದು ಹೇಳಿತು.

ವಿಚಾರಣೆ ವೇಳೆ ಅರ್ಜಿದಾರ ಪರ ವಕೀಲ ಪ್ರಶಾಂತ್‌ ಭೂಷಣ್‌ “ಸ್ಟಡಿ ಆಫ್ ಡೆವಲ್‌ಪಿಂಗ್‌ ಸೊಸೈಟಿಸ್‌ (ಸಿಎಸ್‌ಡಿಎಸ್‌) ನಡೆಸಿದ ಸಮೀಕ್ಷೆಯ ಮಾಹಿತಿಯನ್ನು ಮುಂದಿಟ್ಟರು. ಇವಿಎಂಗೆ ಪರ್ಯಾಯವಾಗಿ ಬ್ಯಾಲೆಟ್‌ ಪೇಪರ್‌ ವ್ಯವಸ್ಥೆಗೆ ಮರಳುವುದು ಸೂಕ್ತ ಎಂಬ ವಾದಕ್ಕೆ ಪ್ರತಿಕ್ರಿಯಿಸಿದ ಪೀಠವು, ಬ್ಯಾಲೆಟ್‌ ಪೇಪರ್‌ ವ್ಯವಸ್ಥೆ ಇದ್ದಾಗ ಏನೆಲ್ಲ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತು ಎಂದು ಅಭಿಪ್ರಾಯ ಪಟ್ಟಿತ್ತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!