spot_img
Wednesday, January 22, 2025
spot_img

ಉಡುಪಿ ʼಜಿಲ್ಲೆʼಯಾಗುವಂತಹ ಚಾರಿತ್ರಿಕ ಘಟನೆಗೆ ಕಾರಣೀಭೂತರು ಜಯಪ್ರಕಾಶ್‌ ಹೆಗ್ಡೆ : ಸುಧೀರ್‌ ಕುಮಾರ್‌ ಮುರೋಳಿ

ಜನಪ್ರತಿನಿಧಿ (ಕೋಟೇಶ್ವರ) : ಉಡುಪಿ ʼಜಿಲ್ಲೆʼಯಾಗತಕ್ಕಂತಹ ಚಾರಿತ್ರಿಕ ಘಟನೆ ಇಲ್ಲಿ ಏನಾದರೂ ನಡೆದಿದೆ ಎಂದರೇ ಅದಕ್ಕೆ ಕೆ. ಜಯಪ್ರಕಾಶ್ ಹೆಗ್ಡೆಯವರು ಕಾರಣ. ಈ ಚುನಾವಣೆ ನಡೆಯುತ್ತಿರುವುದು ಸತ್ಯ ಮತ್ತು ಅಸತ್ಯದ ನಡುವೆ, ಸಂವಿಧಾನ ಒಪ್ಪುವವರು ಮತ್ತು ಸಂವಿಧಾನ ಒಪ್ಪದೇ ಇರುವವರ ನಡುವೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸುದೀರ್ ಕುಮಾರ್ ಮುರೋಳಿ ಹೇಳಿದರು.

ಅವರು ಕೋಟೇಶ್ವರ ಪೇಟೆಯಲ್ಲಿ ನಡೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕಾಂಗ್ರೆಸ್ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಏನು ಭರವಸೆ ಕೊಟ್ಟಿದೆಯೋ ಅದನ್ನು ಜನರಿಗೆ ಒದಗಿಸಿದೆ. ಸುಳ್ಳು ಬಿಜೆಪಿಯ ಮನೆ ದೇವರು. ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದೆ. ಈ ಜಿಲ್ಲೆಗೆ ಕಾಂಗ್ರೆಸ್‌ ಕೊಟ್ಟ ಕೊಡುಗೆಯನ್ನು ಬಿಟ್ಟರೇ, ಬಿಜೆಪಿಯವರು ಮಾಡಿರುವ ಒಂದು ಅಭಿವೃದ್ಧಿ ಕೆಲಸವನ್ನು ತೋರಿಸಿಕೊಡಲಿ ಎಂದು ಅವರು ತಾಕೀತು ಮಾಡಿದ್ದಲ್ಲದೇ, ಸತ್ಯ ಎಂದಿಗೂ ಗೆಲ್ಲುತ್ತದೆ, ಅಸತ್ಯ ಸೋಲುತ್ತದೆ ಎಂದು ಅವರು ಹೇಳಿದರು.

ಕೆ. ಜಯಪ್ರಕಾಶ್ ಹೆಗ್ಡೆಯವರು ಸಂಸತ್ ಪಟು, ಬಿಜೆಪಿ ಸದಸ್ಯರು ಕುಸ್ತಿಪಟುಗಳು ಎಂದು ಬಿಜೆಪಿಯ ಶಾಸಕರ ವಿರುದ್ಧ ವ್ಯಂಗ್ಯವಾಡಿದರು.

ಇನ್ನು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಎಮ್‌ ಸುಕುಮಾರ ಶೆಟ್ಟಿ, ಸಮರ್ಥನಾಯಕ ಜನಸಾಮಾನ್ಯರಿಗೆ ಸಂಪರ್ಕಕ್ಕೆ ಸಿಗುವ ಹಾಗಿರಬೇಕು. ಹೆಗ್ಡೆಯವರು ನಿರಂತರ ಜನರ ಸಂಪರ್ಕದಲ್ಲಿದ್ದವರು, ಮುಂದೆಯೂ ಇರುವವರು. ಜಯಪ್ರಕಾಶ್ ಹೆಗ್ಡೆ ಎದರು ಬಿಜೆಪಿಯಿಂದ ಸ್ಪರ್ಧೆಗೆ ನಿಂತವರು ಕೋಟ ಶ್ರೀನಿವಾಸ ಪೂಜಾರಿ ಅವರು ಸುಳ್ಳು ಹೇಳುವುದರ ಮೂಲಕವೇ ತಮ್ಮ ರಾಜಕೀಯ ಜೀವನ ವೃದ್ಧಿಸಿಕೊಂಡಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ, ರಘುಪತಿ ಭಟ್, ಪ್ರಮೋದ್ ಮಧ್ವರಾಜ್ ಅವರನ್ನು ಒಳಗೊಂಡು ನನಗೂ ಟಿಕೇಟ್ ಸಿಗದೇ ಇರುವ ಹಾಗೆ ಮಾಡಿದ್ದು ಇದೇ ಕೋಟ ಶ್ರೀನಿವಾಸ ಪೂಜಾರಿ ಎಂದು ಅವರು ಆರೋಪಿಸಿದರು.

ಸಭೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕುಂದಾಪುರ ಬ್ಲಾಕ್ ನ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!