Sunday, September 8, 2024

ಕುಲಕುಲವೆಂದು ಹೊಡೆದಾಡದಿರಿ ಎಂದು ಸಾರಿದ ಕನಕದಾಸರ ತಂಬೂರಿ ಧ್ವನಿ ಕೇಳಬೇಕು ಎಂದರೇ ಹೆಗ್ಡೆಯವರು ಗೆಲ್ಲಬೇಕು : ನಿಕೇತ್ ರಾಜ್ ಮೌರ್ಯ

ಹೆಗ್ಡೆ ಗೆದ್ದರೇ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವೇ ಗೆದ್ದ ಹಾಗೆ : ನಿಕೇತ್ ರಾಜ್ ಮೌರ್ಯ

ಜನಪ್ರತಿನಿಧಿ (ಕೋಟೇಶ್ವರ) : ಸಮಾಜ ಒಟ್ಟಾಗಿರಬೇಕು ಎನ್ನುವುದೇ ಕಾಂಗ್ರೆಸ್, ಜಾತಿ ಜಾತಿಗಳಲ್ಲಿ, ಧರ್ಮ ಧರ್ಮಗಳ ನಡುವೆ ಭೇದ ತಂದಿಡುವ ಉದ್ದೇಶವೇ ಬಿಜೆಪಿ. ಜಾತಿ, ಮತ, ಧರ್ಮಗಳನ್ನು ಮೀರಿದ ವ್ಯಕ್ತಿತ್ವ ಕೆ. ಜಯಪ್ರಕಾಶ್ ಹೆಗ್ಡೆಯವರದ್ದು. ಹೆಗ್ಡೆಯವರು ಪ್ರಾಮಾಣಿಕತೆ, ಸತ್ಯದ ಮೇಲೆ ನಿಂತವರು. ಕ್ಷೇತ್ರದಲ್ಲಿ ಹೆಗ್ಡೆಯವರ ಗೆಲುವು ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.

ಅವರು ಕೋಟೇಶ್ವರದ ಪೇಟೆಯಲ್ಲಿ ನಡೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಗ್ಯಾರಂಟಿಗಳಿಂದ ಜನ ಸಂಭ್ರಮ ಪಡುತ್ತಿದ್ದಾರೆ. ಯಾವ ಗ್ಯಾರಂಟಿಗಳ ಬಗ್ಗೆ ಅಪಪ್ರಚಾರ ಮಾಡಿದ್ದರೋ, ಅದೇ ಗ್ಯಾರಂಟಿಗಳನ್ನು ಕದ್ದು ಬಿಜೆಪಿ ವಿಧಾನಸಭಾ ಚುನಾವಣೆಗಳನ್ನು ಎದುರಿಸಿದೆ. ಬಿಜೆಪಿಯ ಗ್ಯಾರಂಟಿಗಳು ಪತ್ರಿಕೆಗಳಲ್ಲಿವೆ, ಕಾಂಗ್ರೆಸ್ ಗ್ಯಾರಂಟಿಗಳು ಮನೆಮನೆಗೆ ತಲುಪಿವೆ. ದೇಶದ ಏಳು ಲಕ್ಷ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳನ್ನು ಕಟ್ಟಿಸಿದ್ದು ಕಾಂಗ್ರೆಸ್. ಈ ದೇಶ ಬಾಳಿ ಬೆಳಗಲಿ ಎಂದು ಕನಸು ಕಂಡಿದ್ದು ಕಾಂಗ್ರೆಸ್. ಇದು ಕಾಂಗ್ರೆಸ್ ನ ಬದ್ಧತೆ ಎಂದು ಹೇಳಿದರು.

ಹಿಂದುತ್ವ, ಮಸೀದಿ, ಅಜಾನ್, ಹಿಜಾಬ್, ಹಲಾಲ್ ಕಟ್, ಮಾಂಸ, ಜಗಳ ಇಂತವನ್ನೇ ಮಾಡುವ ಬಿಜೆಪಿ ಬೇಕೋ ಅಥವಾ ಅಭಿವೃದ್ಧಿ, ನಿಮ್ಮ ಮಕ್ಕಳ ಭವಿಷ್ಯ, ಉದ್ಯೋಗ ಸೃಷ್ಟಿಯ ಬಗ್ಗೆ ಚಿಂತಿಸುವ ಮಾತ್ರವಲ್ಲದೇ ಚಿಂತಿಸಿದ್ದನ್ನು ಕಾರ್ಯರೂಪಕ್ಕೆ ತರುವ ಕಾಂಗ್ರೆಸ್ ಸರ್ಕಾರ ಬೇಕೋ ಎಂಬುವುದನ್ನು ಮತದಾರರು ಯೋಚಿಸಿ ಮತದಾನ ಮಾಡುವ ಅಗತ್ಯವಿದೆ ಎಂದು ಅವರು ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಗೆಲ್ಲಬೇಕಾದರೇ, ಕುಲಕುಲವೆಂದು ಹೊಡೆದಾಡದಿರಿ ಎಂದು ಸಾರಿದ ಕನಕದಾಸರ ತಂಬೂರಿ ಧ್ವನಿ ಕೇಳಬೇಕು ಎಂದರೇ, ಬಸವಣ್ಣನ ಆದರ್ಶ, ಅಂಬೇಡ್ಕರ್ ತತ್ವ ಗೆಲ್ಲಬೇಕು ಎಂದರೇ ಜಯಪ್ರಕಾಶ್ ಹೆಗ್ಡೆ ಗೆಲ್ಲಬೇಕು. ಹೆಗ್ಡೆಯವರು ಗೆದ್ದರೇ ಈ ಲೋಕಸಭಾ ಕ್ಷೇತ್ರ ಗೆಲ್ಲುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಉಡಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕಾಂಗ್ರೆಸ್ ಕುಂದಾಪುರ ಬ್ಲಾಕ್ ನ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ,‌ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ,‌  ಅಶೋಕ್‌ ಪೂಜಾರಿ ಬೀಜಾಡಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!