Sunday, September 8, 2024

ಮಾರ್ಕೋಡು ನಾಗಯಕ್ಷೀ ಯಕ್ಷಕೂಟ 4ನೇ ವರ್ಷದ ಯಕ್ಷಪರ್ವ

ಕುಂದಾಪುರ: ನಾಗಯಕ್ಷಿ ದೇವಸ್ಥಾನ ಮಾರ್ಕೊಡು ಇದರ 15ನೇ ವರ್ಷದ ವರ್ಧಂತ್ಯೋತ್ಸವದ ಪ್ರಯುಕ್ತ ನಾಗಯಕ್ಷೀ ಯಕ್ಷಕೂಟ ಮಾರ್ಕೋಡು ಕೋಟೇಶ್ವರ, ಇವರ 4ನೇ ವರ್ಷದ ಯಕ್ಷ ಪರ್ವ ಕಾರ್ಯಕ್ರಮವನು ಪ್ರಸಿದ್ಧ ಭಾಗವತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕೆ ಸುರೇಶ್ ವಿಠಲವಾಡಿ ವಹಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಕೋಟೇಶ್ವರ ಇದರ ಅಧ್ಯಕ್ಷರಾದ ಜಗದೀಶ್ ಮೊಗವೀರ ಮಾರ್ಕೊಡು ಕೋಟೇಶ್ವರ , ಯಕ್ಷ ನುಡಿಸಿರಿ ಬಳಗ ಸಿದ್ದಾಪುರ ಇದರ ಅಧ್ಯಕ್ಷರಾದ ಡಾ. ಜಗದೀಶ್ ಶೆಟ್ಟಿ ಮಾರ್ಕೊಡು, ಸ್ವರ್ಣನೂಪುರ ಕಲಾ ಮಂಡಳಿ ಕುಂದಾಪುರ ಇದರ ಅಧ್ಯಕ್ಷರಾದ ಗಣೇಶ್ ಭಟ್ ಗುಣಗ, ಗುರುಗಳಾದ ಮಂಜುನಾಥ್ ಕುಲಾಲ್ ಐರೋಡಿ ಸಂಘದ ಉಪಾಧ್ಯಕ್ಷರಾದ ಆನಂದ್ ಟೈಲರ್ ಬರೆಕಟ್ಟು, ಕಾರ್ಯದರ್ಶಿಗಳಾದ ಸೀನ ಪೂಜಾರಿ ಮಾರ್ಕೊಡು, ಸಭೆಯಲ್ಲಿ ಉಪಸ್ಥಿತರಿದ್ದರು ಪ್ರಸಿದ್ಧ ಭಗವತರಾದ ರಾಘವೇಂದ್ರ ಆಚಾರ ಜನ್ಸಾಲೆ ಇವರನ್ನು ಸನ್ಮಾನಿಸಲಾಯಿತು ಸಮಾಜ ಸೇವೆಗಾಗಿ ಜಗದೀಶ್ ಮೊಗವೀರ ಮಾರ್ಕೋಡ್ ರವರನ್ನು ಸನ್ಮಾನಿಸಲಾಯಿತು. ಶ್ರಾವ್ಯ ಸಬ್ಲಾಡಿಮನೆ ಸನ್ಮಾನ ಪತ್ರ ವಾಚಿಸಿದರು.
ಕಲಾ ಸೇವೆಗಾಗಿ ಡಾ. ಜಗದೀಶ್ ಶೆಟ್ಟಿ ಮಾರ್ಕೋಡು ಇವರನ್ನ ಸನ್ಮಾನಿಸಲಾಯಿತು. ಇವರ ಸನ್ಮಾನ ಪತ್ರವನ್ನು ಸುದೀಪ್ ವಾಚಿಸಿದರು ಗುರುಗಳಾದ ಮಂಜುನಾಥ್ ಕುಲಾಲ್ ರವರನ್ನು ಗೌರವಿಸಲಾಯಿತು ಮತ್ತು ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.

ಹರಿಶ್ಚಂದ್ರ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ನಾಗಬನ ಭಜನಾ ಸಂಘ ಮಾರ್ಕೊಡು ಇವರ ವತಿಯಿಂದ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಯಿತು. ಸಂಘದಲ್ಲಿ ಹೆಜ್ಜೆ ಹಾಗೂ ತಾಳವನ್ನು ಕಲಿತ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳಿಂದ ಶಿವ ಪಂಚಾಕ್ಷರಿ ಮಹಿಮೆ”ಯಕ್ಷಗಾನ ಪ್ರದರ್ಶನ ನೀಡಲಾಯಿತು. ಶೋಭಾ ಟೀಚರ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸೀನ ಪೂಜಾರಿ ವಂದಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!