spot_img
Sunday, February 15, 2026
spot_img

ವಿಶೇಷ ಚೇತನರು, 85 ವರ್ಷ ಮೇಲ್ಪಟ್ಟ 6100 ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ : ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ

ಉಡುಪಿ :  ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಲಟ್ಟ ಮತದಾನ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಆಗದ 6100 ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು  ಜಿ್ಲ್ಲಾಧಿಕಾರಿ ವಿದ್ಯಾಕುಮಾರಿ ಕೆ ರವರು ತಿಳಿಸಿದರು.
ಅವರು ಕಾಪು ತಾಲೂಕಿನ ಕಲ್ಯಾ ಗ್ರಾಮದ ವಯಸ್ಕ  ಮತದಾತರ ಮನೆಯಲ್ಲಿ ನಡೆದ ಮತದಾನದ ಪ್ರಕ್ರಿಯನ್ನು ವಿಕ್ಷಿಸಿ ಮತಾನಾಡುತ್ತಿದ್ದರು.
ಉಡುಪಿ ಜಿಲ್ಲೆಯಲ್ಲಿ ವಿಶೇಷ ಚೇತನ ಹಾಗೂ 85 ವರ್ಷ ಮೇಲ್ಪಟ  4474, ಹಾಗೂ  ಚಿಕ್ಕಮಗಳೂರು ಜಿಲ್ಲೆಯಲ್ಲಿ 1626 ಸೇರಿದಂತೆ ಒಟ್ಟು 6100 ಮತದಾರರಿಗೆ ಮತದಾನ ಮಾಡಲು ಏಪ್ರಿಲ್ 13 ರಿಂದ 17 ರವರೆಗೆ ಅವಕಾಶ ಕಲ್ಪಿಸಲಾಗುವುದು. ಎಂದರು
ಉಡುಪಿ ಯಲ್ಲಿ 1057 ವಯಸ್ಕ ಮತದಾರರು 216 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ  16 ರವರೆಗೆ, ಕುಂದಾಪುರದಲ್ಲಿ 764 ವಯಸ್ಕ ಮತದಾರರು 197 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ  16,  ರವರೆಗೆ, ಕಾಪು ಕ್ಷೇತ್ರದಲ್ಲಿ 851 ವಯಸ್ಕ ಮತದಾರರು 250 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 13 ರಿಂದ  15      ರವರೆಗೆ , ಕಾರ್ಕಳ ಕ್ಷೇತ್ರದಲ್ಲಿ 854 ವಯಸ್ಕ ಮತದಾರರು 285 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 13 ರಿಂದ  15  ರವರೆಗೆ, ಚಿಕ್ಕಮಗಳೂರು 91 ವಯಸ್ಕ ಮತದಾರರು 28 ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 14 ರಿಂದ  16 ರವರೆಗೆ , ಮೂಡುಗೆರೆ ಯಲ್ಲಿ 237 ವಯಸ್ಕ ಮತದಾರರು 95  ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 15 ರಿಂದ  16 ರವರೆಗೆ, ತರಿಕೇರೆಯಲ್ಲಿ 309 ವಯಸ್ಕ ಮತದಾರರು 123  ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 15 ರಿಂದ  17 ರವರೆಗೆ, ಶೃಂಗೇರಿ ಯಲ್ಲಿ 501 ವಯಸ್ಕ ಮತದಾರರು 247  ಪಿ.ಡ್ಲೂ.ಡಿ. ಮತದಾರರಿಗೆ ಏಪ್ರಿಲ್ 15 ರಿಂದ  16 ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮನೆ ಮನೆ ಮತದಾನಕ್ಕೆ ಅಧಿಕಾರಿಗಳ ತಂಡದಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಬಿ.ಎಲ್.ಓ.  ಮೈಕ್ರೋ ವಿಕ್ಷಕರು  ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಇದ್ದಾರೆ ಮತದಾನ ಪೂರ್ತಿ ಪ್ರಕ್ರಿಯನ್ನು ವಿಡಿಯೋ ಚಿತ್ರಿಕರಣದ ಮೂಲಕ ನಡೆಯಲ್ಲಿದೆ ಗೌಪ್ಯ ಮತದಾನಕ್ಕೆ  ಹೊತ್ತು ನೀಡಲಾಗುವುದು  ಎಂದರು.
ಒಮ್ಮೆ ಮನೆಗೆ ಭೇಟಿ ನೀಡಿದಾಗ ಮನೆಯಿಂದಾಲೇ ಮತದಾನಕ್ಕೆ ಅವಕಾಶ ಕಲ್ಪಿಸುವ ಮತದಾರರು ಮನೆಯಲ್ಲಿ ಇಲ್ಲದೇ ಇದ್ದಲ್ಲಿ ಮತ್ತೊಂದು ಭಾರಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಎಂದ ಅವರು ಸಾಮಾನ್ಯವಾಗಿ ಮತದಾನಕ್ಕೆ ಅವಕಾಶ ಕಲ್ಪಿಸುವ ಸಮಯವನ್ನು ಬಿ.ಎಲ್.ಓ ಗಳು ಮುಂಚಿತವಾಗಿ  ತಿಳಿಸಲಿದ್ದಾರೆ ಎಂದರು .
ಮತಗಟ್ಟೆ ಅಧಿಕಾರಿಗಳನ್ನು ಒಳಗೊಂಡ ತಂಡವು ಮತದಾನ ಮಾಡಲು ಅಗತ್ಯವಿರುವ  ಸಾಮಾಗ್ರಿಗಳಾದ ಮತದಾರರ ಪಟ್ಟಿ, ಮತದಾನವನ್ನು ಗುರುತು ಮಾಡಲು ಪೆನ್ನು, ಇಂಕ್ ಪ್ಯಾಂಡ್ ವಿವಿಧ ನಮೂನೆಯ ಲಕೋಟೆಗಳು, ರಿಜಿಸ್ಟರ್ ಮತದಾನ ಕಂಪಾರ್ಟಮೆಂಟ್ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳೊಂದಿಗೆ ತೆರಳುತ್ತಾರೆ ಎಂದರು.
ಈ  ಸಂದರ್ಬದಲ್ಲಿ  ಕೊಪ್ಪ ತಾಲೂಕಿನ ತಹಸಿಲ್ದಾರ್ ಪ್ರತಿಭಾ, ಆರ್ ಹಾಗೂ ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಇನ್ನಿತರು ಉಪಸ್ಥಿತರಿದ್ದಾರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!