Sunday, September 8, 2024

ಚುನಾವಣಾ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ವಿಶೇಷ ನಿಗಾವಹಿಸಿ – ಬಿ.ಮುರುಳಿ ಕುಮಾರ್

ಉಡುಪಿ: ಮುಕ್ತ ನ್ಯಾಯಸಮ್ಮತ ಪಾರದರ್ಶಕವಾಗಿ ಚುನಾವಣೆ ನಡೆಯಲು ಚುನಾವಣಾ ವೆಚ್ಚ ಸಂಬಂಧ ನಿಗಾವಹಿಸಲು ನಿಯೋಜಿಸಿರುವ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ರಾಜ್ಯ ವಿಶೇಷ ವೆಚ್ಚ ವಿಕ್ಷಕರಾದ ಬಿ.ಮುರುಳಿ ಕುಮಾರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ, ಸಭಾಂಗಣದಲ್ಲಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎನ್ ಫೋಸ್ಮೆಂಟ್ ನೋಡಲ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪ್ರತಿಯೊಬ್ಬ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ವಿಶೇಷ ನಿಗಾವಹಿಸಬೇಕು ಚುನಾವಣಾ ಕಾರ್ಯನಿರ್ವಹಿಸುವಾಗ ಯಾವುದೇ ರೀತಿಯ ಗೊಂದಲವಿದ್ದಲ್ಲಿ ತಕ್ಷಣ ಮೇಲಾಧಿಕಾರಿಗಳ ಸಹಾಯ ಪಡೆಯಬೇಕು ಎಂದರು .
ವಿಧಾನಸಭಾ ಕ್ಷತ್ರದ ವ್ಯಾಪ್ತಿಯಲ್ಲಿ ಕನಿಷ್ಟ 03 ಚೆಕ್ ಪೋಸ್ಟ್ ಗಳನ್ನು ತೆರೆಯಬೇಕು, ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಿ ಹಣ ಮತ್ತು ಮಧ್ಯ ಸೇರಿದಂತೆ ಇನ್ನಿತರ ಸಾಮಾಗ್ರಿಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕು, ವಸ್ತುಗಳಿದ್ದಲ್ಲಿ ಎಲ್ಲಿಂದ ಬರುತ್ತೀವೆ ಯಾವ ಪ್ರದೇಶಕ್ಕೆ ತಲುಪುತ್ತಿದೆ ಎಂಬ ದಾಖಲೆಗಳನ್ನು ಪರಿಶೀಲಿಸಬೇಕು, ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಕಟ್ಟೆಚಾರ ವಹಿಸಬೇಕು 10 ಲಕ್ಷಕ್ಕಿಂತ ಹೆಚ್ಚು ಹಣ ಸಾಗಾಣಿಕೆ ಮಾಡುವಾಗ ಸಿಕ್ಕಲ್ಲಿ ಆದಾಯ ತೆರೆಗೆ ಇಲಾಖಾಧಿಕಾರಿಗಳಿಗೆ  ಹಾಗೂ ಚುನಾವಣಾ ವೆಚ್ಚ ವಿಕ್ಷಕರಿಗೆ ಮಾಹಿತಿ ನೀಡಬೇಕು ಎಂದರು.
ಚುನಾವಣಾ ಆಕ್ರಮಕ್ಕೆ ಸಂಬಂಧಿಸಿದಂತೆ ಕಡಿವಾಣ ಹಾಕಲು ರೂಪಿಸಿರುವ ಸಿ-ವಿಜಿಲ್ ಬಗ್ಗೆ ಅರಿವು ಮೂಡಿಸಬೇಕು ,ಅದರಲ್ಲಿ ದೂರು ನೀಡುವ ಬಗ್ಗೆ ಯಾವ ರೀತಿ  ಆಫ್ ಲೋಡ್ ಮಾಡ ಬೇಕು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು, ಸಿ-ವಿಜಲ್ ಮೂಲಕ ಬಂದ ದೂರುಗಳಿಗೆ ತಕ್ಷಣವೇ  ಸ್ಪದಿಸುವ ಕೆಲಸವಾಗಬೇಕು ಎಂದರು.
ಮತದಾರರಲ್ಲಿ ಮತದಾನದ ಕುರಿತು ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೋಳವಿಕೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವದರೊಂದಿಗೆ ಶೇಕಡವಾರು ಮತದಾನ ಹೆಚ್ಚಿಸಬೇಕು ,ಮತದಾನ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಬೇಸಿಗೆ ಆಗಿರುವ ಹಿನ್ನಲೆಯಲ್ಲಿ ನೆರಳು, ಕುಡಿಯುವ ನೀರು ಸೇರಿದಂತೆ ಇತರೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು,
ಜಿ್ಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಧಿಕಾರಿ ಶ್ರೀಮತಿ ಕೆ.ವಿದ್ಯಾಕುಮಾರಿ ಜಿಲ್ಲೆಯಲ್ಲಿ ಪಾರದರ್ಶಕತೆ  ಚುನಾವಣೆ ನಡೆಸಲು ವಿವಿಧ ತಂಡಗಳನ್ನು ಚುನಾವಣಾ ಆಯೋಗದ ನಿರ್ಧೇಶನದಂತೆ ನೇಮಿಸಿರುವ ಬಗ್ಗೆ ಹಾಗೂ ಚುನಾವಣಾ ಸಿದ್ದತೆಯ ಬಗ್ಗೆ ವಿವರವಾಗಿ ವಿವರಿಸಿದ್ದರು.
ಸಭೆಯಲ್ಲಿ ಜಿ್ಲ್ಲಾ ವೆಚ್ಚ ವಿಕ್ಷಕರಾದ      ಅಲೋಕ್ ಕುಮಾರ್    ಎಂಸಿ..ಸಿ. ನೋಡಲ್ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಪ್ರತೀಕ್ ಬಾಯಲ್ ಹಾಗೂ ಕೋಸ್ಟಲ್ ಗಾರ್ಢ  ನ  ಪೊಲೀಸ್ ವರಿಷ್ಟಧಿಕಾರಿ ಮಿಥುನ್ , ಡಿ.ಎಫ್ ಗಣಪತಿ , ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಹಾಗೂ ಹೆಚ್ಚವರಿ ಪೊಲೀಸ್ ವರಿಷ್ಟ ಅಧಿಕಾರಿ ಸಿದ್ದಲಿಂಗಪ್ಪ ವಿವಿಧ ಸಮಿತಿಯ ನೋಡಲ್ ಅಧಿಕಾರಿಗಳು ಹಾಗೂ ಇನ್ನಿತರು ಉಪಸ್ಥಿತರಿದ್ದರು
 ಸಭೆಯ ನಂತರ ಜಿಲ್ಲಾ ಮಾಧ್ಯಮಾ ಪ್ರಮಾಣಿಕರಣ ಹಾಗೂ ಕಣ್ಣಾಗವಲು ಕಚೇರಿಗೆ, ಸಾಮಾಜಿಕ ಜಾಲತಾಣ ನೀಗ ಸಮಿತಿಯ ಕಚೇರಿಗೆ ಚುನಾವಣಾ ಕಚೇರಿಯ ಕಟ್ರೋಲ್ ರೂಂ ಹಾಗೂ ಸಿ-ವಿಜಲ್ ಕೇಂದ್ರಕ್ಕೆ ಭೇಟಿ ನೀಡಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!