spot_img
Wednesday, January 22, 2025
spot_img

ಕೇಂದ್ರದಲ್ಲಿರುವುದು ಮೋದಿ ಸರ್ಕಾರವಲ್ಲ, ಅದಾನಿ ಸರ್ಕಾರ : ರಾಗಾ ಆರೋಪ

ಜನಪ್ರತಿನಿಧಿ (ತಮಿಳುನಾಡು) : ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ʼಇಂಡಿಯಾʼ ಮೈತ್ರಿಕೂಟ ಗೆಲುವು ಸಾಧಿಸುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಅಂತಿಮಗೊಳ್ಳಲಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಗಾ, ಕೇಂದ್ರದಲ್ಲಿ ಇರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರವಲ್ಲ, ಅದಾನಿ ಸರ್ಕಾರ ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ನರೇಂದ್ರ ಮೋದಿ ಹಾಗೂ ಅದಾನಿ ಅವರ ನೀತಿಗಳು ಕೋಟ್ಯಾಧಿಪತಿಗಳ ಭಾರತ ಹಾಗೂ ಬಡವರ ಭಾರತ ಎಂಬ ಎರಡು ವಿಭಾಗಗಳನ್ನು ದೇಶದಲ್ಲಿ ಸೃಷ್ಟಿಸಿದೆ. ಪ್ರಧಾನಿ ಮೋದಿ ಅವರ ಸರ್ಕಾರ ಅಧಾನಿ ಸರ್ಕಾರವಾಗಿದೆ. ಆದ್ದರಿಂದ ಅದನ್ನು ಅದಾನಿ ಸರ್ಕಾರ ಎಂದು ಕರೆಯಬೇಕೆ ಹೊರತು ಮೋದಿ ಸರ್ಕಾರ ಎಂದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮಾನ ನಿಲ್ದಾಣ, ಹೆದ್ದಾರಿ, ಇತರೆ ಯಾವುದೇ ಮೂಲಭೂತ ಯೋಜನೆಗಳಾಗಲಿ, ಅದನ್ನು ಕೇಂದ್ರ ಸರ್ಕಾರ ಅದಾನಿ ಅವರಿಗೆ ನೀಡುತ್ತದೆ. ಸಂಸತ್ತಿನಲ್ಲಿ ಅದಾನಿ ವಿಷಯವನ್ನು ಪ್ರಸ್ತಾಪಿಸಿದ ಫಲವಾಗಿ ನನ್ನ (ರಾಹುಲ್‌ ಗಾಂಧಿ) ಲೋಕಸಭಾ ಸದಸ್ಯತ್ವವನ್ನು ಸರ್ಕಾರ ಕಸಿದುಕೊಂಡಿತ್ತು. ದೇಶದ ಬಡಜನರಿಗೆ ಮೋದಿ ಸರ್ಕಾರ ಏನೂ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಸಂವಿಧಾನ ಸಾಮಾನ್ಯ ಪುಸ್ತಕವಲ್ಲ,ಅದು ದೇಶದ ಜನರ ಆತ್ಮ ಮತ್ತು ಧ್ವನಿಯಾಗಿದೆ. ಆ ಆತ್ಮ ಹಾಗೂ ಧ್ವನಿಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ ಆಕ್ರಮಣ ಮಾಡುತ್ತಿದೆ. ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೇ ಸಂವಿಧಾನವನ್ನು ಬದಲಾಯಿಸಲಾಗುವುದು ಎಂದು ಬಿಜೆಪಿ ಸಂಸದರೇ ಬಹಿರಂಗವಾಗಿ ಹೇಳಿದ್ದಾರೆ ಎಂದು ರಾಗಾ ಆರೋಪಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!