spot_img
Thursday, December 5, 2024
spot_img

ಇಂದು ಕೇಸರಿ ಹಸಿರು ಕಲರವ ! ನಾಳೆ ಕೇಸರಿ ಹಸಿರು ಸಮರವ ?

ಇಂದು ಎಲ್ಲೂ ನೇೂಡಿದರು ಕೇಸರಿ, ಹಸಿರು ಶಾಲು ಬಾವುಟಗಳ ಕಲರವ. ಹಸಿರಿಗ್ಗಿಂದು ಗಜಕೇಸರಿ ಯೇೂಗ. ಇಂದಿನ ಈ ಸಮ್ಮಿಲನ ವೈಭವ ನೇೂಡಿದರೆ ಹಸಿರು ಕೇಸರಿ ನುಂಗಿತ್ತೊ? ಕೇಸರಿ ಹಸಿರು ನುಂಗಿತ್ತೊ ? ಅನ್ನುವಷ್ಟರ ಮಟ್ಟಿಗೆ ಸ್ನೇಹ ಸಮ್ಮಿಲನ. ಇಂದಿನ ಲೇೂಕ ಸಮರದಲ್ಲಿ ಮೂಡಿಬಂದ ಬಿಜೆಪಿ ಜೆಡಿಎಸ್ ಮೈತ್ರಿ ನೇೂಡಿದರೆ ಎರಡು ಆತ್ಮಗಳು ಒಂದಾದ ರೀತಿಯಲ್ಲಿ ಸಂಭ್ರಮಿಸುವಂತಿದೆ. ಕೇಸರಿ ಹಸಿರುಗಳು ಒಂದಾಗಿ ಲೇೂಕ ಸಮರಕ್ಕೆ ಅಣಿಯಾಗಿರುವುದಂತೂ ಸತ್ಯ.

ಇದೊಂದು ನೈಸರ್ಗಿಕ ಸಮ್ಮಿಲನ ಅನ್ನುವುದು ಊರೂರು ಸುತ್ತಿ  ಬಸವಳಿದು ಬಂದ ಮಾಜಿ ಮುಖ್ಯಮಂತ್ರಿ ಜಗದೀಶರ ಮಾತು. ಹಾಗಾದರೆ ಈ ಮೈತ್ರಿ ಪವಿತ್ರವೊ ? ಅಪವಿತ್ರವೊ? ಆದರ್ಶತನವೊ? ಅನಿವಾರ್ಯತೆಯೊ? ಈ ಮೈತ್ರಿ ಇಂದಿಗೊ ನಾಳೆಗೂ. ಅನ್ನುವುದರ ಕುರಿತಾಗಿ ವಿಶ್ಲೇಷಿಸಬೇಕಾದ ಕಾಲ ಘಟ್ಟದಲ್ಲಿ ನಾವಿದ್ದೇವೆ.

ಈ ಹಸಿರು ಕೇಸರಿ ಮೈತ್ರಿ  ಮೊದಲಾಗಿ ಯಾರಿಗೆ ಅನಿವಾರ್ಯವಾಗಿತ್ತು. ಹಸಿರಿಗೊ? ಕೇಸರಿಗೊ ? ಅನ್ನುವ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಇದರ ಮೊದಲ ಅನಿವಾರ್ಯತೆ ಬಂದಿರುವುದೇ ಹಸಿರಿಗೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಹಸಿರು ಸೀರೆ ಉಟ್ಟು ತೆನೆಹೊತ್ತು ನಿಂತ ನಾರಿಗೆ ಇನ್ನು ಹೆಚ್ಚು ಕಾಲ ನಿಲ್ಲುವ ಪರಿಸ್ಥಿತಿ ಇಲ್ಲ ಅನ್ನುವುದನ್ನು ಕಾಲವೇ ಕರೆದು ಹೇಳುವಂತಿತ್ತು. ಹಾಗಾಗಿ ಕೊಳದಲ್ಲಿ ಸಮೃದ್ಧಿಯಾಗಿ ಬೆಳೆದು ನಿಂತ ತಾವರೆಯ ಕೇಸರಿ ಸಿರಿಗೆ ತಲೆಬಾಗಲೇ ಬೇಕಾದ ಅನಿವಾರ್ಯತೆ ಬಂತು. ಅಂತೂ  ಇಷ್ಟು ವರುಷಗಳ ಕಾಲ ತೆನೆ ಹೊತ್ತು ನಿಂತ ಕುಟುಂಬದ ಕೂಡಿಗಳಾದರೂ ತಮ್ಮ ಭವಿಷ್ಯವನ್ನಾದರೂ ಕಟ್ಟಿಕೊಳ್ಳಲಿ ಅನ್ನುವ ಕಾರಣಕ್ಕಾಗಿಯೇ ಪ್ರತಿಷ್ಠೆ ಸ್ವಾಭಿಮಾನವನ್ನೆಲ್ಲಾ ಬದಿಗಿಟ್ಟು ಕಮಲಳ ಕೇಸರಿ ಸಿರಿಗೆ ಶಿರಬಾಗಿ ಸ್ನೇಹ ಹಸ್ತ ನೀಡಬೇಕಾದ ಅಸಹಾಯಕ ಸ್ಥಿತಿ ತೆನೆ ಹೊತ್ತ ಮಹಿಳೆಗೆ. ಅಂದರೆ ಇದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಮೊದಲ ಭಾಗವಾದರೆ ದ್ವೀತಿಯ ಭಾಗ ಹೇಗಿದೆ ನೇೂಡೇೂಣ.

ಹಾಗಾದರೆ ಕೇಸರಿಗೇಕೆ ಈ ಹಸಿರಿನ ಸಹವಾಸ ಅನ್ನುವ ಪ್ರಶ್ನೆ ಉದ್ಭವಿಸುವುದು ಸಹಜ ತಾನೆ?ಈ ಕೇಸರಿ ವಣ೯ದ ತಾವರೆಯ ಸಮೃದ್ಧಿ ಬೆಳವಣಿಗೆಗೆ ಪೂರಕವಾದ  ಮಣ್ಣು ಹಳೆ ಮೈಸೂರು ನೆಲದಲ್ಲಿ ಇಲ್ಲ.ಈ ಮಣ್ಣು ಫಲವತ್ತಾಗಿ ಈ ತಾವರೆಗೆ ಸಿಗ ಬೇಕಾದರೆ ಹಸಿರು ಮಣ್ಣಿನ ಸಹಾಯದ ಅಗತ್ಯತೆ ಈ ತಾವರೆಗೂಇತ್ತು.ಬಂದಿದ್ದೆ ಲಾಭ ಕಳೆದುಕೊಳ್ಳುವುದೇನು ಇಲ್ಲ..ಅನ್ನುವ ಕಾರಣಕ್ಕಾಗಿಯೇ ಕೇಸರಿ ತಾವರೆ ಈ ನೆಲದಲ್ಲಿ ಹಸಿರನ್ನು ಆಶ್ರಯಿಸ ಬೇಕಾಯಿತು.ಇದು ದ್ವೀತಿಯ ಭಾಗದ ಕಥೆಯಾದರೆ ಅಂತಿಮ ಭಾಗದ ಕಥೆ ಏನಾಗ ಬಹುದು? ಅನ್ನುವುದು ಇನ್ನೂ ಕುತೂಹಲಕಾರಿ ಭವಿಷ್ಯದ ಕಥೆ..?

ಇಂದು ಲೇೂಕ ಸಮರ ಹಾಗಾಗಿ ಈ ಮೈತ್ರಿ ಯಲ್ಲಿ ಹೆಚ್ಚೇನೂ ಲೆಕ್ಕಾಚಾರದ ಪ್ರಶ್ನೆ ಇಲ್ಲ.ಏನ್ನಿದರೂ ಮೂರು ಸೀಟ್ ಜೆಡಿಎಸ್  ಕುಟುಂಬಕ್ಕೆ ಕೊಟ್ಟರಾಯಿತು.ಹೇಗಿದ್ದರು ನಾವು ಕಾರ್ಯಕತ೯ರು..ಪತಾಕಿ ಹಾರಿಸಿ ಶಾಲು ಬೀಸಿ ಕುಣಿದರಾಯಿತು.ಆದರೆ ಇಲ್ಲಿ ಸಮಸ್ಯೆ ಬರುವುದು ಸ್ಥಳೀಯ  ಚುನಾವಣೆ ವಿಧಾನಪರಿಷತ್ ಚುನಾವಣೆ ವಿಧಾನ ಸಭಾ ಚುನಾವಣೆಗಳಲ್ಲಿ .ಬಹು ಮುಖ್ಯ ವಾಗಿ ಹಳೆ ಮೈಸೂರು ಭಾಗಗಳಲ್ಲಿ .ತಳ ಮಟ್ಟದಲ್ಲಿ ಸಮೃದ್ಧಿಯಾಗಿ ಬೆಳೆದಿರುವ ಹಸಿರಿನ ಜೊತೆ ಕೇಸರಿಗಳು ಒಂದಾಗಿ ಬಾಳುವುದು ತುಂಬಾ ಕಷ್ಟ.ಇದರ ಪ್ರಸವ ವೇದನೆ ಮುಂದಿನ ದಿನಗಳಲ್ಲಿ ಅನುಭವಿಸ ಬೇಕಾಗ ಬಹುದು ಅನ್ನುವುದು ರಾಜಕೀಯ ವಿಶ್ಲೇಷಕರ ಭವಿಷ್ಯದ ನುಡಿ..ಹಾಗಾಗಿಯೇ ಇದಾಗಲೇ ಹಸಿರು ತಲೆಯ ಕಾರ್ಯ ಕತ೯ರು ಕೈ..ಕೈ..ಜೇೂಡಿಸಿ ಕಾಂಗ್ರೆಸ್ ನತ್ತ ನಡೆಯುತ್ತಿದ್ದಾರೆ ಅನ್ನುವುದು ಕೂಡಾ ಅಷ್ಟೇ ಸತ್ಯ.

ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!