Sunday, September 8, 2024

ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಮೂಡುಬಿದಿರೆ ಡಿಸಿ‌ಎಂ ವಿದ್ಯಾರ್ಥಿಗಳ ಅಧ್ಯಯನ ಪ್ರವಾಸ

ಕುಂದಾಪುರ: ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ಮೂಡುಬಿದಿರೆ ಇಲ್ಲಿನ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ಕೋರ್ಸ್ (ಡಿಸಿ‌ಎಂ) ವಿದ್ಯಾರ್ಥಿಗಳು ಅಧ್ಯಯನ ಪ್ರವಾಸದ ಅಂಗವಾಗಿ ಬೈಂದೂರು ತಾಲೂಕಿನ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು.

ತೀರಾ ಗ್ರಾಮಾಂತರ ಪ್ರದೇಶದಲ್ಲಿ ೨೦೦೨ರಲ್ಲಿ ಮುದೂರು ಒಂದು ಗ್ರಾಮದ ಕಾರ್ಯವ್ಯಾಪ್ತಿಯನ್ನು ಹೊಂದಿ ಆರಂಭಗೊಂಡ ಸಂಘ ಇವತ್ತು ೩ ಸಾವಿರ ಸದಸ್ಯರನ್ನು ಹೊಂದಿ, ಸುಸಜ್ಜಿತವಾದ ಸ್ವಂತ ಕಟ್ಟಡ, ಉತ್ತಮ ಲಾಭ ಗಳಿಕೆ, ಸೇವಾ ವಲಯದಲ್ಲಿಯೂ ಸಹಕಾರ ಕ್ಷೇತ್ರದಲ್ಲಿ ಹಲವಾರು ವಿಭಿನ್ನ ಸೇವೆಯನ್ನು ಆರಂಭಿಸಿ ಗಮನ ಸಳೆದಿದೆ. ಶವ ಸಂರಕ್ಷಣೆ ಮಾಡುವ ಘಟಕ, ಶವ ದಹನ ಮಾಡುವ ಯಂತ್ರವನ್ನು ಗ್ರಾಮೀಣ ಭಾಗಕ್ಕೆ ಪರಿಚಯಿಸಿದ ಈ ಸಂಘದ ಕಾರ್ಯವೈಖರಿಯನ್ನು ಅಧ್ಯಯನಾರ್ಥಿಗಳು ವೀಕ್ಷಣೆ ಮಾಡಿದರು.

ಸಂಘದ ಅಧ್ಯಕ್ಷರಾದ ವಿಜಯ ಶಾಸ್ತ್ರೀ ಅವರು ಸಂಘದ ಬೆಳವಣಿಗೆ, ಸಾಧನೆ, ಸೇವೆಯ ಬಗ್ಗೆ ಮಾಹಿತಿ ನೀಡಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿ ಸಂಘದ ಆಡಳಿತಾತ್ಮಕ ವಿಚಾರಗಳನ್ನು ಅಧ್ಯಯನಾರ್ಥಿಗಳಿಗೆ ವಿವರಿಸಿದರು.

ಕೆ.ಐ.ಸಿ.ಎಂ ಮೂಡುಬಿದಿರೆ ಇಲ್ಲಿನ ಪ್ರಾಂಶುಪಾಲರಾದ ಡಾ.ಎಂ. ವಿಶ್ವೇಶ್ವರಯ್ಯ ಸಂಘದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಕ್ತ ಉತ್ತರ ನೀಡಿದರು.

ಹಿರಿಯ ಉಪನ್ಯಾಸಕಿ ಬಿಂದು ಬಿ. ನಾಯರ್, ಸಂಘದ ನಿರ್ದೇಶಕರಾದ ಸುವರ್ಣ ಕುಮಾರ್, ಸುಶೀಲ, ನಿಶಾಂತ್ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ವತಿಯಿಂದ ಪ್ರಾಂಶುಪಾಲರಾದ ಡಾ.ಎಂ. ವಿಶ್ವೇಶ್ವರಯ್ಯ, ಹಿರಿಯ ಉಪನ್ಯಾಸಕಿ ಬಿಂದು ಬಿ. ನಾಯರ್ ಅವರನ್ನು ಗೌರವಿಸಲಾಯಿತು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಸಿಬ್ಬಂದಿ ಮಂಜುನಾಥ ಪೂಜಾರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!