Wednesday, September 11, 2024

ವಂಡ್ಸೆಯಲ್ಲಿ 20 ದಿನಗಳ ಕರಾಟೆ ಬೇಸಿಗೆ ಶಿಬಿರ

ಕುಂದಾಪುರ, ಎ.6: ಅಕಾಡೆಮಿ ಆಫ್ ಮಾರ್ಷಲ್ ಆರ್ಟ್ಸ್ ವತಿಯಿಂದ ಸ್ತ್ರೀ ಸ್ವರಕ್ಷಣೆ, ಮಕ್ಕಳ ಅಭ್ಯುದಯ, ಸಾಮಾನ್ಯ ಪ್ರಜೆಯಿಂದ ಎಲ್ಲಾ ವರ್ಗದವರೆಗೂ 20 ದಿನದ ಕರಾಟೆ ಬೇಸಿಗೆ ಶಿಬಿರ ವಂಡ್ಸೆಯಲ್ಲಿ ಎಪ್ರಿಲ್ 10ರಿಂದ ಎಪ್ರಿಲ್ 29ರ ತನಕ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯ ತನಕ ವಂಡ್ಸೆ ಸಬ್ಲಾಡಿ ಕಾಂಪ್ಲೆಕ್ಸ್, (ಕೆನರಾ ಬ್ಯಾಂಕ್ ಹಿಂಭಾಗ) ಇಲ್ಲಿ ನಡೆಯಲಿದೆ ಎಂದು ಸಂಸ್ಥೆಯ ತಾಂತ್ರಿಕ ನಿರ್ದೇಶಕರಾದ ರೆನ್ಸಿ ಹೆಚ್.ಚಂದ್ರಶೇಖರ ಹೇಳಿದರು.

ಅವರು ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.

ಈ ತರಬೇತಿಯಲ್ಲಿ ಸ್ತ್ರೀ ಸ್ವರಕ್ಷಣೆ, ಮಕ್ಕಳ ಅಭ್ಯುದಯ ಹಾಗೂ 6 ವರ್ಷದಿಂದ 60 ವರ್ಷದವರೆಗಿನ ಎಲ್ಲರಿಗೂ ಅವಕಾಶ ಒದಗಿಸಲಾಗಿದೆ. ತರಬೇತಿ ಸಮಯ ಬೆಳಿಗ್ಗೆ 7 ರಿಂದ 8 ಗಂಟೆಯ ತನಕ ನಡೆಯಲಿದೆ. ಎಪ್ರಿಲ್ 10ರ ಸಂಜೆ ಉದ್ಘಾಟನೆಗೊಳ್ಳಲಿದೆ ಎಂದರು.

1983ರಲ್ಲಿ ಕುಂದಾಪುರದ ಭಂಡಾರ್ಕಾಸ್ ಕಾಲೇಜು ಕೊಯಕುಟ್ಟಿ ಹಾಲಿನಿಂದ ಪ್ರಾರಂಭವಾದ ನಮ್ಮ ಸಂಸ್ಥೆಯ ತರಬೇತಿ ಇಲ್ಲಿಯವರೆಗೆ ದೇಶದಾದ್ಯಂತ 20 ಸಾವಿರಕ್ಕೂ ಹೆಚ್ಚು ಜನಸಾಮಾನ್ಯರು, 10 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಅಬಲೆಯರು, ಸ್ತ್ರೀಯರು, ಮಕ್ಕಳು, ಸಂರಕ್ಷಣಾ ಕಲೆ, (ಸೆಲ್ಫ್ ಡಿಪೆನ್ಸ್) ನಲ್ಲಿ ತರಬೇತಿ ಕೊಡುತ್ತಾ ಹಲವಾರು ಪ್ರತಿಷ್ಟಿತ ಕರಾಟೆ ಪಂದ್ಯಾವಳಿಗಳಲ್ಲಿ ಪದಕ, ಪಡೆದುಕೊಂಡಿದೆ. ಪುರಸ್ಕಾರಗಳನ್ನು ಪಡೆದುಕೊಂಡಿದೆ ಎಂದರು.

ಹೆಚ್ಚಿನ ಮಾಹಿತಿಗೆ ಈ 7259321123 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದರು. ಸುದ್ಧಿಗೋಷ್ಠಿಯಲ್ಲಿ ಸದಾಶಿವ ಮಯ್ಯ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!