Tuesday, April 30, 2024

ಲೋಕಸಭಾ ಚುನಾವಣೆ : ನೀತಿ ಸಂಹಿತೆ ಉಲ್ಲಂಘನೆ ಕ್ಷಿಪ್ರ ಕಾರ್ಯಾಚರಣೆಗೆ ಒತ್ತು

ಜನಪ್ರತಿನಿಧಿ (ಬೆಂಗಳೂರು) : ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಜಾರಿಯಲ್ಲಿರುವ ಚುನಾವಣಾ ನೀತಿಯನ್ನು ಕಟ್ಟುನಿಟ್ಟಾಗಿ ನಿಭಾಯಿಸಲಾಗುತ್ತಿದ್ದು, ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ವಸ್ತುಗಳು ಇತ್ಯಾದಿ ಅಕ್ರಮ ಸಾಗಣೆ ವಿರುದ್ಧ ರಾಜ್ಯಾದ್ಯಂತ ಹದ್ದಿನಕಣ್ಣಿರಿಸಲಾಗಿದೆ.

ಲೋಕಸಭೆ ಚುನಾವಾಣೆ ೨೦೨೪ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಉಲ್ಲಂಘನೆ ಕ್ಷಿಪ್ರ ಕಾರ್ಯಾಚರಣೆಗೆ ಒತ್ತು ನೀಡಲಾಗಿದ್ದು, ನಗದು, ಮದ್ಯ, ಡ್ರಗ್ಸ್‌, ಬೆಲೆಬಾಳುವ ಲೋಹ ಹಾಗೂ ಉಚಿತ ಉಡುಗೊರೆ ವಶಪಡಿಸಿಕೊಂಡು ಸುಮಾರು 1,205 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿವೆ.

ಅಬಕಾರಿ ಇಲಾಖೆ ಘೋರ ಅಪರಾಧ ಅಡಿಯಲ್ಲಿ 1,248 ಪ್ರಕರಣಗಳು ದಾಖಲಾಗಿದ್ದರೇ, ಪರವಾನಿಗೆ ಉಲ್ಲಂಘನೆ ಅಡಿಯಲ್ಲಿ 1,203 ಪ್ರಕರಣಗಳು, ಎನ್‌ಡಿಪಿಎಸ್‌ ಅಡಿಯಲ್ಲಿ 79, ಕರ್ನಾಟಕ ಅಬಕಾರಿ ಕಾಯ್ದೆ 1965ರ ಸೆಕ್ಷನ್‌ 15(ಎ) ಅಡಿಯಲ್ಲಿ 5,327 ಪ್ರಕರಣಗಳು ದಾಖಲಾಗುವುದರ ಜೊತೆಗೆ 732 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಹಿರಿ ನೀಡಿದೆ.

Related Articles

Stay Connected

21,961FansLike
3,912FollowersFollow
21,700SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!