Saturday, September 14, 2024

ತೆಕ್ಕಟ್ಟೆ: ವಿಶ್ವ ವಿನಾಯಕ ಗ್ರಾಜ್ಯುಯೇಶನ್ ಡೇ

ತೆಕ್ಕಟ್ಟೆ: ವಿಶ್ವ ವಿನಾಯಕ ಸಿ.ಬಿ.ಎಸ್‌ಇ ಸ್ಕೂಲ್ ತೆಕ್ಕಟ್ಟೆ ಇಲ್ಲಿನ ಯು.ಕೆ.ಜಿ. ಮಕ್ಕಳ ಗ್ರಾಜ್ಯುಯೇಶನ್ ಡೇ ಕಾರ್‍ಯಕ್ರಮವನ್ನು ಆಯೋಜಿಸಲಾಗಿತ್ತು. ಅತಿಥಿಗಳಾಗಿ ಆಗಮಿಸಿದ ನಿವೃತ್ತ ದೈಹಿಕ ಶಿಕ್ಷಕ ಸದಾರಾಮ ಶೆಟ್ಟಿ ಮಲ್ಯಾಡಿಯವರು ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಪ್ರಾರಂಭಿಕ ಬೆಳವಣಿಗೆ ಹಾಗೂ ಕಲಿಕೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾಗಿರುತ್ತದೆ. ಹಾಗೂ ಪೋಷಕರು ವಿದ್ಯಾರ್ಥಿಗಳಿಗೆ ತಾವು ಸನ್ನಡತೆ ಹಾಗೂ ಸಂಸ್ಕಾರಯುತ ಗುಣಗಳನ್ನು ಸ್ವಯಂ ಪಾಲನೆ ಮಾಡಿ ಮಾದರಿಯಾದರೆ ಮಾತ್ರ ಮಕ್ಕಳಲ್ಲಿ ಉತ್ತಮ ಗುಣ ನಡತೆಗಳನ್ನು ಅಪೇಕ್ಷಿಸಬಹುದಾಗಿದೆ ಎಂದು ತಿಳಿಸಿದರು. ಮಕ್ಕಳ ಸೂಕ್ಷ್ಮ ಮನಸ್ಸಿನ ಬೆಳವಣಿಗೆಗೆ ಉತ್ತಮ ವಾತಾವರಣ ಕಲ್ಪಿಸಿ ಕೊಡುವುದು ಪೋಷಕರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಸಭಾಧ್ಯಕ್ಷತೆ ವಹಿಸಿದ ಶಾಲಾ ಮೇನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಾಲೆ ಹಾಗೂ ಪೋಷಕರ ಸಮಾನ ಪಾತ್ರ ಇದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಆIಇಖಿ ಪ್ರಾಂಶುಪಾಲರಾದ ದಿವಾಕರ ಶೆಟ್ಟಿ ಹೆಚ್ ರವರು ಮಾತನಾಡಿ ಮಕ್ಕಳ ಬೆಳವಣಿಗೆಯ ಪ್ರತಿ ಹಂತಗಳನ್ನು ಪೋಷಕರು ಗಮನಿಸಿ ಸೂಕ್ತ ಮಾರ್ಗದರ್ಶನ ಮಾಡಬೇಕೆಂದು ತಿಳಿಸಿದರು.

ಕಾರ್‍ಯಕ್ರಮದಲ್ಲಿ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್ ಪ್ರಭಾಕರ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ ಕರುಣಾಕರ ಶೆಟ್ಟಿ, ಶೈಕ್ಷಣಿಕ ನಿರ್ದೇಶಕ ದಿವಾಕರ ಶೆಟ್ಟಿ ಹೆಚ್ ಅತಿಥಿಗಳಾದ ಸದಾರಾಮ ಶೆಟ್ಟಿ ಮಾಲ್ಯಾಡಿ, ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾ, ಪ್ರಿಸ್ಕೂಲ್ ಸಂಯೋಜಕಿ ವಿಲಾಸಿನಿ ಶೆಟ್ಟಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬಂದಿಯವರು ಉಪಸ್ಥಿತರಿದ್ದರು.

ಕಾರ್‍ಯಕ್ರಮದಲ್ಲಿ ಸೆಲ್ಫಿ ಕಾರ್ನರ್ ಹಾಗೂ ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.
ಪ್ರಾಂಶುಪಾಲ ನಿತಿನ್ ಡಿ ಆಲ್ಮೇಡಾರವರು ಸ್ವಾಗತಿಸಿದರು, ಶ್ರೀಮತಿ ವಿಲಾಸಿನಿ ಶೆಟ್ಟಿ ವಂದಿಸಿದರು, ಹಾಗೂ ಶ್ರೀಮತಿ ಕೃಪಾಶ್ರೀ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!