spot_img
Wednesday, April 1, 2026
spot_img

ಮೆಕ್ಯಾನಿಕ್ ಸುಧಾಕರ್ ಆಚಾರ್ ನಿಧನ

ಕುಂದಾಪುರ: ಕುಂದಾಪುರದ ನುರಿತ ಮೆಕ್ಯಾನಿಕ್ ಸುಧಾಕರ್ ಆಚಾರ್ (63 ವ) ಅನಾರೋಗ್ಯದಿಂದ ಎ.2ರಂದು ನಿಧನರಾದರು.

ಕುಂದಾಪುರ ಮುಖ್ಯರಸ್ತೆಯ ಕಾಳಿಕಾಂಬಾ ಎಂಜಿನಿಯರಿಂಗ್ ವರ್ಕ್ಸ್ ಮಾಲಕರಾಗಿದ್ದ ಇವರು ದ್ವಿಚಕ್ರ ವಾಹನ, ಜನರೇಟರ್, ಪಂಪ್ ಸೆಟ್ ದುರಸ್ತಿಯಲ್ಲಿ ಅಪಾರ ಜನಮನ್ನಣೆ ಗಳಿಸಿದ್ದರು. ಇವರು ಅಂದಿನ ಪ್ರಸಿದ್ಧ ಮೆಕ್ಯಾನಿಕ್ ದಿ|ಬಾಬು ಆಚಾರ್ ಪುತ್ರರಲ್ಲಿ ಓರ್ವರು. ಸುಧಾಕರ ಆಚಾರ್ ಅವಿಭಜಿತ ಕುಂದಾಪುರ ತಾಲೂಕಿನಾದ್ಯಂತ ಕೃಷಿಕರ ಪರಿಚಿತರಾಗಿದ್ದರು. ಪಂಪ್ ಸೆಟ್ ದುರಸ್ತಿಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಪಂಪ್ ಸೆಟ್ ಕೆಟ್ಟು ಹೋಯಿತು ಎಂದಾಗ ತಕ್ಷಣ ನೆನಪಾಗುತ್ತಿದ್ದ ಹೆಸರು ಸುಧಾಕರ ಆಚಾರ್. ಕಾಲ ಬದಲಾದಂತೆ ಸೀಮೆ ಎಣ್ಣೆ ಪಂಪ್ ಸೆಟ್‌ಗಳು ನೆನೆಗುದಿಗೆ ಸರಿದವು. ಆದರೂ ಕೂಡಾ ಜನರೇಟರ್ , ದ್ವಿಚಕ್ರ ವಾಹನ ದುರಸ್ತಿ ಕಾರ್ಯ ನಡೆಸುತ್ತಿದ್ದರು.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!