spot_img
Thursday, December 5, 2024
spot_img

“ಗ್ಯಾರಂಟಿ” ಎನ್ನುವ ರಾಜಕೀಯ ಭರವಸೆಯ ಅನ್ವೇಷಣೆಯ ಹಿಂದೆ ಒಂದು ಅಧ್ಯಯನ ವರದಿ.

ರಾಜಕೀಯ ಅಂದರೆ ಭರವಸೆ, ಭರವಸೆ ಅಂದರೆ ರಾಜಕೀಯ ಅನ್ನುವ ಮಾತಿದೆ. ಈ ಭರವಸ ಎಲ್ಲವೂ ಈಡೆರುತ್ತದೆ ಎನ್ನುವುದು ಕೂಡ ಭರವಸೆಯ ಮಾತಲ್ಲ. ಹಾಗಾಗಿಯೇ ಈ ಭರವಸೆಯನ್ನು  ಜನ ನಂಬಬೇಕಲ್ಲ ಅದಕ್ಕೆ ಇನ್ನಷ್ಟು ಭರವಸೆ ತುಂಬಿಸುವ ಸಲುವಾಗಿ ಹುಟ್ಟಿ ಕೊಂಡ ಪದವೇ ಗ್ಯಾರಂಟಿ..” ನಮ್ಮದು ಕೇವಲ ಭರವಸೆ ಅಲ್ಲ, ಗ್ಯಾರಂಟಿ. ಹಾಗಾದರೆ ಈ ಗ್ಯಾರಂಟಿಗೇನು ಗ್ಯಾರಂಟಿ ? ಎನ್ನುವ ಸಂಶಯ ಹುಟ್ಟಿಕೊಂಡಾಗ ನಾವು ಇದನ್ನು ಲಿಖಿತವಾಗಿ ಕೊಡುತ್ತೇವೆ. ಅನ್ನುವ ಇನ್ನೊಂದು ವಿಶ್ವಾಸದ ಗ್ಯಾರಂಟಿ. ಅಂತೂ ಈ ಗ್ಯಾರಂಟಿ ಎನ್ನುವ ಪದ ರಾಜಕೀಯದಲ್ಲಿ ಇನ್ನಷ್ಟು ಗ್ಯಾರಂಟಿ ಆಗಿ ಅಂಟಿ ಕೊಂಡಿದೆ. ಇಂದು ಈ ಗ್ಯಾರಂಟಿ ಎನ್ನುವ ಪದ ಎಷ್ಟು ಪ್ರಭಾವ ಬೀರಿದೆ ಅಂದರೆ ಹಿಂದೆ ಈ ಗ್ಯಾರಂಟಿ ಪದವನ್ನು ಕೇಳಿಯೇ ಹಿಯಾಳಿಸುತ್ತಿದವರು ಕೂಡಾ ನಮ್ಮದು ಕೂಡಾ  ಗ್ಯಾರಂಟಿ ಎನ್ನುವ ಮಟ್ಟಿಗೆ ಅವರನ್ನು ಕೂಡಾ ಗ್ಯಾರಂಟಿಗೆ ತಳ್ಳಿ ಬಿಟ್ಟಿದೆ. ಅಂತೂ ಇದಿಷ್ಟು ನಮ್ಮ ಗ್ಯಾರಂಟಿ ಪದದ ಪ್ರಾಸ್ತಾವಿಕ ಅನ್ವೇಷಣೆಯ ಮಾತಾದರೆ, ಈ ಗ್ಯಾರಂಟಿ ಎನ್ನುವ ಪದ ನಮ್ಮ ರಾಜ್ಯದ  ಮುಂದಿನ ರಾಜಕೀಯದ ಮೇಲೆ  ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎನ್ನುವ ಅಧ್ಯಯನಕ್ಕೆ ಇಳಿದಾಗ ಕೆಲವೊಂದು ಸತ್ಯಾಸತ್ಯೆಯ ವಿಚಾರಗಳು ಪರಿಚಯವಾಗಲು ಶುರುವಾಗಿದೆ.

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಗ್ಯಾರಂಟಿ ಎನ್ನುವ ಪದವನ್ನು  ಬಳಸಿ ಚುನಾವಣಾ ಸಮರಕ್ಕೆ ನಿಂತಿತು. ಈ ಉಚಿತ ರೂಪದ ಗ್ಯಾರಂಟಿ ಆದರಲ್ಲೂ ಐದು ಗ್ಯಾರಂಟಿಗಳನ್ನು ಜನರಿಗೆ ನೀಡುವುದು ಅಷ್ಟೊಂದು ಸುಲಭದ ದಾರಿ ಅಲ್ಲ ಎನ್ನುವ ಸತ್ಯ ಕಾಂಗ್ರೆಸ್ ಪಕ್ಷದವರಿಗೂ ಗೊತ್ತಿತ್ತು. ಆದರೆ ಭಾವನಾತ್ಮಕವಾದ ರೀತಿಯಲ್ಲಿ ಹುದುಗಿ ಹೇೂಗಿರುವ ಸಾಮಾನ್ಯ ವರ್ಗದ ಮತದಾರರನ್ನು ಅಲ್ಲಿಂದ ಮೇಲೆತ್ತಬೇಕಾದರೆ ಬಳಸಲೇಬೇಕಾದ ಕೊನೆಯ ಅಸ್ತ್ರವೆಂದರೆ ಬದುಕಿಗೆ ಬೇಕಾಗುವ ಯಾವುದಾರೂ ಒಂದು ದಿವ್ಯ ಔಷಧಿ ನೀಡಲೇಬೇಕು ಎನ್ನುವುದನ್ನು ಮನಗಂಡು ಈ ಗ್ಯಾರಂಟಿ ಅನ್ನುವ ಎಂಟಿ ಬ್ಯಯೇೂಟಿಕ್ (Anti  biotic) ಔಷಧಿಯನ್ನು ನೀಡುವುದರ ಮೂಲಕ ಮತದಾರರ ಮನಸ್ಸಿನಲ್ಲಿ ಹೂತು ಹೇೂಗಿದ ಭಾವನಾತ್ಮಕ ಚಿಂತನೆಗೆ ತಡೆ ತರುವುದರಲ್ಲಿ ಯಶಸ್ವಿಯಾಯಿತು. ಮಾತ್ರವಲ್ಲ  ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಗ್ಯಾರಂಟಿಯ ಮೊದಲ ಪ್ರಯೇೂಗ ಯಶಸ್ವಿಯಾಯಿತು.

ಇದನ್ನು ನೇೂಡಿದ ಬಿಜೆಪಿ ಕೂಡಾ ಈ ಗ್ಯಾರಂಟಿ ಅನ್ನುವ ಪದವನ್ನು ದೊಡ್ಡ ಮಟ್ಟದಲ್ಲಿ ಪ್ರಯೇೂಗಿಸಲು ಶುರು ಮಾಡಿತು. “ನಮ್ಮದು ವಿಕಸಿತ ಭಾರತ, ನಮ್ಮದು ಸಮೃದ್ಧ  ಭಾರತ, ನಾರಿ ಶಕ್ತಿ, ಯುವ ಶಕ್ತಿ . ನಮ್ಮದು ಮೇೂದಿ ಗ್ಯಾರಂಟಿ.

ಆದರೆ ಕಾಂಗ್ರೆಸ್ ಗ್ಯಾರಂಟಿಗೂ ಬಿಜೆಪಿ ಗ್ಯಾರಂಟಿ ಸ್ವಲ್ಪ ವ್ಯತ್ಯಾಸವಿದೆ. ಅದರಲ್ಲೂ ಸಾಮಾನ್ಯವಾಗಿ ನೊಂದ ಬೆಂದ ಬಡ ವರ್ಗದ ಮತದಾರನ್ನು ಸಂತೃಪ್ತಿ ಪಡಿಸುವಲ್ಲಿ ಬಡವರು ಮಧ್ಯಮ ವರ್ಗದವರು ತಮಗೆ ನೇರವಾಗಿ ಏನು ಸಿಗಬಹುದು ಎನ್ನುವುದನ್ನು ಬಯಸುತ್ತಾರೆ ಬಿಟ್ಟರೆ ನಾವು ಗಾಳಿಗೆ ಹಾರಿಸುವ ಗುಂಡಿನ ಮಾತುಗಳು. ಅವರನ್ನು ತಲುಪುದಿಲ್ಲ ಅನ್ನುವುದು ಅಷ್ಟೇ ಸತ್ಯ . ಅವರಿಗೆ ಎನ್ನಿದರೂ ಅವರ ಹೃದಯಕ್ಕೆ ನೇರವಾಗಿ ನಾಟುವಂತಿರಬೇಕು. ಹಿಂದೆ ಇಂದಿರಾ ಗಾಂಧಿಯವರ “”ಗರೀಬಿ ಹಠಾವೊ” ಸ್ವಲ್ಪ ಕಾಲ ಬಹು ಪ್ರಚಲಿತವಾಗಿತ್ತು ಕೊನೆಗೆ ಇದೇ ವಿರೇೂಧ ಪಕ್ಷದವರು ಇದನ್ನೇ ಬ್ರಹ್ಮಾಸ್ತ್ರವಾಗಿ ಅವರಮೇಲೆ ಪ್ರಯೇೂಗಿಸಲು ಪ್ರಾರಂಭಿಸಿದರು. ಇದುವೆ ಅವರಿಗೆ ಮುಳುವಾಯಿತು. ಮತ್ತೆ ಈ ಘೇೂಷ ವಾಕ್ಯ ಬದಿಗೆ ಸರಿಯಿತು. ಇದು ಗಾಳಿಗೆ ಹೊಡೆಯುವ ಘೇೂಷಣಾ ಪದಗಳ ಇತಿಹಾಸದ ಕಥೆ.

ಹಾಗಾದರೆ ಈ ಬಾರಿ ಕರ್ನಾಟಕದಲ್ಲಿ ಈ ಗ್ಯಾರಂಟಿ ಪದ ಕಾಂಗ್ರೆಸ್ ಪಕ್ಷಕ್ಕೆ ಫಲ ಕೊಡಬಹುದೇ? ಅನ್ನುವ  ಇನ್ನೊಂದು ಪ್ರಶ್ನೆ ಹುಟ್ಟಿ ಕೊಳ್ಳುವುದಂತೂ ಸಹಜ.

ನಾನು ನಡೆಸಿದ ಸಣ್ಣದೊಂದು ಸಮೀಕ್ಷೆಯ ಪ್ರಕಾರ ಈ ಗ್ಯಾರಂಟಿಯ ಫಲಾನುಭವಿಗಳೆಲ್ಲರೂ ಈ ಬಾರಿ ಕಾಂಗ್ರೆಸ್ಗೆ  ಮತಹಾಕುವುದರ ಮೂಲಕ ಕಾಂಗ್ರೆಸ್‌ಗೆ ಕೃತಜ್ಞತೆ ಸಲ್ಲಿಸುತ್ತಾರೆ ಎನ್ನುವುದು ಸಾಧ್ಯವಿಲ್ಲ. ಆದರೆ ಕನಿಷ್ಠ ಒಂದು 70 ಶೇ. ಗ್ಯಾರಂಟಿ ಮೂಲಕ ಸಹಕರಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಬಹುದು ಎನ್ನುವ ಮಾಹಿತಿ ಸಿಕ್ಕಿದೆ. ಉಳಿದ ಶೇ.30ರಷ್ಟು ಗ್ಯಾರಂಟಿ ಫಲಾನುಭವಿಗಳು ತಾವು ನಂಬಿದ ಪಕ್ಷ ವ್ಯಕ್ತಿ ಗಳಿಗೆ ಅಂಟಿಗಕೊಂಡಿದ್ದಾರೆ ಎನ್ನುವುದು ಸತ್ಯ. ಇದರಲ್ಲೂ ಕಡು ಬಡವರು ಕೆಳಮಧ್ಯಮ ವರ್ಗದ ಜನರು  ಅದರಲ್ಲೂ ಮಹಿಳೆಯರು ಮತ್ತು  ಗ್ರಾಮೀಣ ಮತದಾರರು ಗ್ಯಾರಂಟಿಗೆ ಶಿರ ಬಾಗಿ ವಂದಿಸುವ ಛಾಯೇ ಅವರ ಮುಖದಲ್ಲಿ ಎದ್ದು ಕಾಣುತ್ತಿದೆ. ಕಾಂಗ್ರೆಸ್ ನವರಿಗೆ ಇರುವ ಇನ್ನೊಂದು ಪ್ರಮುಖವಾದ ಅಭಯ ಹಸ್ತವೆಂದರೆ ನಾವು ಬರೇ ಗ್ಯಾರಂಟಿಯನ್ನು ಬಾಯಿಯಲ್ಲಿ ಘೇೂಷಣೆ ಮಾಡಿ ಇಷ್ಟೊಂದು ಸಾಧನೆ ಮಾಡಿದ್ದೇವೆ. ನುಡಿದಂತೆ ನಡೆದ ಮೇಲೇ ಮತದಾರರು ನಮಗೆ ಆಶೀರ್ವಾದ ಮಾಡಿಯೇ ಮಾಡುತ್ತಾರೆ ಎನ್ನುವ ಆತ್ಮ ವಿಶ್ವಾಸದಲ್ಲಿರುವುದಂತೂ ಸತ್ಯ. ಕಾದು ನೇೂಡೇೂಣ.

-ಪ್ರೊ.ಕೊಕ್ಕಣೆ೯ ಸುರೇಂದ್ರ ನಾಥ ಶೆಟ್ಟಿ, ಉಡುಪಿ.

ರಾಜಕೀಯ ವಿಶ್ಲೇಷಕರು

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!