Saturday, October 12, 2024

ಗುಂಡ್ಮಿ: ರಂಗಕರ್ಮಿ ಗೋಪಾಲಕೃಷ್ಣ ನಾಯರಿ ಸಂಸ್ಮರಣೆ

ಸಾಲಿಗ್ರಾಮ: ದೇಶೀ ಖ್ಯಾತಿಯ ರಂಗ ನಿರ್ದೇಶಕ, ರಾಷ್ರೀಯ ನಾಟಕ ತರಬೇತಿದಾರರಾದ ಕಾರ್ಕಡ ಗೋಪಾಲಕೃಷ್ಣ ನಾಯರಿಯವರ ಪ್ರಥಮ ಪುಣ್ಯ ಸರಣೆಯು ಇತ್ತೀಚೆಗೆ ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಆಚರಿಸಲಾಯಿತು.

ನಾಯರಿಯವರೋರ್ವ ಅದ್ಬುತ ಚಿಂತನೆ ಇರುವ ನಿರ್ದೇಶಕ. ಪ್ರಾದೇಶಿಕ ಸೊಗಡನ್ನು ಬಳಸಿಕೊಂಡು ಅವರು ರಚಿಸಿರುವ ನಾಟಕ ಪ್ರೇಕ್ಷಕರ ಮನ ತಲುಪುತ್ತಿತ್ತು.ರಾಷ್ಟ್ರೀಯ ರಂಗಭೂಮಿಯು ಇವರನ್ನು ಗುರುತಿಸುವಲ್ಲಿ ವಿಫಲವಾದದ್ದು ದೊಡ್ಡ ದುರಂತ. ಹಲವಾರು ರಂಗಭೂಮಿಯ ನಟರು ಇವರ ಶಿಷ್ಯರೆಂಬುದು ಹೆಮ್ಮೆಯ ವಿಚಾರ. ಇವರನ್ನು ನೆನಪಿಸುವ ಈ ಕಾರ್ಯ ಶ್ಲಾಘನೀಯ ಎಂದು ಉಡುಪಿಯ ರಂಗಕರ್ಮಿ, ರಂಗಭೂಮಿ ನಿರ್ದೇಶಕರಾದ ಉದ್ಯಾವರ ನಾಗೇಶ ಕುಮಾರ್ ಅಭಿಪ್ರಾಯ ಪಟ್ಟರು.

ಸಮಸ್ತರು,ರಂಗ ಸಂಶೋದನಾ ಕೇಂದ್ರ ಬೆಂಗಳೂರು ಸಂಸ್ಥೆಯು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಕಾರದಲ್ಲಿ ಆಚರಿಸಿದ ನಾಯರಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳ, ನಾಯರಿಯವರ ಆಪ್ತ ಮಿತ್ರ ಬೆಂಗಳೂರಿನ ಶಂಕರ ನಾಯರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನಾಯರಿಯವರ ಹೆಸರಿನಲ್ಲಿ ಕೊಡಲ್ಪಡುವ 2024ರ ಗೌರವ ಪ್ರಶಸ್ತಿಯೊಂದಿಗೆ ಹಿರಿಯ ರಂಗಭೂಮಿ ಕಲಾವಿದರಾದ ಜಯರಾಮ ನೀಲಾವರ ಇವರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈಭವ ಹಾಗೂ ಯಕ್ಷಕಲಾ ಅಕಾಡೆಮಿ ಬೆಂಗಳೂರು ಇವರಿಂದ ಲವ ಕುಶ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!