Wednesday, September 11, 2024

ಕುಂದಾಪುರ ವಕೀಲರ ಸಂಘ: ವಕೀಲರ ಡೈರಕ್ಟರಿ ಬಿಡುಗಡೆ

ಕುಂದಾಪುರ ವಕೀಲರ ಸಂಘದ 2022-24ನೇ ಸಾಲಿನ ವಕೀಲರ ಡೈರಕ್ಟರಿಯನ್ನು ದಿನಾಂಕ:27-03-2024 ರಂದು ಬಿಡುಗಡೆಗೊಳಿಸಲಾಯಿತು.

ಉಡುಪಿಯ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ರವರು ‘ವಕೀಲರ ಡೈರಕ್ಟರಿ’ ಬಿಡುಗಡೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ, ಡೈರಕ್ಟರಿಯನ್ನು ಬಿಡುಗಡೆಗೊಳಿಸಿ, ಕುಂದಾಪುರ ವಕೀಲರ ಸಂಘ ಕಳೆದೆರಡು ವರ್ಷಗಳಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ, ಕ್ರಿಯಾಶೀಲವಾಗಿದ್ದು, ರಾಜ್ಯದ ಇನ್ನಿತರ ವಕೀಲರ ಸಂಘಗಳಿಗೆ ಮಾದರಿಯಾಗಿದೆ ಎಂದರಲ್ಲದೇ ವಕೀಲರ ಡೈರಕ್ಟರಿ ಎನ್ನುವುದು ಬಹಳಷ್ಟು ಉಪಯೋಗಕ್ಕೆ ಬರುವ ಕೈಪಿಡಿಯಾಗಿದ್ದು, ಬಹಳಷ್ಟು ಮಾಹಿತಿಯನ್ನೊಳಗೊಂಡ ಸುಂದರವಾದ ಡೈರಕ್ಟರಿಯನ್ನು ಮುದ್ರಿಸಲಾಗಿದೆ ಎಂದರು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾದ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ ವಕೀಲರ ಸಂಘದ ಸದಸ್ಯರ ಸಹಕಾರದಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಯಿತು ಎಂದರಲ್ಲದೇ ಸಹಕಾರ ನೀಡಿದ ಎಲ್ಲ ವಕೀಲ ಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಸಂದರ್ಭ ಕುಂದಾಪುರದ ಜಿಲ್ಲಾ & ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್, ಸೀನಿಯರ್ ಸಿವಿಲ್ ಜಡ್ಜ್ ರಾಜು ಎನ್, ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ & ಜೆ,ಎಂ.ಎಫ್.ಸಿ ನ್ಯಾಯಾಧೀಶರಾದ ಶ್ರೀಮತಿ ಶ್ರುತಿಶ್ರೀ ಎಸ್, ಹೆಚ್ಚುವರಿ ಸಿವಿಲ್ ಜಡ್ಜ್ & ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಶ್ರೀಮತಿ ರೋಹಿಣಿ ಡಿ, ವಕೀಲರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಬೀನಾ ಜೋಸೆಫ್, ಕೋಶಾಧಿಕಾರಿ ಹಾಲಾಡಿ ದಿನಕರ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

ವಕೀಲರ ಸಂಘದ ಸದಸ್ಯರು, ಕುಂದಾಪುರ ನ್ಯಾಯಾಲಯಗಳ ಎಲ್ಲಾ ಸರಕಾರಿ ಅಭಿಯೋಜಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಕೀಲರ ಸಂಘದ ಸದಸ್ಯೆ ರೇಶ್ಮಾ ಪ್ರಾರ್ಥಿಸಿದರು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ರಿತೇಶ್ ಬಿ ವಂದಿಸಿದರು. ವಕೀಲರ ಸಂಘದ ಸದಸ್ಯರಾದ ಕೆರಾಡಿ ಪ್ರಸನ್ನ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!