Sunday, September 8, 2024

ತಲ್ಲೂರು: ಶ್ರೀ ಚೌಡೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟನೆ

ಕುಂದಾಪುರ: ಶ್ರೀ ಚೌಡೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ., ತಲ್ಲೂರು ಮಾ.೨೮ರಂದು ತಲ್ಲೂರು ಗ್ರಾಮ ಪಂಚಾಯತ್ ಹತ್ತಿರ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಗೊಳಿಸಿ ಮಾತನಾಡಿದ ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ವಸಂತ ಆರ್.ಹೆಗ್ಡೆ, ತಲ್ಲೂರಿನಲ್ಲಿ ಹತ್ತಕ್ಕೂ ಮಿಕ್ಕಿ ಬ್ಯಾಂಕ್ ಹಾಗೂ ಸಹಕಾರ ಸಂಸ್ಥೆಗಳಿವೆ. ಇಲ್ಲಿ ಉತ್ತಮ ಆರ್ಥಿಕ ವ್ಯವಹಾರ ನಡೆಯುತ್ತಿರುವುದಕ್ಕೆ ಹಣಕಾಸು ಸಂಸ್ಥೆಗಳ ಬೆಳವಣಿಗೆಗೆ ಸಾಕ್ಷಿ. ಜನರ ವಿಶ್ವಾಸ ಗಳಿಸಿಕೊಂಡರೆ ಬಹುಬೇಗ ಸಹಕಾರ ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷರಾದ ಪಿ.ಜಗನ್ನಾಥ ಶೆಟ್ಟಿ ಅಂಪಾರು ಮಾತನಾಡಿ, ಸರಕಾರ ದಿನಕ್ಕೊಂದು ಕಾನೂನು ಹೊರಡಿಸಿ ಸಹಕಾರ ವ್ಯವಸ್ಥೆಯನ್ನು ಅಧಿಕಾರಿಗಳ ಕಪಿಮುಷ್ಠಿಯಲ್ಲಿ ತರಲು ಪ್ರಯತ್ನಿಸುತ್ತಿದೆ. ಸಹಕಾರ ವ್ಯವಸ್ಥೆಗೆ ತನ್ನದೆಯಾದ ಕಾಯ್ದೆಗಳಿವೆ. ಅಧಿಕಾರಿಗಳ ಹಸ್ತಾಕ್ಷೇಪವಾದರೆ ಸೇವೆ ನೀಡುವುದು ಕಷ್ಟವಾಗುತ್ತದೆ. ಸರಕಾರ ಹೊರಡಿಸಿರುವ ಆದೇಶಕ್ಕೆ ಉಚ್ಚನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದೇ ತರುತ್ತೇವೆ ಎಂದು ಹೇಳಿದ ಅವರು, ನಾಗಪ್ಪ ಕೊಠಾರಿ ಅವರು ಸಹಕಾರ ವ್ಯವಸ್ಥೆಯಲ್ಲಿ ದುಡಿದವರು. ಸಾಕಷ್ಟು ಅನುಭವ ಹೊಂದಿದ್ದಾರೆ. ಅವರ ನೇತೃತ್ವದಲ್ಲಿ ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಚೌಡೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ನಾಗಪ್ಪ ಕೊಠಾರಿ ಮಾತನಾಡಿ, ಪರಸ್ಪರ ಸಹಕಾರ ಮನೋಭಾವ, ಸಹಕಾರದಡಿ ಪ್ರಗತಿ, ಸಹಕಾರ ಮನೋಭಾವನೆ ಬೆಳೆಸಿಕೊಂಡಾಗ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಾಲ ನೀಡುವುದಷ್ಟೇ ಸಹಕಾರ ವ್ಯವಸ್ಥೆಯ ಗುರಿಯಲ್ಲ, ತನ್ನ ಸದಸ್ಯರ ಅಭಿವೃದ್ಧಿಯೂ ಕೂಡಾ ಸಹಕಾರಿ ಸಂಘಗಳ ಗುರಿಯಾಗಿರುತ್ತದೆ. ದಶಕಗಳ ಹಿಂದೆಯೇ ತಲ್ಲೂರಿನಲ್ಲೊಂದು ಸಹಕಾರ ಸಂಸ್ಥೆ ಸ್ಥಾಪಿಸಬೇಕು ಎನ್ನುವ ಗುರಿ ಹೊಂದಿದ್ದೆ. ಅದು ಈಗ ಈಡೇರಿದೆ ಎಂದರು.

ವೇ.ಮೂ.ಶ್ರೀನಿವಾಸ ಉಪಾಧ್ಯಾಯರು ಗುಲ್ವಾಡಿ ಶುಭಶಂಸನೆಗೈದರು. ಗಂಗೊಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆನಂದ ಬಿಲ್ಲವ, ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಸೀತಾರಾಮ ಕೊಠಾರಿ ಯಡ್ತರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಉಪಾಧ್ಯಕ್ಷ ಸುಬ್ರಾಯ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಹೆಗ್ಡೆ, ನಿರ್ದೇಶಕರಾದ ಶಂಕರ ಕೊಠಾರಿ ಯಡ್ತರೆ, ಅನಂತ ಮೊವಾಡಿ, ತ್ರಾಸಿ, ಇಂದಿರಾ ಎಸ್.ಕೊಠಾರಿ, ಶ್ರೀನಿವಾಸ ಎನ್, ಬಾಬು ಕೊಠಾರಿ ಜಿಗಾರು, ಯೋಗೇಂದ್ರ ನಾಯ್ಕ, ರಾಮ ಮೊಗವೀರ, ರವಿ ಗಾಣಿಗ, ಚಂದ್ರಶೇಖರ ಕೊಠಾರಿ, ಬಾಬಿ ಕೊಠಾರಿ, ಶಂಕರ ಕೊಠಾರಿ ಮಂದಾರ್ತಿ, ರಾಘವೇಂದ್ರ ಕೊಠಾರಿ ಉಪಸ್ಥಿತರಿದ್ದರು.

ಗೌರವ ಸಲಹೆಗಾರರಾದ ಶಿವರಾಮ ಕೊಠಾರಿ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಠೇವಣಿ ಪತ್ರ ಬಿಡುಗಡೆ, ಸಾಲಪತ್ರ ವಿತರಣೆ ನಡೆಯಿತು. ನಿರ್ದೇಶಕರಾದ ಅನಂತ ಮೊವಾಡಿ ತ್ರಾಸಿ, ಯೋಗೇಂದ್ರ ನಾಯ್ಕ ಅನಿಸಿಕೆ ಹಂಚಿಕೊಂಡರು. ಗೋವರ್ದನ್ ಜೋಗಿ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿ, ನಿರ್ದೇಶಕ ರಾಘವೇಂದ್ರ ಕೊಠಾರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!