Sunday, October 13, 2024

ಶ್ರೀ ಮಹಾಗಣಪತಿ ದೇವಸ್ಥಾನ ಹರ್ಕೂರು: ನೂತನ ಶಿಲಾದೇಗುಲ ಸಮರ್ಪಣೆ, ಬ್ರಹ್ಮಕಲಶೋತ್ಸವ ಸಂಪನ್ನ

 

ಕುಂದಾಪುರ: ಶ್ರೀ ಮಹಾಗಣಪತಿ ದೇವಸ್ಥಾನ ಹರ್ಕೂರು ಶಿಲಾಮಯವಾಗಿ ನಿರ್ಮಾಣಗೊಂಡಿದೆ. ತಾಮ್ರದ ಹೊದಿಕೆಯೊಂದಿಗೆ ದೇವಳ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಹರ್ಕೂರು ಎನ್ನುವ ಸುಂದರ ಪ್ರದೇಶದಲ್ಲಿ ಶ್ರೀ ಮಹಾಗಣಪತಿ ನೆಲೆನಿಂತ ಪುಣ್ಯಸ್ಥಳ. ನಂಬಿದವರ ಇಷ್ಟಾರ್ಥ ಈಡೇರಿಸುವ ಶ್ರೀ ಮಹಾಗಣಪತಿಗೆ ಸುಂದರ ಆಲಯ ನಿರ್ಮಾಣವಾಗಿದ್ದು ನೂತನ ಶಿಲಾದೇಗುಲ ಸಮರ್ಪಣೆ, ಬ್ರಹ್ಮಕಲಶೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮಗಳು ಮಾರ್ಚ್ 26ರಿಂದ ಮಾರ್ಚ್ 28ರ ತನಕ ನಡೆಯಿತು.

ಶ್ರೀ ದೇವರ ಪ್ರತಿಷ್ಟಾಂಗ ವಿಧಿವಿಧಾನಗಳು ವೇ.ಮೂ.ಹೃಷಿಕೇಶ ಬಾಯರಿ ಬಾರ್ಕೂರು ಹಾಗೂ ವೇ.ಮೂ.ಚನ್ನಕೇಶವ ಉಪಾಧ್ಯ ಬಾರಂದಡಿ ಇವರ ನೇತೃತ್ವದಲ್ಲಿ ಸಂಪನ್ನಗೊಂಡಿತು.

ಮಾ.26ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಮಾ.27ರ ಬೆಳಿಗ್ಗೆ 8.೦೦ ಘಂಟೆಗೆ ಪೀಠ ಪ್ರತಿಷ್ಠೆ ಬೆಳಿಗ್ಗೆ ಘಂಟೆ 10.35ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಗಣಪತಿ ದೇವರ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ, ಜೀವಾವಾಹನಂ, ಜೀವ ಕುಂಭಾಭಿಷೇಕ, ಪ್ರತಿಷ್ಠಾ ಕಲಶಾಭಿಷೇಕ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಾ. 28 ಗುರುವಾರ ಬೆಳಿಗ್ಗೆ 7 ಘಂಟೆಗೆ ಪೂರ್ಣಾಹುತಿ ಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ, ಮಹಾ ಅನ್ನಸಂತರ್ಪಣೆ, ಸಂಜೆ   ರಂಗಪೂಜೆ, ಮಹಾಮಂಗಳಾರತಿ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!