spot_img
Wednesday, April 1, 2026
spot_img

ಅರುಣಾಚಲ ಪ್ರದೇಶ ತನ್ನದು ಎಂದು ಮತ್ತೆ ಕ್ಯಾತೆ ತೆಗೆದು ಭಾರತದ ಮೇಲೆ ಚೀನಾ ಆರೋಪ : ಖಡಕ್‌ ತಿರುಗೇಟು ನೀಡಿದ ಭಾರತ ಸರ್ಕಾರ

ಜನಪ್ರತಿನಿಧಿ (ನವ ದೆಹಲಿ) : ಅರುಣಾಚಲ ಪ್ರದೇಶದ ಬಗ್ಗೆ ಚೀನಾ ಮತ್ತೆ ಕ್ಯಾತೆ ಎತ್ತಿದೆ. ಅರುಣಾಚಲ ಪ್ರದೇಶ  ಚೀನಾದ ಪ್ರಾಂತ್ಯವಾಗಿದ್ದು, ಭಾರತವು ಈ ಭೂಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ ಎಂದು ಚೀನಾ ಮತ್ತೆ ಕ್ಯಾತೆ ತೆಗೆದಿದೆ.

ಈ ಬಗೆಗಿನ ನೆರೆ ರಾಷ್ಟ್ರ ಚೀನಾದ ಗಂಭೀರ ಆರೋಪಕ್ಕೆ ಭಾರತ ಸರ್ಕಾರ ಸರಿಯಾಗಗಿಯೇ ತಿರುಗೇಟು ನೀಡಿದ್ದು, ”ಅರುಣಾಚಲದ ಕುರಿತು ಆಗಾಗ ಹೀಗೆ ಹೇಳಿಕೆ ನೀಡುವುದು ಚೀನಾಗೆ ಅಭ್ಯಾಸವಾಗಿಬಿಟ್ಟಿದೆ. ಅರುಣಾಚಲ ಭಾರತದ ಪ್ರಾಕೃತಿಕ ಭಾಗವಾಗಿದೆ,’ ಎಂದು ಹೇಳಿದೆ.

ಈ ಬಗ್ಗೆ ಭಾರತದ ಸಿಟ್ಟಿಗೆ ಕಾರಣವಾಗುವಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್‌ ಜಿಯಾನ್‌,  ಅರುಣಾಚಲ ಪ್ರದೇಶ ಭೌಗೋಳಿಕವಾಗಿ ನಮ್ಮ ಗಡಿಗೆ ಸೇರಿದ್ದಾಗಿದೆ. ಹಿಂದಿನಿಂದಲೂ ನಾವದನ್ನು ಝಾಂಗ್‌ನಾನ್‌’ ಎಂದು ಕರೆಯುತ್ತಿದ್ದು, ಇದುವೇ ಅದರ ಅಧಿಕೃತ ಹೆಸರಾಗಿದೆ. ಅದು ಎಂದೆಂದಿಗೂ ಚೀನಾದ ಅವಿಭಾಜ್ಯ ಅಂಗವೇ ಆಗಿರುತ್ತದೆ. ಭಾರತ ಅದನ್ನು ಕಾನೂನುಬಾಹಿರವಾಗಿ ಅತಿಕ್ರಮಿಸಿಕೊಂಡಿದೆ,” ಎಂದು ಹೇಳಿದ್ದಾರೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರ ಹೇಳಿಕೆಗೆ ಭಾರತ ಅಷ್ಟೇ ಖಡಕ್ಕಾಗಿ ತಿರುಗೇಟು ನೀಡಿದ್ದು, ”ಚೀನಾದ ವಾದವೆಲ್ಲವೂ ಅಸಂಬದ್ಧ ಹಾಗೂ ಹಾಸ್ಯಾಸ್ಪದ. ಅರುಣಾಚಲ ಭಾರತದ ಪ್ರಾಕೃತಿಕ ಭಾಗವಾಗಿದೆ,” ಎಂದು ಸಿಂಗಾಪುರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌ ಜೈಶಂಕರ್‌ ಅವರು ನೀಡಿದ್ದ ಹೇಳಿಕೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪುನರುಚ್ಚರಿಸಿದೆ.

ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ಈ ಹಿಂದೆ ಹಲವು ಸಲ ತನ್ನ ಭೂಪಟದಲ್ಲಿ ತೋರಿಸುವ ಮೂಲಕ ತಗಾದೆ ತೆಗೆದಿದ್ದ ಚೀನಾ ಈಗ ಮತ್ತೊಮ್ಮೆ ಅರುಣಾಚಲದ ಮೇಲೆ ತನ್ನ ಹಕ್ಕು ಪ್ರತಿಪಾದಿಸಲು ಹೊರಟಿದೆ.

ಸಿಂಗಾಪುರದ ಪ್ರತಿಷ್ಠಿತ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ (ಐಎಸ್‌ಎಎಸ್‌) ಕಾರ್ಯಕ್ರಮದಲ್ಲಿ ಜೈಶಂಕರ್‌, ಚೀನಾದ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ಚೀನಾ ತನ್ನದೇ ಪ್ರತಿಪಾದನೆ ಮಾಡಿದೆ. ಆ ಪ್ರತಿಪಾದನೆಯನ್ನು ವಿಸ್ತರಿಸಿದೆ. ಮತ್ತು ಅದು ಅಂದಿನಿಂದ ಇಂದಿಗೂ ಹಾಸ್ಯಾಸ್ಪದವೇ ಆಗಿದೆ,” ಎಂದು ಹೇಳಿದ್ದರು.

ಇದರ ಬಹಿನ್ನೆಲೆಯಲ್ಲಿ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್‌, ಅರುಣಾಚಲದ ವಿರುದ್ಧ ಕ್ಯಾತೆ ತೆಗೆದಿದ್ದು, ಉಭಯ ದೇಶಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. 1987ರಲ್ಲಿ ಭಾರತವು ‘ಅರುಣಾಲ ಪ್ರದೇಶ’ ಎಂದು ಹೇಳಿಕೊಂಡ ಜಾಗವನ್ನು ಭಾರತದ ಅಕ್ರಮ ಅತಿಕ್ರಮಣದ ಚೀನಾದ ಭಾಗದಲ್ಲಿ ರಚಿಸಿಕೊಂಡಿದೆ. ಭಾರತದ ನಡೆಯು ಅಕ್ರಮ ಹಾಗೂ ಅದಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿತ್ತು. ಚೀನಾದ ನಿಲುವು ಬದಲಾಗಿಲ್ಲ ಎಂದು ಲಿನ್ ಹೇಳಿದ್ದಾರೆ.

 

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!