Sunday, September 8, 2024

ಸಿದ್ದರಾಮಯ್ಯ ಕರ್ನಾಟಕಕ್ಕೆ ತೆರಿಗೆ ಅನ್ಯಾಯ ಎಂಬ ಸುಳ್ಳಿನ ಧಾರಾವಾಹಿಯನ್ನೇ ಸೃಷ್ಟಿಸುತ್ತಿದ್ದಾರೆ : ಬಿಜೆಪಿ

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸುಳ್ಳು ಹೇಳುವವರೆಂದರೆ ಅದು ಸಿಎಂ ಸಿದ್ದರಾಮಯ್ಯ ಅವರು. ಒಂದೇ ಸುಳ್ಳನ್ನು ನೂರು ಬಾರಿ ಹೇಳಿದರೆ ಅದೇ ಸತ್ಯವಾಗುತ್ತದೆ ಎಂಬುದು ಸಿದ್ದರಾಮಯ್ಯನವರ ನಂಬಿಕೆ. ಈಗ ಆ ಸರಣಿಯಲ್ಲಿ ಕರ್ನಾಟಕಕ್ಕೆ ತೆರಿಗೆ ಅನ್ಯಾಯ ಎಂಬ ಸುಳ್ಳಿನ ಧಾರಾವಾಹಿಯನ್ನೇ ಸೃಷ್ಟಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರು ಹೇಳಿದ ಸುಳ್ಳುಗಳ ಹಿಂದಿನ ಸತ್ಯ ಹೀಗಿದೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್‌ ಸುಳ್ಳುಗಳೆಂದು ಪಟ್ಟಿಯೊಂದನ್ನು ತನ್ನ ಹಂಚಿಕೊಂಡಿದೆ.

ತನ್ನ ಅಧಿಕೃತ ಎಕ್ಸ್‌ ಖಾತೆಯ ಮೂಲಕ ಮುಖ್ಯಮಂತ್ರಿಗಳು ಮಹಾನ್‌ ಸುಳ್ಳುಗಾರ ಎಂದು ಪರೋಕ್ಷವಾಗಿ ಹೇಳಿದ್ದಲ್ಲದೇ, ಕಾಂಗ್ರೆಸ್‌ ಸರ್ಕಾರ ಸುಳ್ಳುಗಳನ್ನು ಉಲ್ಲೇಖಿಸಿ ಪ್ರಶ್ನೆಗಳನ್ನು ಮಾಡಿದೆ.

. ಜಿಎಸ್‌ಟಿ ಮಂಡಳಿ ರಚನೆಯಾದ ಸಂದರ್ಭದಲ್ಲಿಯೇ ಮೊದಲ 5 ವರ್ಷ ಮಾತ್ರ ರಾಜ್ಯಗಳಿಗೆ ಪರಿಹಾರ ನೀಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ ಮೇಲೆಯೂ ಸ್ವಯಂಘೋಷಿತ ಸಂವಿಧಾನ ತಜ್ಞರಾಗಿ ಸುಳ್ಳು ಹೇಳುವುದು ಎಷ್ಟರ ಮಟ್ಟಿಗೆ ಸರಿ…??

. 15 ನೇ ಹಣಕಾಸು ಸಮಿತಿ ಮುಂದೆ  ರಾಜ್ಯದ ಬೇಕು ಬೇಡಗಳನ್ನು ಸರಿಯಾಗಿ ವಿವರಿಸದಿರುವುದು ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯನವರ ತಪ್ಪು. 15 ನೇ ಹಣಕಾಸು ಸಮಿತಿಯಲ್ಲಿ ರಾಜ್ಯಕ್ಕೆ ಕಡಿಮೆ ಅನುದಾನ ಸಿಗಲು ಸಿಎಂ ಸಿದ್ದರಾಮಯ್ಯ ಅವರೇ ನೇರ ಕಾರಣ.

. 2020 ರಿಂದ 2023 ರವರಗೆ ಕರ್ನಾಟಕದಲ್ಲಾದ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಅಂದಿನ ಬಿಜೆಪಿ ಸರ್ಕಾರ ಯಾರ ನೆರವೂ ಪಡೆಯದೆ ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್‌ ಆರ್‌ ಮಾರ್ಗಸೂಚಿಯಲ್ಲಿ ಪರಿಹಾರ ನೀಡಿತ್ತು. ಈಗ ಉಂಟಾದ ಬರಕ್ಕೆ ಪರಿಹಾರ ನೀಡಲು ಕಾಂಗ್ರೆಸ್‌ಗೇಕೆ ಸಾಧ್ಯವಾಗುತ್ತಿಲ್ಲ.

. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಿಸಿದ ₹5300 ಕೋಟಿ ಬಿಡುಗಡೆ ಮಾಡಬೇಕೆಂದರೆ, ರಾಜ್ಯ ಸರ್ಕಾರದಿಂದ ಸರಿಯಾದ ಪ್ರಸ್ತಾವನೆ ಹೋಗಬೇಕು. ರಾಜ್ಯ ಸರ್ಕಾರದಿಂದ ಸರಿಯಾದ ಪ್ರಸ್ತಾವನೆ ಇದುವರೆಗೂ ಕೇಂದ್ರಕ್ಕೆ ಏಕೆ ಹೋಗಿಲ್ಲ..??

. ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ, ತಮ್ಮ ಹೆಸರಿನ ಚೀಲ ಹಾಕಿ ಅದಕ್ಕೆ ಅನ್ನ ಭಾಗ್ಯ ಎಂದು ಹೆಸರಿಟ್ಟಿದ್ದು ಸಿಎಂ ಸಿದ್ದರಾಮಯ್ಯನವರು. ಈಗಲೂ ಸಹ  ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನೇ ರಾಜ್ಯ ಸರ್ಕಾರ ತನ್ನದು ಎಂದು ನೀಡುತ್ತಿದೆ.

. ಬಡವರಿಗೆ ಮನೆ ಕಟ್ಟುವ ಆವಾಸ್‌ ಯೋಜನೆಯಲ್ಲಿ ಕೇಂದ್ರ ಸರ್ಕಾರಕ್ಕೆ ಕ್ರೆಡಿಟ್‌ ಹೋಗುತ್ತದೆ ಎಂಬ ಕಾರಣಕ್ಕೆ 2018ರಲ್ಲಿ ಕರ್ನಾಟಕದ ಫಲಾನುಭವಿಗಳ ಹೆಸರನ್ನೇ ಕಳುಹಿಸದೇ ಅಂದಿನ ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡಿತ್ತು. ಆದರೆ ಕನ್ನಡಿಗರಿಗೆ ಸ್ವಯಂಪ್ರೇರಿತವಾಗಿ 4.48 ಲಕ್ಷ ಮನೆ ನಿರ್ಮಿಸಿದ್ದು ಮೋದಿ ಸರ್ಕಾರ.

. ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಏಕೈಕ ಮುಖ್ಯಮಂತ್ರಿ ಅಂದರೆ ಅದು ಸಿಎಂ ಸಿದ್ದರಾಮಯ್ಯನವರು. ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳಲ್ಲಿ ಬಿಡಿಗಾಸು ಅಭಿವೃದ್ಧಿ ಮಾಡದೆ, ಪ್ರತಿಯೊಬ್ಬ ಕನ್ನಡಿಗರ ಮೇಲೆ ಹೆಚ್ಚುವರಿ ₹28 ಸಾವಿರ ಸಾಲ ಹೊರೆಸಿದ್ದೇ ಸಿದ್ದರಾಮಯ್ಯನವರ ಸಾಧನೆ ಎಂದು ಹೇಳಿದೆ.

ಇನ್ನು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬರುವ ಮುನ್ನ ಕರ್ನಾಟಕದ ಆರ್ಥಿಕತೆ ಸುಭೀಕ್ಷವಾಗಿತ್ತು, ನಾವೀನ್ಯತೆಯ ಸೂಚ್ಯಂಕದಲ್ಲಿ ಕರ್ನಾಟಕ ನಂಬರ್‌ 1 ಆಗಿತ್ತು. ಆದರೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳೊಳಗೆ ಕರ್ನಾಟಕ ಅರಾಜಕತೆಯಲ್ಲಿ ನಂಬರ್‌  1 ಆಗಿದೆ, ಆರ್ಥಿಕತೆ ಕುಸಿದು ಕರ್ನಾಟಕ ದಿವಾಳಿಯತ್ತ ಸಾಗುತ್ತಿದೆ ಎಂದ ಬಿಜೆಪಿ ಆಕ್ರೋಶ ಹೊರಹಾಕಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!