Sunday, September 8, 2024

ಯಕ್ಷಗಾನದಿಂದ ಪುರಾಣ ಪರಿಚಯ-ಡಾ|ಡಿ.ವೀರೇಂದ್ರ ಹೆಗ್ಗಡೆ

 

ಸಿದ್ಧಾಪುರ: (ಜನಪ್ರತಿನಿಧಿ ವಾರ್ತೆ) ಯಕ್ಷಗಾನದ ಮೂಲಕವೇ ಪುರಾಣವನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ. ಹಾಗಾಗಿ ಯಕ್ಷಗಾನ ಈ ಭಾಗದಲ್ಲಿ ತುಂಬಾ ಪ್ರಭಾವಿ ಕಲೆಯಾಗಿದೆ. ಯಕ್ಷಗಾನದ ಮೂಲಕ ಪುರಾಣದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ. ಜೀವನ ಮೌಲ್ಯಗಳು ಯಕ್ಷಗಾನದ ಮೂಲಕ ಲಭಿಸಿದೆ. ಧಾರ್ಮಿಕ ಶ್ರೇಷ್ಠತೆಗಳನ್ನು ಯಕ್ಷಗಾನದ ಮೂಲಕ ಪರಿಣಾಮಕಾರಿಯಾಗಿ ತಿಳಿಸಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟರು.

ಅವರು ಕುಂದಾಪುರ ತಾಲೂಕು ಸಿದ್ಧಾಪುರದ ಬಾಲೋಡಿ ನಾಗು ಕುಲಾಲ್ ಅವರ ನಿರಂತರ 25ನೇ ವರ್ಷದ ಧರ್ಮಸ್ಥಳ ಮೇಳದ ಯಕ್ಷಗಾನ ಹರಕೆ ಬಯಲಾಟದ ಸೇವಾರ್ಥಿಗಳ ಮನೆಗೆ ಭೇಟಿ ನೀಡಿ ಸೇವಾರ್ಥಿಗಳ ಗೌರವಾರ್ಪಣೆ ಸ್ವೀಕರಿಸಿ ಶುಭ ಹಾರೈಸಿದರು.

ಧರ್ಮಸ್ಥಳಕ್ಕೆ ಕುಂದಾಪುರ ಭಾಗದಿಂದ ಅಸಂಖ್ಯ ಭಕ್ತರಿದ್ದಾರೆ. ಕ್ಷೇತ್ರದ ಮೇಲೆ ಅಪಾರ ಅಭಿಮಾನ, ನಂಬಿಕೆ ಹೊಂದಿದ್ದಾರೆ. ಕ್ಷೇತ್ರದ ಮೇಳದ ಯಕ್ಷಗಾನದ ಮೂಲಕ ಕೃತಾರ್ಥರಾಗುತ್ತಾರೆ ಎಂದರು.

ಈ ಸಂದರ್ಭದಲ್ಲಿ ನಾಗು ಕುಲಾಲ್ ದಂಪತಿಗಳು ಹೆಗ್ಗಡೆಯವರನ್ನು ಗೌರವಿಸಿದರು. ಜನಜಾಗೃತಿ ವೇದಿಕೆ, ಭಜನಾ ಪರಿಷತ್, ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘಸಂಸ್ಥೆಗಳು ಹೆಗ್ಗಡೆಯವರನ್ನು ಗೌರವಿಸಿದರು.

ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ, ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರಾ, ಜನಜಾಗ್ರತಿ ವೇದಿಕೆ ಜಿಲ್ಲಾ ಅಧ್ಯಕ್ಷ ನವೀನಚಂದ್ರ ಶೆಟ್ಟಿ ರಟ್ಟಾಡಿ, ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು, ಭಜನಾ ಪರಿಷತ್ ಪ್ರಮುಖರು ಉಪಸ್ಥಿತರಿದ್ದರು.

ಧಾಮೋದರ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಹೆಗ್ಗಡೆಯವರು ರಂಗನಾಥ ಸಭಾಭವನದಲ್ಲಿ ನಡೆದ ಯಕ್ಷಗಾನ ಸೇವೆಯ ಪ್ರಯುಕ್ತ ನಡೆದ ಗಣಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪೂರ್ಣಕುಂಭ ಸ್ವಾಗತದೊಂದಿಗೆ ಹೆಗ್ಗಡೆಯವರನ್ನು ಬರ ಮಾಡಿಕೊಳ್ಳಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!