Saturday, October 12, 2024

ಬೀಜಾಡಿ: ಸೌಕೂರು ಮೇಳದ 35ನೇ ವರ್ಷದ ಯಕ್ಷಗಾನ ಪ್ರದರ್ಶನ-ಸನ್ಮಾನ

ಕುಂದಾಪುರ: ಬೀಜಾಡಿ ಹಳೆ ಕೆನರಾ ಬ್ಯಾಂಕ್ ಹತ್ತಿರ ಶ್ರೀಮತಿ ಪಾರ್ವತಿ ಮಂಜುನಾಥ ಶೆಟ್ಟಿಗಾರ್‌ರವರು ಶ್ರೀಕ್ಷೇತ್ರ ಸೌಕೂರು ದುರ್ಗಾಪರಮೇಶ್ವರಿ ಮೇಳದ ನಿರಂತರ 35ನೇ ವರ್ಷದ ಸೇವಾ ಬಯಲಾಟ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಇತ್ತೀಚೆಗೆ ಜರಗಿತು.

ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ವಹಿಸಿದ್ದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರು ಮಂಜುನಾಥ್ ಶೆಟ್ಟಿಗಾರರ ೩೫ ವರ್ಷಗಳ ಸೇವಾ ಬಯಲಾಟದ ಸೂಕ್ಷ್ಮಾವಲೋಕನವನ್ನು ಪ್ರಸ್ತಾವನೆಯೊಂದಿಗೆ ತಿಳಿಸಿದರು.

ಸಭೆಯಲ್ಲಿ ಸೌಕೂರು ಮೇಳದ ಪ್ರಧಾನ ಭಾಗವತರಾದ ಹೇರಂಜಾಲು ಗೋಪಾಲ ಗಾಣಿಗ, ಜ್ಯೋತಿಷ್ಯ ಹಾಗೂ ವಾಸ್ತುತಜ್ಞ ಡಾ.ಬಸವರಾಜ್ ಶೆಟ್ಟಿಗಾರ್, ಬೀಜಾಡಿ ಮಾಜಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಗುಲಾಬಿಯಮ್ಮ, ಶ್ರೀ ಬ್ರಹ್ಮಲಿಂಗೇಶ್ವರ ಚಿಕ್ಕು‌ಅಮ್ಮ ದೇವಸ್ಥಾನ ಬೀಜಾಡಿಯ ಆಡಳಿತ ಮುಕ್ತೇಸರರಾದ ಆನಂದ ಬಿಳಿಯಾರ್, ಸಮಾಜ ಸೇವಕ ಬೀಜಾಡಿ ಸೂರಿ ಸುರೇಂದ್ರ, ಮೇಳದ ಸಂಚಾಲಕರ ಪ್ರತಿನಿಧಿ ಹಾಗೂ ಕಲಾವಿದ ಭದ್ರಪುರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅತಿಥಿಗಳನ್ನು ಯೋಗೇಶ್ ಶೆಟ್ಟಿಗಾರ್ ಗೌರವಿಸಿದರು. ಸಭೆಯಲ್ಲಿ ಶ್ರೀಮತಿ ಪಾರ್ವತಿ ಎಂ.ಶೆಟ್ಟಿಗಾರ್ ಮತ್ತು ಮಂಜುನಾಥ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಬಿ.ಚಂದ್ರಶೇಖರ ಪದ್ಮಶಾಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!