Sunday, September 8, 2024

ಬಿ. ಬಿ. ಹೆಗ್ಡೆ ಕಾಲೇಜು: ಯುವ ವಿಚಾರಗೋಷ್ಠಿ

 

ಕುಂದಾಪುರ: ಕರ್ನಾಟಕ ಸರಕಾರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 & 2ರ ಆಶ್ರಯದಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯ ಉಡುಪಿ ಜಿಲ್ಲಾ ಅಂತರ್-ಕಾಲೇಜು ಎನ್ನೆಸ್ಸೆಸ್ ಸ್ವಯಂ ಸೇವಕರಿಗಾಗಿ ‘ಯುವ ಸಂವಾದ’ ಕಾರ್ಯಕ್ರಮದ ಭಾಗವಾಗಿ ಯುವ ವಿಚಾರಗೋಷ್ಠಿ ನಡೆಯಿತು.

ಎನ್ನೆಸ್ಸೆಸ್ ಸ್ವಯಂ ಸೇವಕರು ‘ಯುವಜನತೆ ಮತ್ತು ನಾಯಕತ್ವ’ಎಂಬ ವಿಷಯದ ಕುರಿತು ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದರು.
ಗೋಷ್ಠಿಯ ಸಮನ್ವಯಕಾರರಾದ ಪತ್ರಕರ್ತ ಲಕ್ಷ್ಮಿ ಮಚ್ಚಿನ ಅವರು ಮಾತನಾಡಿ, ನಾಯಕರಾಗಲು ಸತತ ಪರಿಶ್ರಮ, ತಾಳ್ಮೆ ಅತ್ಯಗತ್ಯ ಜೊತೆಗೆ ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡರೆ ಶ್ರೇಷ್ಠ ನಾಯಕರಾಗಲು ಸಾಧ್ಯ ಎಂದರು.

ಎನ್ನೆಸ್ಸೆಸ್ ಸ್ವಯಂ ಸೇವಕರಾದ ಬ್ರಹ್ಮಾವರದ ಎಸ್.ಎಮ್.ಎಸ್. ಕಾಲೇಜಿನ ಚೈತ್ರಾ, ಕೋಟೇಶ್ವರ ಸರಕಾರಿ ಪದವಿ ಕಾಲೇಜಿನ ದಿವ್ಯಾಶ್ರೀ ಎಸ್., ಬೈಂದೂರು ಸರಕಾರಿ ಪದವಿ ಕಾಲೇಜಿನ ಸೌಜನ್ಯ ಶೆಟ್ಟಿ, ಉಡುಪಿಯ ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜಿನ ಸ್ವಪ್ನ ಕೆ.ಎಚ್., ಹಿರಿಯಡ್ಕ ಸರಕಾರಿ ಪದವಿ ಕಾಲೇಜಿನ ಪ್ರಥ್ವಿ ಬಿ., ಉಡುಪಿಯ ಪೂರ್ಣ ಪ್ರಜ್ಞಾ ಕಾಲೇಜಿನ ಚಿರಂಜೀವಿ ಪಿ.ಕೆ., ಅಜ್ಜರಕಾಡು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರೀತಿ ಶೆಟ್ಟಿ, ಕಾರ್ಕಳ ಭುವನೇಂದ್ರ ಕಾಲೇಜಿನ ಹಿತಾ, ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ಸುಜಯ್ ಶೆಟ್ಟಿ ವಿಚಾರಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಡಾ| ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಕಾರ್ಯಕ್ರಮ ಸಂಯೋಜಿಸಿದರು. ಎನ್ನೆಸ್ಸೆಸ್ ಸ್ವಯಂ ಸೇವಕರಾದ ಶ್ರೀನಾಭ್ ಉಪಾಧ್ಯ ಸ್ವಾಗತಿಸಿ, ರಾಜೇಶ್ವರಿ ಅತಿಥಿಗಳನ್ನು ಪರಿಚಯಿಸಿ, ಆಕಾಶ್ ಆಚಾರ್ ವಂದಿಸಿ, ಪವಿತ್ರಾ ಪೈ ಕಾರ್ಯಕ್ರಮ ನಿರೂಪಿಸಿ, ಐಶ್ವರ್ಯ ಪ್ರಾರ್ಥಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!