spot_img
Saturday, February 14, 2026
spot_img

ಲೋಕಸಭಾ ಚುನಾವಣೆ : ಸಂಸದ ಅನಂತಕುಮಾರ ಹೆಗಡೆ ಚುನಾವಣಾ ಪ್ರಚಾರದಲ್ಲಿ ನಮ್ಮೊಂದಿಗೆ ಇರಲಿದ್ದಾರೆ : ಕಾಗೇರಿ

ಜನಪ್ರತಿನಿಧಿ (ಶಿರಸಿ) : ನಾನು ಮತ್ತು ಸಂಸದರಾದ ಅನಂತ ಕುಮಾರ್‌ ಹೆಗಡೆ ಒಂದೇ ಸಿದ್ಧಾಂತಕ್ಕೆ ಒಗ್ಗಿಕೊಂಡು ಕೆಲಸ ಮಾಡಿದವರು. ಅವರನ್ನು ಭೇಟಿ ಮಾಡಿ ಚುನಾವಣೆಗಾಗಿ ಪಕ್ಷ ಮಾಡಬೇಕಿರುವ ಸಿದ್ಧತೆಗೆ ಅವರ ಸಲಹೆ ಸೂಚನೆ ಪಡೆಯುತ್ತೇನೆ. ಅವರೂ ಕೂಡ ಚುನಾವಣಾ ಪ್ರಚಾರಕ್ಕೆ ನಮ್ಮೊಂದಿಗೆ ಇರಲಿದ್ದಾರೆ ಎಂದು ಮಾಜಿ ಸ್ಪೀಕರ್‌ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕಾಗೇರಿ ,ಕಾಂಗ್ರೆಸ್ ಬಗ್ಗೆ ಇಡೀ ದೇಶದ ಜನತೆ ಭ್ರಮನಿರಸನಗೊಂಡಿದೆ. ರಾಹುಲ್ ಗಾಂಧಿಯನ್ನು ಯಾರೂ ಕೂಡ ಈ ದೇಶಕ್ಕೆ ನೇತೃತ್ವ ಕೊಡಬಹುದು ಎನ್ನುವುದನ್ನೇ ಪರಿಗಣಿಸಿಲ್ಲ. ಮೋದಿ ಅವರೇ‌ ದೇಶದ ನಾಯಕರು ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಆಡಳಿತ ವೈಫಲ್ಯತೆಯನ್ನ ಮುಚ್ಚಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಆಡಳಿತ ವೈಫಲ್ಯದ ಹತಾಶ ಸ್ಥಿತಿಗೆ ರಾಜ್ಯ ಕಾಂಗ್ರೆಸ್ ಹೋಗಿದೆ ಎಂದ ಅವರು, ಕಾಂಗ್ರೆಸ್ ಅವರು ಘೋಷಿಸಿದ ಗ್ಯಾರಂಟಿಯನ್ನೇ ಅರ್ಹರಿಗೆ ಅದನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಕಾಲ ಕಾಲಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ. ಅಭಿವೃದ್ಧಿಗೆ ಹಣ ಇಲ್ಲ. ಆಡಳಿತದಲ್ಲಿ ನಿಯಂತ್ರಣ ತಪ್ಪಿ ಹೋಗಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ಕುರ್ಚಿ ಗಟ್ಟಿಯಿಲ್ಲ. ಅವರಿಗೆ ಮುಖ್ಯಮಂತ್ರಿ ಸ್ಥಾನ ಯಾವಾಗ ಕೈತಪ್ಪುತ್ತದೋ ಗೊತ್ತಿಲ್ಲ. ಈ ಆತಂಕವನ್ನು ಬಹಿರಂಗಗೊಳಿಸದೇ ಇರಬಹದು, ಹಾಗಾಗಿ ಆಡಳಿತದ ಬಗ್ಗೆ ಅವರಲ್ಲಿ ಆಸಕ್ತಿ ಇಲ್ಲ. ಉಪ ಮುಖ್ಯಮಂತ್ರಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾದು ಕೂತಿದ್ದಾರೆ ಎಂದಿದ್ದಾರೆ.

ಅಭ್ಯರ್ಥಿಗಳು ನಿಮಿತ್ತ ಮಾತ್ರ. ಭಾರತೀಯ ಜನತಾ ಪಾರ್ಟಿ ,ಕಾಂಗ್ರೆಸ್ ನಡುವೆ ಈ ಚುನಾವಣೆ. ಅಭ್ಯರ್ಥಿಗಳ ಹೆಸರಿನ ನಡುವೆ ನಡೆಯುವ ಚುನಾವಣೆ ಅಲ್ಲ ಎಂದ‌ ಅವರು, ಕಾಂಗ್ರೆಸ್ ಹತಾಶ ಸ್ಥಿತಿಯಲ್ಲಿ ಇರುವುದರಿಂದ ಅವರಿಗೆ 100 ಸೀಟು ನಿಲ್ಲಿಸಲು ಆಗುತ್ತಿಲ್ಲ ಎಂದು ಕಾಂಗ್ರೆಸ್‌ ಬಗ್ಗೆ ವ್ಯಂಗ್ಯವಾಡಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!