spot_img
Wednesday, January 22, 2025
spot_img

ಲೋಕಸಭಾ ಚುನಾವಣೆ : ವಯನಾಡಿಗೆ ರಾಹುಲ್‌ ಗಾಂಧಿ ಕೊಡುಗೆ ಏನೂ ಇಲ್ಲ, ಈ ಭಾರಿ ಇಲ್ಲಿ ಅವರಿಗೆ ಸೋಲು ನಿಶ್ಚಿತ : ಸುರೇಂದ್ರನ್‌

ಜನಪ್ರತಿನಿಧಿ (ವಯನಾಡು) : ವಯನಾಡಿನಲ್ಲಿ ೨೦೧೯ರಲ್ಲಿ ಅಮೇಥಿಯಲ್ಲಿ ಆದ ಪರಿಸ್ಥಿತಿ ಈ ಬಾರಿ ಆಗಲಿದೆ ಎಂದು ವಯನಾಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಕೆ. ಸುರೇಂದ್ರನ್‌ ಹೇಳಿದ್ದಾರೆ.

ಕೇರಳ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೆ. ಸುರೇಂದ್ರನ್‌, ಈ ಬಾರಿ ವಯನಾಡಿನಲ್ಲಿ ರಾಹುಲ್‌ ಗಾಂಧಿ ಹಾಗೂ ಸಿಪಿಐನ ಆನಿ ರಾಜ ವಿರುದ್ಧ ಸ್ಪರ್ಧಿಸಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುರೇಂದ್ರನ್‌, ಕ್ಷೇತ್ರಕ್ಕೆ ರಾಹುಲ್‌ ಗಾಂಧಿ ಅವರ ಕೊಡುಗೆ ಏನೂ ಇಲ್ಲ. ವಯನಾಡಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕಳೆದ ಬಾರಿ ಅಮೇಥಿಯಲ್ಲಿ ಸೋತ ಹಾಗೆ ಈ ಬಾರಿ ಇಲ್ಲಿ ಸೋಲುತ್ತಾರೆ. ಅವರಿಗೆ ಸೋಲು ನಿಶ್ಚಿತ ಎಂದವರು ಹೇಳಿದ್ದಾರೆ.

ಇಂಡಿಯಾ ಒಕ್ಕೂಟದ ನಾಯಕರು ಒಂದೇ ಕ್ಷೇತ್ರದಿಂದ ಯಾಕೆ ಕಣಕ್ಕಿಳಿದಿದ್ದಾರೆ ಎಂದು ಇಲ್ಲಿನ ಜನರು ಕೇಳುತ್ತಾರೆ ಎಂದೂ ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!