Sunday, September 8, 2024

ಲೋಕಸಭಾ ಚುನಾವಣೆ : ಮಹುವಾ ಮೊಯಿತ್ರಾ ವಿರುದ್ಧ ರಾಜಮಾತೆ ಅಮೃತಾ ರಾಯ್ ಅವರನ್ನು ಕಣಕ್ಕಿಳಿಸಿದ ಬಿಜೆಪಿ

ಜನಪ್ರತಿನಿಧಿ (ಪಶ್ಚಿಮ ಬಂಗಾಳ) : ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ ವಿರುದ್ಧ ‘ರಾಜಮಾತಾ’ (ರಾಣಿ ತಾಯಿ) ಅಮೃತಾ ರಾಯ್ ಅವರನ್ನು ಕಣಕ್ಕಿಳಿಶಿದೆ. ಕಳೆದ ವಾರ ಪಕ್ಷಕ್ಕೆ ಸೇರ್ಪಡೆಗೊಂಡ ಅಮೃತಾ ರಾಯ್ ಸೇರಿದಂತೆ 111 ಹೆಸರುಗಳನ್ನು ಒಳಗೊಂಡಿರುವ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಸದ್ಯ ನಿನ್ನೆ(ಭಾನುವಾರ) ಬಿಜೆಪಿ ಬಿಡುಗಡೆ ಮಾಡಿದೆ.

ಅಮೃತಾ ರಾಯ್ ಕೃಷ್ಣನಗರದ ‘ರಾಜಬರಿ’ (ರಾಜಮನೆತನ – ಬಂಗಾಳಿ ಪದ) ರಾಜಮಾತೆ. ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಆಗುವ ಮೊದಲು, ಲೋಕಸಭೆ ಚುನಾವಣೆಯಲ್ಲಿ ಸಂಭವನೀಯ ಹೆಸರುಗಳ ಪಟ್ಟಿಯಲ್ಲಿ ರಾಜಮಾತೆಯ ಹೆಸರು ಪ್ರಚಲಿತದಲ್ಲಿತ್ತು. ಅವರನ್ನೇ ಕಣಕ್ಕಿಳಿಬಹುದು ಎಂಬ ಸುದ್ದಿ ಬಾರಿ ದೊಡ್ಡ ಮಟ್ಟದಲ್ಲಿ ಕೇಳಿಸಿತ್ತು.

ಕೃಷ್ಣನಗರವು ಶ್ರೀಮಂತ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಯನ್ನು ಹೊಂದಿದೆ. ಭಾರತೀಯ ಇತಿಹಾಸದಲ್ಲಿ, ವಿಶೇಷವಾಗಿ ಬಂಗಾಳದಲ್ಲಿ, ರಾಜ ಕೃಷ್ಣ ಚಂದ್ರರು 18 ನೇ ಶತಮಾನದಲ್ಲಿ ತಮ್ಮ ದೂರದೃಷ್ಟಿಯ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು. ಅವರ 55 ವರ್ಷಗಳ ಆಡಳಿತದಲ್ಲಿ ಆಡಳಿತಾತ್ಮಕ ಸುಧಾರಣೆಗಳು, ಕಲೆಗಳ ಪ್ರಚಾರ ಮತ್ತು ಬಂಗಾಳಿ ಸಂಸ್ಕೃತಿಗೆ ಅವರು ನೀಡಿದ ಕೊಡುಗೆ ಅಪಾರವಾದದ್ದು.

ನಾಡಿಯಾ ರಾಜಮನೆತನಕ್ಕೆ ಸೇರಿದ, ಕೃಷ್ಣ ಚಂದ್ರನು 18 ನೇ ವಯಸ್ಸಿನಲ್ಲಿ ಸಿಂಹಾಸನವೇರಿದ್ದರು. ಅವರು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಡಳಿತ ಸುಧಾರಣೆಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಮಹಾರಾಜ ಕೃಷ್ಣ ಚಂದ್ರ ರಾಯ್ ಪ್ರಬುದ್ಧ ಆಡಳಿತಗಾರರಾಗಿದ್ದರು, ಅವರ ಆಡಳಿತಾವಧಿಯಲ್ಲಿ ಅವರ ಸಾಮ್ರಾಜ್ಯದ ಅಭಿವೃದ್ಧಿಗೆ ಮಹತ್ತರವಾದ ಕೊಡುಗೆ ನೀಡಿತ್ತು.

‘ಕೃಷ್ಣನಗರ ರಾಜಬರಿ’ (ಕೃಷ್ಣನಗರದ ಅರಮನೆ) ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ವಾಸ್ತುಶಿಲ್ಪದ ವೈಭವ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ. ಕೃಷ್ಣನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ವಿಸ್ತಾರವಾದ ಎಸ್ಟೇಟ್ ಒಂದು ಕಾಲದಲ್ಲಿ ‘ನಾಡಿಯಾದ ಮಹಾರಾಜರ’ (ನಾಡಿಯಾದ ಚಕ್ರವರ್ತಿಗಳು) ರಾಜಮನೆತನದ ನಿವಾಸವಾಗಿತ್ತು =

ಸದ್ಯ, ಇಷ್ಟೆಲ್ಲಾ ಹಿನ್ನೆಲೆ ಇರುವ ಬಂಗಾಳದ ರಾಜಮನೆತನಕ್ಕೆ ಸೇರಿದ  ಅಮೃತಾ ರಾಯ್ ಅವರನ್ನು ಬಿಜೆಪಿ ಲೋಕಸಭಾ ಚುನಾವಣಾ ಕಣಕ್ಕಿಳಿದೆ. ರಾಜಮಾತೆಯ ಸ್ಪರ್ಧೆ ಬಿಜೆಪಿಗೆ ಉತ್ತೇಜನ ನೀಡಲಿದೆ ಮತ್ತು ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾಗೆ ಪ್ರಬಲ ಪೈಪೋಟಿ ನೀಡಬಹುದು ಎಂದು ರಾಜಕೀಯ ತಜ್ಞರು, ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ, ನಾಡಿಯಾ ಜಿಲ್ಲಾ ಬಿಜೆಪಿ ಅಮೃತಾ ರಾಯ್ ಅವರನ್ನು ಅಭ್ಯರ್ಥಿಯನ್ನಾಗಿ ಕ್ಷೇತ್ರದಿಂದ ಕಣಕ್ಕಿಳಿಸುವ ಉದ್ದೇಶದಿಂದ ಹಲವು ಸುತ್ತಿನ ಮಾತುಕತೆ ನಡೆಸಿತ್ತು. ಅವರು ಆ ಬಳಿಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡರು. ಅಂತಿಮವಾಗಿ ಹೈಕಮಾಂಡ್‌ ಅವರನ್ನು ಕ್ಷೇತ್ರದಿಂದ ಸ್ಪರ್ಧಿಸುವಂತೆ ಟಿಕೇಟ್‌ ಘೋಷಣೆ ಮಾಡಿದೆ.

2019 ರ ಲೋಕಸಭೆ ಚುನಾವಣೆಯಲ್ಲಿ ಕೃಷ್ಣನಗರ ಕ್ಷೇತ್ರದಲ್ಲಿ ಮಹುವಾ ಮೊಯಿತ್ರಾ ಅವರು 6,14,872 ಮತಗಳನ್ನು ಗಳಿಸಿದರೆ, ಬಿಜೆಪಿಯ ಕಲ್ಯಾಣ್ ಚೌಬೆ ಪರವಾಗಿ 5,51,654 ಮತಗಳನ್ನು ಗಳಿಸಿದ್ದರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

2019 ರ ಲೋಕಸಭೆ ಚುನಾವಣೆಯಲ್ಲಿ ಮಹುವಾ ಮೊಯಿತ್ರಾ ಅವರ ಗೆಲುವಿನ ಹಿಂದೆ ಚೋಪ್ರಾ, ಪಲಾಶಿಪಾರಾ ಮತ್ತು ಕಾಲಿಗಂಜ್ ವಿಧಾನಸಭಾ ಕ್ಷೇತ್ರಗಳ ಮತಗಳು ಪ್ರಭಾವ ಬೀರಿದ್ದವು. ಆಮೂರು ವಿಧಾನಸಭಾ ಕ್ಷೇತ್ರಗಳಿಂದ ಅವರು ಭಾರೀ ಸಂಖ್ಯೆಯ ಮತಗಳನ್ನು ಪಡೆದರು.

ಕಳೆದ ಐದು ವರ್ಷಗಳಲ್ಲಿ ಕಾಳಿಗಂಜ್ ವಿಧಾನಸಭೆಯಲ್ಲಿ ಬಿಜೆಪಿ ಸಂಘಟನೆ ತನ್ನ ನೆಲೆಯನ್ನು ಬಲಪಡಿಸಿದೆ.  ಈ ಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ತೃಣಮೂಲ ಕಾಂಗ್ರೆಸ್‌ನ ಸಂಘಟನಾ ಶಕ್ತಿ ದುರ್ಬಲಗೊಂಡಿದೆ. ಭ್ರಷ್ಟಾಚಾರ ಆರೋಪಗಳು ಮತ್ತು ಆಡಳಿತ ಪಕ್ಷದಲ್ಲಿನ ಆಂತರಿಕ ಕಚ್ಚಾಟವು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಕೆಲವು ಅಡಚಣೆಗಳಾಗಬಹುದು ಎಂಬ ಮಾತುಗಳಿವೆ.

ಬಿಜೆಪಿ ಮೂಲಗಳ ಪ್ರಕಾರ, ಸ್ಥಳೀಯ, ಪ್ರಭಾವಿ ಮತ್ತು ಪರಿಚಿತ ಮುಖದ ‘ರಾಣಿಮಾ’ ಅಮೃತಾ ರಾಯ್ ಅವರ ಸ್ಪರ್ಧೆ ಪಕ್ಷಕ್ಕೆ ಲಾಭ ತಂದು ಕೊಡಲಿದೆ ಎಂದು ಹೇಳಲಾಗುತ್ತಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!