spot_img
Tuesday, March 31, 2026
spot_img

ಸ.ಹಿ.ಪ್ರಾ.ಶಾಲೆ ನೂಜಾಡಿ-2 ಬಗ್ವಾಡಿಗೆ ಆಭರಣ ಪೌಂಡೇಶನ್ ಉಡುಪಿ ವತಿಯಿಂದ 5 ಕಂಪ್ಯೂಟರ್ ಕೊಡುಗೆ

ಕುಂದಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ-2 ಬಗ್ವಾಡಿ ಶಾಲೆಗೆ ಆಭರಣ ಪೌಂಡೇಶನ್ ಉಡುಪಿ ಇವರು ತಮ್ಮ ಸಿ.ಎಸ್.ಆರ್ ನಿಧಿಯಿಂದ ಶಾಲೆಗೆ ರೂ.ಒಂದು ಲಕ್ಷದ ಅರವತ್ತೆಂಟು ಸಾವಿರ ಮೌಲ್ಯದ 5 ಕಂಪ್ಯೂಟರ್ ಅನ್ನು ನೀಡಿದ್ದಾರೆ.

ಕೊಡುಗೆಯನ್ನು ಮಾ.22ರಂದು ನಡೆದ ಸರಳ ಸಮಾರಂಭದಲ್ಲಿ ಆಭರಣ ಪೌಂಡೇಶನ್ ಸದಸ್ಯರಾದ ರಂಗನಾಥ್ ಅವರು ಉದ್ಘಾಟಿಸಿದರು. ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಆಭರಣ ಫೌಂಡೇಶನ್ ಸದಸ್ಯ ಮಂಜುನಾಥ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಂಜುನಾಥ್ ಪುತ್ರನ್ ಶತಮಾನೋತ್ಸವ ಸಮಿತಿ ಅಧ್ಯಕ್ಷರು ನಿವೃತ್ತ ಅಧ್ಯಾಪಕರಾದ ರಾಜೀವ್ ಶೆಟ್ಟಿ ಬಿ.., ಶಾಲಾ ಹಳೆ ವಿದ್ಯಾರ್ಥಿ ನಿವೃತ್ತ ಐ ಎ.ಎಸ್ ಅಧಿಕಾರಿ ಬಿ. ಎನ್. ಶೆಟ್ಟಿ ,ನಿವೃತ್ತ ಬ್ಯಾಂಕ್ ಅಧಿಕಾರಿ ಸೂಲಿಯಣ್ಣ ಶೆಟ್ಟಿ, ಪುರೋಹಿತರಾದ ಮಂಜುನಾಥ್ ಭಟ್ ಹರೇಗೋಡು, ಹಳೆ ವಿದ್ಯಾರ್ಥಿಗಳಾದ ಪ್ರಕಾಶ್ ಆಚಾರ್ಯ, ಶಂಕರನಾರಾಯಣ ಭಟ್, ರಾಧಾಕೃಷ್ಣ ಗಾಣಿಗ, ಎಸ್ ಡಿ ಎಮ್ ಸಿ ಸದಸ್ಯರಾದ ಭಾವನಾ ಭಟ್, ಸರೋಜಾ, ಯಶೋಧ ಜ್ಯೋತಿ, ಭಾಗ್ಯವತಿ, ಶೈಲಜಾ, ಅಂಗನವಾಡಿ ಕಾರ್ಯಕರ್ತೆ ಸುಶೀಲ, ಆಶಾ ಕಾರ್ಯಕರ್ತೆ ಶಾರದ, ಶಿಕ್ಷಕವೃಂದವರು ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಶೈಲಜಾ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ಸತ್ಯವತಿ ವಂದಿಸಿದರು. ಗೌರವ ಶಿಕ್ಷಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಜಯಂತಿ, ಶ್ವೇತ ಮತ್ತು ಹರ್ಷಿತ ಕಾರ್ಯಕ್ರಮಕ್ಕೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!