spot_img
Monday, March 16, 2026
spot_img

ಲೋಕಸಭಾ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ | ಉ.ಚಿ ಕ್ಷೇತ್ರಕ್ಕೆ ಹೆಗ್ಡೆ, ದ.ಕ ಕ್ಷೇತ್ರಕ್ಕೆ ಪದ್ಮರಾಜ್ ಹೆಸರು ಘೋಷಣೆ !

ಜನಪ್ರತಿನಿಧಿ (ಬೆಂಗಳೂರು) : ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನ ಕರ್ನಾಟಕ ಪಾಲಿನ 2ನೇ ಪಟ್ಟಿ ಕೊನೆಗೂ ಬಿಡುಗಡೆಯಾಗಿದೆ.
ಕಾಂಗ್ರೆಸ್ ಹೈಕಮಾಂಡ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು , ರಾಜ್ಯದ 17 ಮಂದಿ ಅಭ್ಯರ್ಥಿಗಳನ್ನು ಇಂದು (ಗುರುವಾರ) ಘೋಷಣೆ ಮಾಡಿದೆ.
ರಾಜ್ಯದಲ್ಲಿ ಬಾಕಿ ಇದ್ದ 21 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ (ಸಿಇಸಿ) ಸಭೆ ಒಟ್ಟು 17 ಕ್ಷೇತ್ರಗಳಿಗೆ ಟಿಕೆಟ್‌ ಅಂತಿಮಗೊಳಿಸಿತ್ತು, ಆ ಪಟ್ಟಿಯನ್ನು ಹೈಕಮಾಂಡ್ ಇಂದು ಘೋಷಿಸಿದೆ.
ಇನ್ನು ರಾಜ್ಯದ 7 ಕ್ಷೇತ್ರಗಳಿಗೆ ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿಈಗಾಗಲೇ ಟಿಕೆಟ್‌ ಘೋಷಣೆಯಾಗಿದೆ. ಇನ್ನು ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೇಟ್ ಘೋಷಣೆ ಮಾಡಬೇಕಿದೆ.
17 ಅಭ್ಯರ್ಥಿಗಳ ಹೆಸರು ಮತ್ತು ಕ್ಷೇತ್ರಗಳು :
ಚಿಕ್ಕೋಡಿ-ಪ್ರಿಯಂಕಾ ಜಾರಕಿಹೊಳಿ
ಬೆಳಗಾವಿ-ಮೃಣಾಲ್ ಹೆಬ್ಬಾಳ್ ಕರ್
ಬಾಗಲಕೋಟೆ- ಸಂಯುಕ್ತಾ ಎಸ್ ಪಾಟೀಲ್
ಕಲಬುರಗಿ – ರಾಧಾಕೃಷ್ಣ
ರಾಯಚೂರು-ಜಿ.ಕುಮಾರನಾಯಕ್
ಬೀದರ್-ಸಾಗರ್ ಖಂಡ್ರೆ
ಕೊಪ್ಪಳ-ರಾಜಶೇಖರ್ ಹಿಟ್ನಾಳ
ಧಾರವಾಡ-ವಿನೋದ್ ಅಸೂಟಿ
ಉತ್ತರಕನ್ನಡ -ಡಾ.ಅಂಜಲಿ ನಿಂಬಾಳ್ಕರ್
ದಾವಣಗೆರೆ-ಪ್ರಭಾ ಮಲ್ಲಿಕಾರ್ಜುನ್
ಉಡುಪಿ ಚಿಕ್ಕಮಗಳೂರು-ಡಾ.ಜಯಪ್ರಕಾಶ್ ಹೆಗ್ಡೆ
ದಕ್ಷಿಣಕನ್ನಡ-ಪದ್ಮರಾಜ್
ಚಿತ್ರದುರ್ಗ-ಬಿ.ಎನ್ ಚಂದ್ರಪ್ಪ
ಮೈಸೂರು ಕೊಡಗು -ಎಂ. ಲಕ್ಷ್ಮಣ್
ಬೆಂಗಳೂರು ಉತ್ತರ-ಎಂ.ವಿ.ರಾಜೀವ್ ಗೌಡ
ಬೆಂಗಳೂರು ಕೇಂದ್ರ- ಮನ್ಸೂರ್ ಅಲಿಖಾನ್
ಬೆಂಗಳೂರು ದಕ್ಷಿಣ-ಸೌಮ್ಯ ರೆಡ್ಡಿ

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!