Wednesday, September 11, 2024

ಕಲಿಕೆಯ ದಾರಿಯಲ್ಲಿ ಅಭಿರುಚಿ ಮತ್ತು ಅಧ್ಯಯನದಲ್ಲಿ ನಿರಂತರತೆ ಪಾಲಿಸಲೇ ಬೇಕು : ಪ್ರೊ.ಸುರೇಂದ್ರನಾಥ ಶೆಟ್ಟಿ

ಜನಪ್ರತಿನಿಧಿ (ಉಡುಪಿ) : ಇಂದಿನ ಸ್ಥಧಾ೯ತ್ಮಕ ಪರೀಕ್ಷೆಗಳನ್ನು ಸಮಥ೯ವಾಗಿ ಎದುರಿಸುವಲ್ಲಿ ವಿದ್ಯಾರ್ಥಿಗಳು ಪ್ರಮುಖವಾಗಿ ಮೈಗೂಡಿಸಿ ಕೊಳ್ಳಬೇಕಾದ ಎರಡು ಗುಣಗಳೆಂದರೆ ತಮ್ಮ ಗುರಿಯ ಬಗ್ಗೆ ದೃಢ ನಿಧಾ೯ರ ಕಠಿಣ.ಪರಿಶ್ರಮ. ತಮ್ಮ ಕಲಿಕೆಯ ದಾರಿಯಲ್ಲಿ ಅಭಿರುಚಿ ಮತ್ತು ಅಧ್ಯಯನದಲ್ಲಿ ನಿರಂತರತೆ ಪಾಲಿಸಲೇ ಬೇಕು. ಇಂದಿನ ಸಿ.ಇ.ಟಿ.ಎನ್.ಇ.ಇ.ಟಿ.ಅಂತಹ ಸ್ಪಧಾ೯ತ್ಮಕ ಪರೀಕ್ಷೆಗಳನ್ನು ಸುಗಮವಾಗಿ ಎದುರಿಸಿ ಗೆಲ್ಲ ಬೇಕಾದರೆ ತಾವು ಕಲಿತು ಪರಿಣಿತಿಗೊಂಡ ವಿಷಯಗಳ ಮೇಲು ಹೆಚ್ಚಿನ ತರಬೇತಿ ಅನಿವಾರ್ಯತೆ ಇದೆ ಎಂದು ಉಡುಪಿ ಎಂಜಿಎಂ.ಕಾಲೇಜಿನ ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ, ರಾಜಕೀಯ ವಿಶ್ಲೇಷಕ ಪ್ರೊ.ಸುರೇಂದ್ರನಾಥ ಶೆಟ್ಟಿ ಹೇಳಿದರು.

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇವರ ಆಶ್ರಯದಲ್ಲಿ ಉಡುಪಿ ಕಾಪು ಬ್ರಹ್ಮಾವರ ತಾಲೂಕಿನ ಬಂಟ ಸಮಾಜದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮ  ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಬಹುಮುಖ್ಯವಾಗಿ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಇದರಲ್ಲಿ ಹೆಚ್ಚಿನ ಸಹಾಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಉಡುಪಿ, ಬ್ರಹ್ಮಾವರ ಕಾಪು ಬಂಟರ ಸಂಘ ಹೆಚ್ಚಿನ ಆಸಕ್ತಿ ವಹಿಸಿ ಉಚಿತ ತರಬೇತಿಯನ್ನು ಉಡುಪಿಯ ವಿನಾಯ ಅಕಾಡೆಮಿಯ ಮೂಲಕ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದವರು ಅಭಿಪ್ರಾಯ ಪಟ್ಟರು.

ಸಭೆಯ ಅಧ್ಯಕ್ಷತೆಯನ್ನು ಉಡುಪಿ ಬಂಟರ ಸಂಘದ ಸಂಚಾಲಕ ಶಿವ ಪ್ರಸಾದ್ ಹೆಗ್ಡೆ ವಹಿಸಿದ್ದರು. ನಿಕಟ ಪೂವಾ೯ಧ್ಯಕ್ಷ ಜಯರಾಜ್ ಹೆಗ್ಡೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಬಂಟರ ಸಂಘದ  ಹಿರಿಯ ಸದಸ್ಯರಾದ ಪ್ರಸಾದ್ ಹೆಗ್ಡೆ ಮಾರಾಳಿ, ಚೇಕಾ೯ಡಿ ಹರೀಶ್ ಶೆಟ್ಟಿ, ಕಿಶೋರ್ ಶೆಟ್ಟಿ, ಮಿಥುನ್ ಹೆಗ್ಡೆ, ಇಂದಿರಾ ಎಸ್.ಹೆಗ್ಡೆ, ಅನುಪಮ ಪ್ರಸಾದ್ ಶೆಟ್ಟಿ, ತಾರಾನಾಥ್ ಹೆಗ್ಡೆ ಮಣಿಪಾಲ್,  ವಿನಯ ಅಕಾಡೆಮಿಯ ಪ್ರಶಾಂತ ಉಪಸ್ಥಿತರಿದ್ದರು.

ಬಂಟರ ಸಂಘದ ಉಪ ಸಂಚಾಲಕ ದಿನೇಶ್ ಹೆಗ್ಡೆ ವಂದಿಸಿ ಹಿರಿಯ ಸದಸ್ಯ ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!