Saturday, September 14, 2024

ಕಲರ್‌ ಕಾಟನ್‌ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಬಳಕೆ ನಿಷೇಧ

ಜನಪ್ರತಿನಿಧಿ (ಬೆಂಗಳೂರು) : ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ನಿಷೇಧದ ಬಗ್ಗೆ ರಾಜ್ಯ ಸರ್ಕಾರ ಇಂದು (ಸೋಮವಾರ) ತನ್ನ ನಿರ್ಧಾರ ಪ್ರಕಟಿಸಿದೆ. ಕಲರ್ ಕಾಟನ್ ಕ್ಯಾಂಡಿಯನ್ನು ರಾಜ್ಯದಲ್ಲಿ ಬ್ಯಾನ್ ಮಾಡಲಾಗಿದ್ದು, ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣ ಬಳಸುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಗುಂಡೂರಾವ್, ಕಾಟನ್ ಕ್ಯಾಂಡಿಯಲ್ಲಿ ಬಳಸುವ ಬಣ್ಣದಲ್ಲಿ ಅಪಾಯಕಾರಿ ಅಂಶಗಳಿವೆ. ಹೀಗಾಗಿ ಅದನ್ನು ನಿಷೇಧ ಮಾಡಲಾಗುತ್ತದೆ. ಆದರೆ ಬಣ್ಣ ಬಳಸದೆ ತಯಾರಿಸುವ ಕಾಟನ್ ಕ್ಯಾಂಡಿಗೆ ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ.

ಒಂದು ವೇಳೆ ಕಲರ್ ಕಾಟನ್ ಕ್ಯಾಂಡಿ ಮಾರಿದರೆ ಕಾನೂನು ರೀತಿಯ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಕೃತಕ ಬಣ್ಣ ಬಳಸುವಂತಿಲ್ಲ: ಪ್ರಸಿದ್ಧ ಖಾದ್ಯ ಗೋಬಿ ಮಂಚೂರಿಯು ಸಸ್ಯಹಾರಿ ಪದಾರ್ಥವಾದ ಕಾರಣ ಅದನ್ನು ಬ್ಯಾನ್ ಮಾಡಲಾಗದು. ಆದರೆ ಅದಕ್ಕೆ ಕೃತಕ ಬಣ್ಣ ಬಳಸುವಂತಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಗೋಬಿ ಮಂಚೂರಿಯನ್ನು ನಿಷೇಧಿಸುತ್ತಿಲ್ಲ. ಆದರೆ ಕೃತಕ ಬಣ್ಣ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಕೃತಕ ಬಣ್ಣ ಬಳಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!