spot_img
Saturday, December 7, 2024
spot_img

ಕೊಲ್ಲೂರು: ಉಚಿತ ಕಣ್ಣಿನ ಪೊರೆ ರೋಗ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ

ಕೊಲ್ಲೂರು: ಜಿಲ್ಲಾ ಅಂಧತ್ವ ನಿವಾರಣ ವಿಭಾಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಲ್ಲೂರು, ಗ್ರಾಮ ಪಂಚಾಯತ್ ಕೊಲ್ಲೂರು, ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಲಯನ್ಸ್ ಕ್ಲಬ್ ಬೈಂದೂರು ಉಪ್ಪುಂದ, ನವಶಕ್ತಿ ಮಹಿಳಾ ವೇದಿಕೆ ಕೊಲ್ಲೂರು, ಮಹಿಳಾ ಮಂಡಲ ಕೊಲ್ಲೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊಲ್ಲೂರು ಮೂಕಾಂಬಿಕಾ ಸಭಾಭವನದಲ್ಲಿ ಉಚಿತ ಕಣ್ಣಿನ ಪೊರೆ ರೋಗ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು.

ಶಿಬಿರವನ್ನು ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಶೇರುಗಾರ್ ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಗಿರೀಶ್ ಶಾನುಭಾಗ್ ಶಿಬಿರದ ಅಧ್ಯಕ್ಷತೆ ವಹಿಸಿ ಅನವಶ್ಯಕ ಹಣ ಖರ್ಚು ಮಾಡಿಕೊಳ್ಳದೇ ಇಂತಹ ಉಚಿತ ಕಣ್ಣಿನ ಶಿಬಿರಗಳಲ್ಲಿ ಭಾಗವಹಿಸಿ, ತಮ್ಮ ಕಣ್ಣಿನ ತೊಂದರೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯಬೇಕು. ಅಲ್ಲದೇ ಮರಣದ ನಂತರ ಕಣ್ಣು ದಾನ ಮಾಡಬೇಕು ಎಂದರು.

ಡಾ. ಶಂಕರ ಶೆಟ್ಟಿ ಮಾತನಾಡಿ ಕಣ್ಣುಗಳ ದೃಷ್ಟಿಯು ಸಮರ್ಪಕವಾಗಿ ಇದ್ದರೆ ಕುಳಿತ ಸ್ಥಳದಿಂದಲೆ ಜಗತ್ತನ್ನು ವೀಕ್ಷಿಸುವ ಶಕ್ತಿ ಪ್ರತಿಯೊಬ್ಬರಲ್ಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ರಶ್ಮಿ , ಕೊಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾಗೇಶ್, ಲಯನ್ಸ್ ಕ್ಲಬ್ ಖಜಾಂಚಿ ನಾರಾಯಣ ಶೆಟ್ಟಿ, ಕೊಲ್ಲೂರು ದೇವಳದ ಸಿಬ್ಬಂದಿಗಳಾದ ಗಣೇಶ್ ಉಡುಪ, ವೇಣುಗೋಪಾಲ್, ಕೊಲ್ಲೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಮ್ ನಾಯ್ಕ್ , ಹಿರಿಯ ಆರೋಗ್ಯ ಸಹಾಯಕಿ ಸುಮತಿ, ನವಶಕ್ತಿ ಮಹಿಳಾ ವೇದಿಕೆ ಅಧ್ಯಕ್ಷೆ ಗ್ರೀಷ್ಮಾ ಗಿರಿಧರ ಭಿಡೆ ಉಪಸ್ಥಿತರಿದ್ದರು. ನವಶಕ್ತಿ ಮಹಿಳಾ ವೇದಿಕೆಯ ಸದಸ್ಯೆ ಸುಗುಣ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರಶಾಂತ್ ಪ್ರಭು ವಂದಿಸಿದರು. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!