spot_img
Friday, April 25, 2025
spot_img

ವಿತ್ತ ಆಯೋಗ ತಮ್ಮದೇ ಇಲಾಖೆಯ ಅಡಿಯಲ್ಲಿ ಬರುತ್ತದೆ ಎಂಬ ಕನಿಷ್ಠ ಕಾಮನ್ ಸೆನ್ಸ್ ಇಲ್ಲದಿರುವುದು ದೇಶದ ದೌರ್ಭಾಗ್ಯ : ನಿರ್ಮಲಾ ವಿರುದ್ಧ ರಾಜ್ಯ ಕಾಂಗ್ರೆಸ್‌ ಆಕ್ರೋಶ

ಜನಪ್ರತಿನಿಧಿ ವಾರ್ತೆ (ಬೆಂಗಳೂರು) : ವಿತ್ತ ಸಚಿವೆ ಶಾಲೆಯಲ್ಲಿ ಓದಿದ್ದಾರೋ, ಶಾಖೆಯಲ್ಲಿ ಓದಿದ್ದಾರೋ ತಿಳಿಯದು ಎಂದು ರಾಜ್ಯ ಕಾಂಗ್ರೆಸ್‌ ನಿರ್ಮಲಾ ಸೀತಾರಾಮನ್‌ ವಿರುದ್ಧ ಸಂಶಯ ವ್ಯಕ್ತಪಡಿಸಿದೆ.

ತನ್ನ ಅಧಿಕೃತ ಮೈಕ್ರೋ ಬ್ಲಾಗಿಂಗ್‌ ʼಎಕ್ಸ್‌ʼ ಖಾತೆಯಲ್ಲಿ ನಿರ್ಮಲಾ ಅವರನ್ನು ಟೀಕಿಸಿದ ಕಾಂಗ್ರೆಸ್‌, ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಹಾಗೂ ಅನುದಾನಗಳಲ್ಲಿ ಅನ್ಯಾಯವಾಗಿದೆ ಎಂದರೆ ನಮ್ಮನ್ನು ಯಾಕೆ ಕೇಳ್ತೀರಿ ಹಣಕಾಸು ಆಯೋಗವನ್ನು ಕೇಳಿ ಎನ್ನುವ ಇವರು ಹಿಂದೆ ಈರುಳ್ಳಿ ಬೆಲೆ ಏರಿಕೆಯ ಪ್ರಶ್ನೆಗೆ ನಾನು ಈರುಳ್ಳಿ ತಿನ್ನುವುದಿಲ್ಲ ಎಂದಿದ್ದರು ಎಂದು ಟೀಕೆ ಮಾಡಿದೆ.

ಕೇಂದ್ರ ಹಣಕಾಸು ಆಯೋಗವು ತಮ್ಮದೇ ಇಲಾಖೆಯ ಅಡಿಯಲ್ಲಿ ಬರುತ್ತದೆ, ಕೇಂದ್ರ ಸರ್ಕಾರದ ಅದೀನದಲ್ಲಿದೆ ಎಂಬ ಕನಿಷ್ಠ ಕಾಮನ್ ಸೆನ್ಸ್ ಇಲ್ಲದಿರುವುದು ದೇಶದ ದೌರ್ಭಾಗ್ಯ. ಇಂತಹ ಸದಾರಮೆ ನಾಟಕ ಬಿಟ್ಟು ಕರ್ನಾಟಕಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವನ್ನು ಸಲ್ಲಿಸಿ ಎಂದು ಆಗ್ರಹಿಸಿದೆ.

ಕೇಂದ್ರ ಸರ್ಕಾರ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ಮುಂದಾಗಿರುವಾಗಲೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕಾಂಗ್ರೆಸ್‌ ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಿಜೇಪಿಯೇತರ ಸರ್ಕಾರಗಳ ಆಳ್ವಿಕೆ ನಡೆಸುತ್ತಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುದಾನ ತಡೆ ಹಿಡಿದಿದೆ ಎಂದು ಆರೋಪಿಸುವುದು ರಾಜಕೀಯ ಪ್ರೇರಿತ ಎಂದು ಹೇಳಿದ್ದರು. ಮಾತ್ರವಲ್ಲದೇ, ಹಣ ಕಮ್ಮಿಯಾದರೇ ನಮ್ಮನ್ನಲ್ಲ ವಿತ್ತ ಆಯೋಗವನ್ನು ಕೇಳಿ ಎಂದೂ ಅವರು ಹೇಳಿದ್ದರು. ಈ ಹೇಳಿಕೆಯ ವರದಿಯನ್ನು ಉಲ್ಲೇಖಿಸಿ ನಿರ್ಮಲಾ ವಿರುದ್ಧ ಆಕ್ರೋಶ ಹೊರ ಹಾಕಿದೆ.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!