spot_img
Sunday, April 5, 2026
spot_img

ಲೋಕಸಭಾ ಚುನಾವಣೆ : ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧೆ : ಮತ್ತೊಮ್ಮೆ ʼಇಂಡಿಯಾʼ ಮೈತ್ರಿ ಬಗ್ಗೆ ಅಸಮಾಧಾನ ಹೊರ ಹಾಕಿದ ದೀದಿ

ಜನಪ್ರತಿನಿಧಿ ವಾರ್ತೆ (ಪಶ್ಚಿಮ ಬಂಗಾಳ) : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಮತಾ ಬ್ಯಾನರ್ಜಿ ಇಂದು(ಬುಧವಾರ) ಘೋಷಣೆ ಮಾಡುವುದರ ಮೂಲಕ ಮತ್ತೊಮ್ಮೆ ದೀದಿ ʼಇಂಡಿಯಾʼ ಮೈತ್ರಿ ಬಗೆಗಿನ ಅಸಮಧಾನ ಹೊರ ಹಾಕಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಏಕಾಂಗಿಯಾಗಿ ಎದುರಿಸುವ ಬಗ್ಗೆ ತನ್ನ ನಿರ್ಧಾರಕ್ಕಾಗಿ ʼಇಂಡಿಯಾʼ ಮೈತ್ರಿಯ ನೇತೃತ್ವ ವಹಿಸಿಕೊಂಡ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆಯ ಮಾತುಕತೆ ವಿಫಲವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

“ನಾನು ಅವರಿಗೆ ಯಾವುದೇ ಪ್ರಸ್ತಾಪವನ್ನು ನೀಡಿದ್ದರೂ, ಅವರು ಎಲ್ಲವನ್ನೂ ನಿರಾಕರಿಸಿದ್ದಾರೆ” ಎಂದು ಬ್ಯಾನರ್ಜಿ ಹೇಳಿದರು.  ಕಾರಣದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಚುನಾವನೆಯನ್ನು ಎದುರಿಸಲಿದೆ ಎಂದು ಅವರು ಈ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಯೋಜಿಸಿರುವ ಬಗ್ಗೆ ಯಾವುದೇ ಮಾಹಿತಿಯನ್ನು ನನಗೆ ತಿಳಿಸಿಲ್ಲ. ಒಂದು ಸೌಜನ್ಯಪೂರ್ವಕವಾಗಿಯಾದರೂ ನನಗೆ ಅವರು ಯಾತ್ರೆಯ ಬಗ್ಗೆ ತಿಳಿಸಬಹುದಿತ್ತು ಎಂದು ಅವರು ಹೇಳಿರುವುದಾಗಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೇ ವರದಿ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ವಿರುದ್ಧ ಹುಟ್ಟಿಕೊಂಡ ʼಇಂಡಿಯಾʼ ಮೈತ್ರಿಯ ಪಕ್ಷಗಳ ಪ್ರಯತ್ನಗಳಿಗೆ ಬ್ಯಾನರ್ಜಿಯವರ ನಿರ್ಧಾರವು ಭಾರಿ ದೊಡ್ಡಮಟ್ಟದಲ್ಲಿ ಹಿನ್ನಡೆ ಉಂಟು ಮಾಡಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಮೇಲೆದ್ದಿದೆ.

ಒಂದೆಡೆ ಕಾಂಗ್ರೆಸ್‌ ರಾಹುಲ್ ಗಾಂಧಿ ನೇತೃತ್ವದ ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯಲ್ಲಿ ನಿರತವಾಗಿದೆ. ಚುನಾವನೆ ಸಮೀಪಿಸುತ್ತಿದ್ದಂತೆ ʼಇಂಡಿಯಾʼ ಮೈತ್ರಿ ಬಳಗದಲ್ಲಿ ಪ್ರತಿನಿತ್ಯ ಬಿರುಕು ದೊಡ್ಡದಾಗುತ್ತಿರುವುದು ಆಡಳಿತರೂಢ ಬಿಜೆಪಿಗೆ ನಿರಾಯಾಸವಾಗಿ ಸಿಕ್ಕಂತ ಗ್ರಾಸವಾಗಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!