spot_img
Friday, January 17, 2025
spot_img

ಹಿಮಂತ್‌ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ : ರಾಹುಲ್‌ ಗಾಂಧಿ ಆಕ್ರೋಶ

ಜನಪ್ರತಿನಿಧಿ ವಾರ್ತೆ (ಅಸ್ಸಾಂ) : ಹಿಮಂತ್‌ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆಕ್ರೋಶ ಯಕ್ತ ಪಡಿಸಿದ್ದಾರೆ.

ರಾಹುಲ್‌ ಅಸ್ಸಾಂನ ಬಾರ್ಪೇಟಾದಲ್ಲಿ ನಡೆದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಯಲ್ಲಿ ಅಸಾಂ ಮುಖ್ಯಮಂತ್ರಿ ಹಿಮತ್‌ ಬಿಸ್ವಾ ಶರ್ಮಾ ವಿರುದ್ಧ ಕಿಡಿ ಕಾರಿದ್ದಾರೆ.

ಅವರು (ಹಿಮಂತ್‌ ಬಿಸ್ವಾ ಶರ್ಮಾ)  ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ನಿಯಂತ್ರಣದಲ್ಲಿದ್ದಾರೆ. ಅವರು ಅಮಿತ್‌ ಶಾ ವಿರುದ್ಧ ಏನಾದರು ನಡೆದುಕೊಳ್ಳುವುದಕ್ಕೆ ಮುಂದಾದರೇ, ಪಕ್ಷದಿಂದ ಅವರನ್ನು ಉಚ್ಛಾಟನೆ ಮಾಡಲಾಗುತ್ತದೆ. ಅದಕ್ಕಾಗಿ ಅಮಿತ್‌ ಶಾ ಹೇಳಿದ ಹಾಗೆ ಹಿಮಂತ್‌ ಬಿಸ್ವಾ ಶರ್ಮಾ ಕುಣಿದಾಡುತ್ತಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ತನ್ನ ಪ್ರಯಾಣದ 11 ನೇ ದಿನದಂದು ಬಾರ್ಪೇಟಾದಲ್ಲಿ ಪುನರಾರಂಭಗೊಂಡಿದೆ. ಜನವರಿ 14 ರಂದು ಮಣಿಪುರದ ತೌಬಲ್‌ನಿಂದ ರಾಹುಲ್‌ ಗಾಂಧಿ ಯಾತ್ರೆ ಆರಂಭಿಸಿದ್ದರು.

‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಗೆ ಅದರ ಪ್ರಮುಖ ಮಾರ್ಗಗಳ ಮೂಲಕ ಗುವಾಹಟಿ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿಗಳ ನಡುವಿನ ಘರ್ಷಣೆಯ ನಂತರ ನಿನ್ನೆ(ಮಂಗಳವಾರ) ರಾಹುಲ್‌ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ವಿರುದ್ಧ  ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮಾ ಎಫ್‌ಐಆರ್ ದಾಖಲಿಸಿದ್ದರು.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಮತ್ತು ಇತರ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ನಿನ್ನೆ(ಮಂಗಳವಾರ) ಹೇಳಿದ್ದರು. “ಕಾಂಗ್ರೆಸ್ ಸದಸ್ಯರು ಹಿಂಸಾಚಾರ, ಪ್ರಚೋದನೆ, ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕಾಗಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!