Sunday, September 8, 2024

ರಾಮ ಮಂದಿರ ಲೋಕಾರ್ಪಣೆ: ಇದೊಂದು ಧಾರ್ಮಿಕ ಕಾರ್ಯಕ್ರಮ, ರಾಜಕೀಯ ಅಲ್ಲ : ಸೂಪರ್‌ ಸ್ಟಾರ್‌ ರಜನಿಕಾಂತ್‌

ಜನಪ್ರತಿನಿಧಿ ವಾರ್ತೆ (ಚೆನ್ನೈ) : ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ನನಗೆ ಒಂದು ಧಾರ್ಮಿಕ ಕಾರ್ಯುಕ್ರಮವೇ ಹೊರತು ರಾಜಕೀಯ ಕಾರ್ಯಕ್ರಮವಾಗಿ ಕಾಣಿಸಿಲ್ಲ ಎಂದು ಸೂಪರ್‌ ಸ್ಟಾರ್‌ ರಜನಿಕಾಂತ್‌ ಹೇಳಿದ್ದಾರೆ.

ಅವರು ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಚೆನ್ನೆಗೆ ಆಗಮಿಸಿದ್ದಾರೆ., ಚೈನೈ ಏರ್‌ ಪೂರ್ಟ್‌ ನಲ್ಲಿ ವರದಿಗಾರರಿಗೆ ಸ್ರಪಂದಿಸಿದ ಅವರು, ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮನದಲ್ಲಿ ಭಾಗಿಯಾಗಿರುವುದಕ್ಕೆ ಅತೀವ ಸಂತೋಷ ಉಂಟಾಗಿದೆ. ರಾಮ ದರ್ಶನ ಪಡೆದ ಮೊದಲ ೧೫೦ ಮಂದಿಯಲ್ಲಿ ನಾನು ಇದ್ದ ಎಂದೂ ಅವರು ಪ್ರತಿಕ್ರಯಿಸಿದ್ದಾರೆ.

ರಾಮಮಂದಿರ ಲೋಕಾರ್ಪಣೆಯ ನಂತರ ರಜನಿಕಾಂತ್ ಅವರು ಪ್ರತಿ ವರ್ಷವೂ ಅಯೋಧ್ಯೆಗೆ ಭೇಟಿ ನೀಡುವುದನ್ನು ರೂಢಿಸಿಕೊಳ್ಳುವುದಾಗಿ ಹೇಳಿದ್ದಾರೆ. ಅವರ ಪತ್ನಿ ಲತಾ ರಜನಿಕಾಂತ್, ಸಹೋದರ ಸತ್ಯನಾರಾಯಣ ರಾವ್ ಮತ್ತು ಅವರ ಮೊಮ್ಮಗ ಲಿಂಗ ಅವರೊಂದಿಗೆ ಇದ್ದರು.

ಇನ್ನು, ಸದ್ಯ ಸೂಪರ್‌ಸ್ಟಾರ್ ರಜನಿಕಾಂತ್ ಪ್ರಸ್ತುತ ನಿರ್ದೇಶಕ ಟಿಜೆ ಜ್ಞಾನವೇಲ್ ಅವರ ‘ವೆಟ್ಟಾಯನ್’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಚಿತ್ರದಲ್ಲಿ ಫಹಾದ್ ಫಾಸಿಲ್, ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ದುಶಾರಾ ವಿಜಯನ್ ಮತ್ತು ಮಂಜುರ್ ವಾರಿಯರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

‘ವೆಟ್ಟಯಾನ್’ ನಂತರ ರಜನಿಕಾಂತ್ ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ‘ತಲೈವರ್ 171’ ಚಿತ್ರಕ್ಕೆ ಕೈಜೋಡಿಸಲಿದ್ದಾರೆ. ಅವರು ತಮ್ಮ ಮಗಳು ಐಶ್ವರ್ಯಾ ಅವರ ಮುಂಬರುವ ನಿರ್ದೇಶನದ ‘ಲಾಲ್ ಸಲಾಮ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಫೆಬ್ರವರಿ 9 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!