spot_img
Monday, June 23, 2025
spot_img

ವಕ್ಫ್‌ ಆಸ್ತಿ ವಿವಾದ : ಅನ್ನದಾತನ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ ಕಾಂಗ್ರೆಸ್‌ : ಬಿಜೆಪಿ ಆಕ್ರೋಶ

ಜನಪ್ರತಿನಿಧಿ (ಬೆಂಗಳೂರು) : ರಾಜ್ಯದಲ್ಲಿ ಅನ್ನದಾತ ಹತ್ತು ಹನ್ನೊಂದು ಸಮಸ್ಯೆಯಲ್ಲಿ ಸಿಲುಕಿ ಜೀವವನ್ನೇ ಬಿಡುತ್ತಿದ್ದರೆ, ರೈತ ವಿರೋಧಿ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಮತ್ತೊಂದು ಸಮಸ್ಯೆಯನ್ನು ನೀಡಿ ಅನ್ನದಾತನ ಬದುಕನ್ನೇ ಸರ್ವನಾಶ ಮಾಡಲು ಹೊರಟಿದೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದೆ.

ರೈತರು ಮಳೆ, ಅತಿವೃಷ್ಟಿ, ಅನಾವೃಷ್ಟಿ, ಬೆಳೆ ಹಾನಿ, ಕಳಪೆ ಬೀಜ, ಬೆಲೆ ಕುಸಿತದಂತಹ ಹತ್ತಾರು ಸಮಸ್ಯೆಗಳಲ್ಲಿ ಸಿಲುಕಿ ನರಳುತ್ತಿದ್ದಾರೆ. ಇದರ ನಡುವೆ ತುಷ್ಟೀಕರಣದ ಜಿದ್ದಿಗೆ ಬಿದ್ದಿರುವ A1 ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ವಕ್ಫ್‌ ಬೋರ್ಡ್‌ ಅನ್ನು ಎತ್ತಿಕಟ್ಟಿ ಜಮೀನುಗಳನ್ನು ಕಬಳಿಸಲು ಬೆಂಬಲ ನೀಡಿದೆ ಎಂದು ಆಕ್ರೋಶ ಹೊರ ಹಾಕಿದೆ.

ಹೀಗಾಗಿ ರಾಜ್ಯದ ತುಂಬಾ ಆತಂಕಗೊಂಡಿರುವ ರೈತರು ಕೆಲಸ ಕಾರ್ಯಗಳನ್ನು ಬಿಟ್ಟು ಪಹಣಿ ಪಡೆಯಲು ಕ್ಯೂ ನಿಲ್ಲುವ ಪರಿಸ್ಥಿತಿ ಎದುರಾಗಿದೆ. 14 ಸೈಟುಗಳನ್ನು ವಾಪಸ್‌ ಕೊಟ್ಟ ಸೇಡಿಗೆ ಸಿದ್ದರಾಮಯ್ಯನವರು ಈ ರೀತಿ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ ಎನ್ನುವ ಅನುಮಾನ ನಾಡಿನ ಜನರಲ್ಲಿ ಮನೆ ಮಾಡಿದೆ ಎಂದು ಬಿಜೆಪಿ ಆತಂಕ ವ್ಯಕ್ತಪಡಿಸಿದೆ.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!