spot_img
Monday, April 6, 2026
spot_img

ಅಸ್ಸಾಂ ನಲ್ಲಿ ರಾಹುಲ್‌ ನ್ಯಾಯ್‌ ಯಾತ್ರೆಗೆ ತಡೆ | ಪೊಲೀಸರ ವಿರುದ್ಧ ಹರಿಹಾಯ್ದ ಕಾಂಗ್ರೆಸ್‌ ಕಾರ್ಕರ್ತರು, ಕೆಲ ಕಾಲ ಸೃಷ್ಟಿಯಾದ ಉದ್ವಿಗ್ನತೆ ಸ್ಥಿತಿ

ಜನಪ್ರತಿನಿಧಿ ವಾರ್ತೆ (ಗುವಾಹಟಿ) : ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಪ್ರಮುಖ ಮಾರ್ಗಗಳ ಮೂಲಕ ನಗರ ಪ್ರವೇಶಿಸಲು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಇಂದು(ಮಂಗಳವಾರ) ಗುವಾಹಟಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆದ ಕಾರಂ ಕೆಲ ಕಾಲ ಉದ್ವಿಗ್ನತೆ ಸ್ಥಿತಿ ಉಂಟಾಗಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರವು ರಾಹುಲ್‌ ಗಾಂಧಿ ನೇತೃತ್ವದ ಯಾತ್ರೆಯನ್ನು ನಗರದಿಂದ ದೂರವಿರಿಸಿ ಬದಲಾಗಿ ಗುವಾಹಟಿ ಬೈಪಾಸ್ ಅನ್ನು ಬಳಸಲು ನಿರ್ದೇಶಿಸಿದ ಹಿನ್ನೆಲೆಯಲ್ಲಿ ಈ ಮುಖಾಮುಖಿ ಸಂಭವಿಸಿದೆ. ಪೊಲೀಸರು ಯಾತ್ರೆಯನ್ನು ನಗರಕ್ಕೆ ಪ್ರವೇಶಿಸದಂತೆ ತಡೆದರು, ಈ ವಿಚಾರಕ್ಕೆ ಸಿಡಿದೆದ್ದ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಗೆ ಮುಂದಾದರು. ಈ ನಡುವೆ ಪೊಲೀಸರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಘೆರ್ಷಣೆ ಉಂಟಾಯಿತು ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಪೊಲೀಸ್ ಸಿಬ್ಬಂದಿಯೊಂದಿಗೆ  ಕಾಂಗ್ರೆಸ್‌ ಪಕ್ಷದ ಧ್ವಜ ಹಿಡಿದ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯನ್ನು ಕಾಣಬಹುದಾಗಿದೆ ಮತ್ತು ರಾಹುಲ್ ಗಾಂಧಿ ದೂರದಿಂದ ನೋಡುತ್ತಿರುವುದನ್ನು ಗಮನಿಸಬಹುದಾಗಿದೆ. ಕಾರ್ಯಕರ್ತರಯ ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿರುವುದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಮಾಡಿದ ವಿಡೀಯೋ ವರದಿಗಳಲ್ಲಿ ಕಾಣಬಹುದಾಗಿದೆ.

ಘಟನೆಯ ಹಿನ್ನೆಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, “ಬಜರಂಗದಳ ಮತ್ತು ಜೆಪಿ ನಡ್ಡಾ ಅವರ ರ್ಯಾಲಿಗಳನ್ನು ಇದೇ ಮಾರ್ಗವಾಗಿ ಕೊಂಡೊಯ್ಯಲಾಯಿತು, ಆದರೆ ಅವರು ನಮ್ಮನ್ನು ತಡೆಯುತ್ತಿದ್ದಾರೆ, ನಾವು ಕಾಂಗ್ರೆಸ್ ಕಾರ್ಯಕರ್ತರು, ನಾವು ಪ್ರಬಲರು, ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ ಆದರೆ ಒಡೆಯುವುದಿಲ್ಲ. ಕಾನೂನಿಗೆ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಹೇಳಿದರು.”

ಯಾತ್ರೆಯು ಕೇಂದ್ರ ಗುವಾಹಟಿಯ ಮೂಲಕ ಹಾದುಹೋಗಲು ಕಾಂಗ್ರೆಸ್ ಯೋಜಿಸಿತ್ತು, ಆದರೆ ಸಂಭಾವ್ಯ ಟ್ರಾಫಿಕ್ ಅಡೆತಡೆಗಳು ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಕಾರಣದಿಂದಾಗಿ ಬದಲಿಮಾರ್ಗವನ್ನು ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವದಿಯಾಗಿವೆ. ಈ ನಿರ್ಧಾರವು ನಗರದ ಪ್ರವೇಶ ಕೇಂದ್ರವಾದ ಖಾನಪಾರಾ ಕ್ರಾಸಿಂಗ್‌ನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ ಮಾಡಲಾಗಿತ್ತು. ರಾಹುಲ್‌ ನೇತೃತ್ವದ ಯಾತ್ರೆ ಅಲ್ಲಿ ಪೊಲೀಸರು ತಡೆದರು. ಈ ಕಾರಣಕ್ಕೆ ಆಕ್ರೋಶಗೊಂಡ ಕಾಂಗ್ರೆಸ್‌ ಕಾರ್ಯಕರ್ತರು ಪೊಲೀಸರ ವಿರುದ್ಧ ಹರಿಹಾಯ್ದ ಘಟನೆಯೂ ನಡೆಯಿತು.

ಇನ್ನು, ಅಸ್ಸಾಂ ಸರ್ಕಾರವು ಯಾತ್ರೆಗೆ ಅನಗತ್ಯ ಅಡೆತಡೆ ಸೃಷ್ಟಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!